September 16, 2024

ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಗಳಿಂದ ದೂರವಿರಿ

0
ಮಧ್ಯ ವ್ಯಸನ ಮತ್ತು ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ

ಮಧ್ಯ ವ್ಯಸನ ಮತ್ತು ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮ

ಚಿಕ್ಕಮಗಳೂರು: ಯೌವನದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಗಳಿಗೆ ಬಲಿಯಾದರೆ ಬದುಕು ದುಸ್ತರವಾಗುವ ಜೊತೆಗೆ ಶಾರೀರಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.
ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಸ್ವಶಕ್ತಿ ವ್ಯಸನ ಮುಕ್ತ ಕೇಂದ್ರ ಹಾಗೂ ಐಡಿಎಸ್‌ಜಿ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಧ್ಯ ವ್ಯಸನ ಮತ್ತು ಮಾದಕ ವಸ್ತು ವಿರೋಧಿ ದಿನ ಕಾರ್ಯಕ್ರಮವನ್ನು ಇಂದು  ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯಪಾನ, ಬೀಡಿ, ಸಿಗರೇಟ್, ಕೊಕೆನ್ ತಂಬಾಕು ಸೇರಿದಂತೆ ಇನ್ನಿತರ ಚಟಗಳಿಗೆ ಒಮ್ಮೆ ಬಲಿ ಯಾದರೆ ಕೆಲವು ಕ್ಷಣಗಳಿಗೆ ಮಾತ್ರ ಅಮಲಿನ ನಶೆಯಲ್ಲಿ ತೇಲಿಸುತ್ತದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕೇವಲ ಕಾಲೇಜುಗಳ ಸಮೀಪ ಮಾದಕ ವಸ್ತುಗಳ ಮಾರಾಟವಿತ್ತು. ಆದರೆ ಇದೀಗ ಪ್ರೌಢಶಾಲಾ ಆವರಣದ ಸಮೀಪ ವ್ಯಾಪಿಸುತ್ತಿರುವುದು ಆತಂಕದ ಸಂಗತಿ, ಹಾಗಾಗಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಅಥವಾ ಆಪ್ತರು ಈ ಚಟದಿಂದ ಬಲಿಯಾಗದಂತೆ ನಿಗಾವಹಿಸಬೇಕು. ಸಹಾಯವಾಣಿಗೆ ಕರೆ ಮಾಡಿ ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು
ಹಿಂದಿನ ಕಾಲಘಟ್ಟದಲ್ಲಿ ಕೇವಲ ಬೀಡಿಗಳ ಸೇವನೆ ಅಧಿಕವಾಗಿತ್ತು ಆದರೆ ಕಾಲ ಬದಲಾದಂತೆ ಸಿಗ ರೇಟ್, ಗಾಂಜಾ ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಮದ್ಯಪಾನ ಕೇವಲ ಬಾರ್‌ಗಳಲ್ಲಿ ಮಾತ್ರ ಸೀಮಿತವಾಗಿದೆ, ಆದರೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮಾರಾಟದ ಪರಿಣಾಮ ಯುವಕರು ವ್ಯಸನರಾಗುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಯುವಪೀಳಿಗೆ ಸ್ನೇಹಿತರ ಜೊತೆಗೂಡಿ ಮೋಜು ಮಸ್ತಿಗಾಗಿ ಮದ್ಯವ್ಯಸನ ಹಾಗೂ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಒಮ್ಮೆ ಅಮಲಿನ ಚಟದಿಂದ ಬಲಿಯಾದಲ್ಲಿ ಜೀವನ ಸುಧಾರಣೆ ಬಹಳ? ವಿಪರೀತವಾಗುವ ಜೊತೆಗೆ ಅಮಲಿನ ಗುಂಗಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗಿ ಸೆರವಾಸ ಅನು ಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃ?