September 16, 2024

ತುರ್ತು ಪರಿಸ್ಥಿತಿ ಕರಾಳದಿನ – ಬಿಜೆಪಿ ಕಾರ್ಯಕರ್ತರುಗಳ ಬಂಧನ

0
ತುರ್ತು ಪರಿಸ್ಥಿತಿ ಕರಾಳದಿನ - ಬಿಜೆಪಿ ಕಾರ್ಯಕರ್ತರುಗಳ ಬಂಧನ

ತುರ್ತು ಪರಿಸ್ಥಿತಿ ಕರಾಳದಿನ - ಬಿಜೆಪಿ ಕಾರ್ಯಕರ್ತರುಗಳ ಬಂಧನ

ಚಿಕ್ಕಮಗಳೂರು: ತುರ್ತು ಪರಿಸ್ಥಿತಿ ಕರಾಳದಿನ ವಿರೋಧಿಸಿ ಜಿಲ್ಲಾ ಬಿಜೆಪಿ ನಗರ ಘಟಕದ ವತಿಯಿಂದ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸಲು ಕಾರ್ಯಕರ್ತರು ಮುಂದಾದ ವೇಳೆ ಮಂಗಳವಾರ ಪೊಲೀಸ್ ಅಧಿಕಾರಿಗಳು ಬಂಧಿಸಿ ಕರೆದೊಯ್ದುರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅಧ್ಯಕ್ಷತೆಯಲ್ಲಿ ಪೋಸ್ಟರ್ ಅಂ ಟಿಸುವ ಅಭಿಯಾನಕ್ಕೆ ಪಾಂಚಜನ್ಯ ಕಚೇರಿಯಿಂದ ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಕಾಂಗ್ರೆಸ್ ಕಚೇ ರಿಗೆ ಮುತ್ತಿಗೆ ಹಾಕಲು ಧಾವಿಸುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಅರ್ಧದಲ್ಲೇ ತಡೆದು ೨೫ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದರು.

ಬಳಿಕ ಮಾತನಾಡಿದ ಕಲ್ಮರುಡಪ್ಪ ತುರ್ತುಪರಿಸ್ಥಿತಿ ಘೋಷಣೆಗೊಂಡು ಐವತ್ತು ವರ್ಷಗಳು ಪೂರೈ ಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಡೆಯನ್ನು ವಿರೊಧಿಸಿ ಪೋಸ್ಟರ್ ಅಂಟಿಸುವ ಕಾರ್ಯಕ್ಕೆ ಮುಂದಾ ಗಿದ್ದು ಚಿಕ್ಕಮಗಳೂರು ಸೇರಿದಂತೆ ರಾಜ್ಯಾಧ್ಯಂತ ಪೋಸ್ಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

೧೯೭೫ ರಂದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ಧ ವೇಳೆ ಇಂದಿ ರಾಗಾಂಧಿ ತುರ್ತು ಪರಿಸ್ಥಿತಿ ಹೇರಿ ಪ್ರತಿ ಪಕ್ಷಗಳ ಸಾವಿರಾರು ನಾಯಕರನ್ನು ಜೈಲಿಗಟ್ಟಿದರು. ಪತ್ರಿಕಾ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅತಿ ಹೆಚ್ಚು ಬಾರೀ ತಿದ್ದುಪಡಿಗೊಳಿಸಿ ಇತಿಹಾಸದಲ್ಲಿ ಕರಾಳದಿನವಾಗಿ ಉಳಿದಿದೆ ಎಂದರು.

ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸಂವಿಧಾನ ಕ್ಕೆ ಮಾಡಿದ ದೊಡ್ಡ ದ್ರೋಹವಾಗಿದೆ. ಇಂದಿರಾಗಾಂಧಿ ಸ್ವಾರ್ಥಕ್ಕಾಗಿ ಸಂವಿಧಾನವನ್ನು ದುರ್ಬಳಕೆ ಮಾಡಿ ಕೊಂಡಿತ್ತು ಎಂದ ಅವರು ಪ್ರಜಾಪ್ರಭುತ್ವವಾದಿ ಹೋರಾಟಗಾರರನ್ನು, ವಿರೋಧ ಪಕ್ಷದ ರಾಜಕೀಯ ದುರೀಣನ್ನು ಸೆರೆವಾಸ ಅನುಭವಂತೆ ಮಾಡಿದ್ದರು ಎಂದರು.

ರಾಷ್ಟ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಂಬೇಡ್ಕರ್ ಆಶಯಗಳಿಗೆ ತಕ್ಕಂತೆ ನೀತಿ, ನಿಯಮಗಳ ನ್ನು ರೂಪಿಸಿತ್ತು. ಸಂವಿಧಾನವನ್ನು ಬಿಜೆಪಿ ತಿದ್ದುಪಡಿ ಮಾಡುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದ ವಿಷಯ. ಸುಮಾರು ೯೦ಕ್ಕೂ ಹೆಚ್ಚು ಭಾರಿ ಕಾಂಗ್ರೆಸ್ ಸಂವಿಧಾನವನ್ನು ಬೇಕಾದಂತೆ ತಿದ್ದುಪಡಿಗೊಳಿಸಿ ಇದೀಗ ಅಂಬೇಡ್ಕರ್ ಪರವಾಗಿ ಮಾತನಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ನರೇಂದ್ರ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್, ಪ್ರಧಾನ ಕಾರ್ಯದರ್ಶಿ ಮಧು, ಜಿಲ್ಲಾ ಯುವಮೋರ್ಚಾ ಉಪಾ ಧ್ಯಕ್ಷ ಕಾರ್ತೀಕ್, ಪ್ರಧಾನ ಕಾರ್ಯದರ್ಶಿ ಸಚ್ಚಿನ್, ನಗರ ಯುವಮೋರ್ಚಾ ಅಧ್ಯಕ್ಷ ಜೀವನ್, ಪ್ರಧಾನ ಕಾರ್ಯದರ್ಶಿ ಗೌತಮ್, ಮುಖಂಡರುಗಳಾದ ರೇವನಾಥ್ ಮತ್ತಿತರರು ಹಾಜರಿದ್ದರು.

Emergency dark day – Arrest of BJP workers

About Author

Leave a Reply

Your email address will not be published. Required fields are marked *