September 8, 2024

ಪಿಳ್ಳೇನಹಳ್ಳಿ ಗ್ರಾಮದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆ

0
ಪಿಳ್ಳೇನಹಳ್ಳಿ ಗ್ರಾಮದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆ

ಪಿಳ್ಳೇನಹಳ್ಳಿ ಗ್ರಾಮದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆ

ಚಿಕ್ಕಮಗಳೂರು: ಮಾಡಬೇಕೆಂಬ ಛಲವಿದ್ದರೆ ಎಲ್ಲವೂ ಸಾಧ್ಯ. ಈ ಇಚ್ಛಾಶಕ್ತಿಯಿಂದ ಗ್ರಾಮ ಸೌಧ ನಿರ್ಮಾಣವಾಗಿದೆ ಎಂದು ಶಾಸಕ ಹೆಚ್ ಡಿ ತಮ್ಮಯ್ಯ ಹೇಳಿದರು.

ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣವಾದ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ಅಧಿಕಾರವಿದ್ದಾಗ ಗ್ರಾಮಕ್ಕೇನಾದರೂ ಒಳ್ಳೆಯದನ್ನು ಮಾಡಬೇಕು.

ರಾಜೀವಗಾಂಧಿ ಪ್ರಧಾನ ಮಂತ್ರಿಯಾದಾಗ ಅಧಿಕಾರ ವಿಕೇಂದ್ರಿಕರಣವಾಗಿ ಗ್ರಾಮಪಂಚಾಯಿತಿಗಳಿಗೆ ಹೆಚ್ಚಿನ ಮಾನ್ಯತೆ ದೊರೆಯಿತು. ಅಂದಿನಿಂದ ಇಂದಿನವರೆಗೆ ಗ್ರಾಪಂ.ಗಳಿಗೆ ಕಾರ್ಯನಿರ್ವಹಿಸಲು ಉತ್ತಮ ಕಟ್ಟಡಗಳಾಗಬೇಕೆಂದು ನರೇಗಾ ಯೋಜನೆಯಡಿ ಇಂತಹ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲು ಸಹಕಾರವಾಗಿದೆ. ಆದರೆ ನಿರ್ಮಿಸುವುದು ದೊಡ್ಡದಲ್ಲ, ಅದನ್ನು ನಿರ್ವಹಿಸುವುದು ಮುಖ್ಯ. ಬಂದ ಸಾರ್ವಜನಿಕರಿಗೆ ಅಲೆದಾಡಿಸದೆ ಕೆಲಸವನ್ನು ಮಾಡಿಕೊಡಬೇಕು. ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣ ಬೇಡ. ನಮ್ಮ ಜಿಲ್ಲೆಗೆ ಬಂದ ೨೫ ಕೋಟಿ ಅನುದಾನದಲ್ಲಿ ಒಂದು ಕೋಟಿ ಹಣವನ್ನು ಪಿಳ್ಳೇನಹಳ್ಳಿ ಗ್ರಾಪಂ.ಗೆ ಕೊಟ್ಟಿರುತ್ತೇನೆ.

ಆಡಳಿತದಲ್ಲಿ ಚುರುಕು ಮುಟ್ಟಿಸಲು ಜುಲೈ ನಿಂದ ಗ್ರಾಪಂ.ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ನಡೆಸುತ್ತೇವೆ. ಪಿಳ್ಳೇನಹಳ್ಳಿ ಗ್ರಾಪಂ.ಕಟ್ಟಡ ಮಾದರಿಯಾಗಿ ನಿರ್ಮಾಣವಾಗಿದೆ. ಇದಕ್ಕೆ ಕೈಜೋಡಿಸಿದ ಗ್ರಾಪಂ.ನ ಅಧ್ಯಕ್ಷ ಮತ್ತು ಸದಸ್ಯರೆಲ್ಲರಿಗೂ ಅಭಿನಂದಿಸಿದರು.

ಪ್ರಾಸ್ತಾವಿಕವಾಗಿ ತಾಪಂ.ಇಒ ಸಿ ಆರ್ ಪ್ರವೀಣ್ ಮಾತನಾಡಿ, ಸುಮಾರು ೩೫ ಲಕ್ಷ ರೂ . ವೆಚ್ಚದಲ್ಲಿ ನರೇಗಾ ಯೋಜನೆಯಡಿ ತುಂಬಾ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಈ ಸೌಧ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯಿಂದ ನಿರ್ಮಾಣವಾಗಿದೆ ಎಂದರು.

ಗ್ರಾಪಂ. ಅಧ್ಯಕ್ಷ ಪಿ ಎನ್ ರಮೇಶ್ ಮಾತನಾಡಿ, ಪಿಳ್ಳೇನಹಳ್ಳಿ ಗ್ರಾಪಂ.ನ ವ್ಯಾಪ್ತಿಯಲ್ಲಿ ನೀರು, ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಿದ್ದು , ಇನ್ನು ಮಾಡುವ ಸಾಕಷ್ಟು ಕೆಲಸಗಳಿವೆ. ಈ ನೂತನ ಕಟ್ಟಡದಿಂದ ಸಾರ್ವಜನಿಕರಿಗೆ ಶೌಚಾಲಯದಿಂದ ಹಿಡಿದು ಕುಡಿಯುವ ನೀರಿನವರೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ನಿರ್ಮಾಣಕ್ಕೆ ಗ್ರಾಪಂ.ನ ಎಲ್ಲಾ ಸದಸ್ಯರು , ಜನಪ್ರತಿನಿಧಿಗಳು , ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಹೆಚ್ಚಿನದಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ.ಉಪಾಧ್ಯಕ್ಷೆ ಶಾರದಮ್ಮ, ವಿಎಸ್ಸೆಸ್ಸೆನ್ ಅಧ್ಯಕ್ಷ ಮಹೇಂದ್ರ, ಹಾಲು ಒಕ್ಕೂಟದ ಅಧ್ಯಕ್ಷ ಶಶಿಧರ್ ಹಾಗೂ ಗ್ರಾಪಂ.ನ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

Inauguration of Rajiv Gandhi Service Center at Pillenahalli village

About Author

Leave a Reply

Your email address will not be published. Required fields are marked *

You may have missed