ಮೂರ್ತಿ ಮಾತನಾಡಿ ಪ್ರಸ್ತುತ ದೊಡ್ಡ ಮಟ್ಟದಲ್ಲಿ ಅಮಲಿನ ಪದಾರ್ಥಗಳು ಮಾರಾಟವಾಗುತ್ತಿವೆ. ಆದರೆ ಚಿಕ್ಕಮಗಳೂರು  ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಈ ರೀತಿಯ ಪ್ರಕರಣಗಳು ಕಂಡುಬರುತ್ತಿದೆ ಹೀಗಾಗಿ ವಿದ್ಯಾರ್ಥಿಗಳು ನಶೆ ಭರಿಸುವ ವಸ್ತುಗಳಿಂದ ದೂರವಿರುವ ಮೂಲಕ ಹೆಚ್ಚು ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಮಾದಕ ವಸ್ತುಗಳ ಮಾರಾಟವು ಮೊದಲು ಇಂಜಿನಿಯರಿಂಗ್ ಕಾಲೇಜುಗಳ ಸಮೀಪ ಹೆಚ್ಚಿತ್ತು. ಇದೀಗ ಪಿಯು ಕಾಲೇಜುಗಳ ಸಮೀಪವು ಕಾಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ, ಹೀಗಾಗಿ ಪ್ರತಿ ಕಾಲೇಜುಗಳ ಸಮೀಪ ಮಾರುವೇಶದಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಿದ್ದು ಮಾರಾಟಗಾರರು ಕಂಡು ಬಂದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದರು. ಆಪ್ತ ಸ್ನೇಹಿತರು ವ್ಯಸನದ ದುಶ್ಚಟಗಳಿಂದ ಬಲಿಯಾಗುವುದು ತಪ್ಪಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಒಂದು ವೇಳೆ ಮಾರಾಟ ಅಥವಾ ಸಾಗಾಣಿಕೆ ಕಂಡುಬಂದಲ್ಲಿ ಸಹಾಯವಾಣಿ ೧೧೨ ಅಥವಾ ೧೯೫೦ ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಮಾಹಿತಿ ನೀಡುವವರ ವ್ಯಕ್ತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್‌ಕುಮಾರ್ ಮಾತನಾಡಿ ಅತಿಯಾದ ಮದ್ಯವ್ಯಸನದಿಂದ ಜಿಲ್ಲಾ ಸ್ಪತ್ರೆಯಲ್ಲಿ ಪ್ರತಿ ನಿತ್ಯವು ಕನಿಷ್ಠ  ಇಬ್ಬರು ಚಿಕಿತ್ಸೆಗೆ ಬರುತ್ತಾರೆ, ಅದರಿಂದಾಗಿ ಇಡೀ ಕುಟುಂಬವೇ ಬೀದಿಗೆ ಬೀಳುವ ಸ್ಥಿತಿಯಿದೆ. ಹಾಗಾಗಿ ವಿದ್ಯಾರ್ಥಿಗಳು ಪ್ರಾರಂಭದಲ್ಲೇ ಇಂತಹ ದುಶ್ಚಟಗಳಿಗೆ ಬಲಿಯಾದರೆ ಪಾಲಕರಿಗೆ ಮಕ್ಕಳು ನುಂಗಲಾರದ ತುತ್ತಾಗುತ್ತಾರೆ ಎಂದು ಕಿವಿಮಾತು ಹೇಳಿದರು.
ಐಡಿಎಸ್‌ಜಿ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಸಿ ಚಾಂದಿನಿ, ನರ ರೋಗ ತಜ್ಞ ಡಾ.ಕೆ.ಆರ್. ವೆಂಕಟೇಶ್, ವಿಕಲಚೇತನ ಕಲ್ಯಾಣಾಧಿಕಾರಿ ಪೃಥ್ವಿಜಿತ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜಾಥಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಚಾಲನೆ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು.
Students should stay away from drug addiction

About Author

Leave a Reply

Your email address will not be published. Required fields are marked *