September 20, 2024

ಓದುವ ಹವ್ಯಾಸ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ

0
ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕುಂಭಕ ಓದುಗ ಬಳಗ ಏರ್ಪಡಿಸಿದ್ದ ಪುಸ್ತಕ ಓದು

ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕುಂಭಕ ಓದುಗ ಬಳಗ ಏರ್ಪಡಿಸಿದ್ದ ಪುಸ್ತಕ ಓದು

ಚಿಕ್ಕಮಗಳೂರು: ಓದುವ ಹವ್ಯಾಸ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ನಿವೃತ್ತ ಡಯಟ್ ಉಪ ಪ್ರಾಂಶುಪಾಲ ಬಿ.ಎಲ್.ಶರಶ್ಚಂದ್ರ ಹೇಳಿದರು,

ತಾಲೂಕಿನ ಕುಂದೂರು ಗ್ರಾಮದ ಬನವಾಸಿಯಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕುಂಭಕ ಓದುಗ ಬಳಗ ಏರ್ಪಡಿಸಿದ್ದ ಪುಸ್ತಕ ಓದು. ಉಪನ್ಯಾಸ. ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಓದುವ ಹವ್ಯಾಸ ನಮ್ಮನ್ನು ಸುಸಂಸ್ಕೃತ ರನ್ನಾಗಿ ಮಾಡುವುದರ ಜೊತೆಗೆ ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸುತ್ತದೆ ಸಮಾಜದಲ್ಲಿ ಗೌರವ. ಸ್ಥಾನಮಾನವನ್ನು ತಂದುಕೊಡುತ್ತದೆ ಎಂದರು,

ಪುಸ್ತಕದಿಂದ ಮಸ್ತಕ ಬೆಳೆಯುತ್ತದೆ ಎಂದ ಅವರು ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಪ್ರತಿಯೊಬ್ಬರೂ ತಮ್ಮ ಮನೆಯ ಕಪಾಟಿನಲ್ಲಿ ಕನಿಷ್ಠ ೧೦ ಪುಸ್ತಕವನ್ನಾದರೂ ಇಡಬೇಕು. ಪ್ರತಿ ದಿನ ಒಂದು ಪುಟವನ್ನಾದರೂ ಓದಬೇಕು ಎಂದು ಕಿವಿ ಮಾತು ಹೇಳಿದರು,

ಓದುಗರ ಸಂಖ್ಯೆ ಹೆಚ್ಚಾದಂತೆ ಆರೋಗ್ಯವಂತ. ಸುಸಂಸ್ಕೃತ ಸಮಾಜದ ನಿರ್ಮಾಣವಾಗುತ್ತದೆ ಪುಸ್ತಕ ಓದು ಉಪನ್ಯಾಸ ಚರ್ಚೆ ಸಾಹಿತ್ಯದ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಅತ್ಯಂತ ಸಂತಸದ ವಿಷಯ ಇಂತಹ ಕಾರ್ಯಕ್ರಮಗಳು ಎಲ್ಲಾ ಗ್ರಾಮಗಳಲ್ಲೂ ನಡೆದರೆ ನಮ್ಮ ಭಾಷೆ. ಸಂಸ್ಕೃತಿ. ಸಾಹಿತ್ಯ ಬೆಳೆಯುತ್ತದೆ ಎಂದು ತಿಳಿಸಿದರು,

ಲೇಖಕ ಹಿರೇಮಗಳೂರು ಪುಟ್ಟಸ್ವಾಮಿ ಅವರ ಸ್ವತಂತ್ರ ಭಾರತದಲ್ಲೊಂದು ದಂಡಿಯಾತ್ರೆ. ಪುಸ್ತಕದ ಕುರಿತು ಉಪನ್ಯಾಸ ನೀಡಿದ ಗೆಂಡೆಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಎಂ. ಪ್ರದೀಪ್ ದಂಡಿಯಾತ್ರೆಯ ಅಮೂಲಾಗ್ರ ಚಿತ್ರಣವನ್ನು ಸಭಿಕರೆದುರು ಸಮರ್ಥವಾಗಿ ತೆರೆದಿಟ್ಟರು,

ಲೇಖಕ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ತಮ್ಮ ಎದುರೇ ತಮ್ಮ ಕೃತಿಯ ಬಗ್ಗೆ ಉಪನ್ಯಾಸ. ಚರ್ಚೆ ನಡೆದಿರುವುದು ಅದೂ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವುದು ತಮಗೆ ಅತ್ಯಂತ ಸಂತಸ. ಸಾರ್ಥಕತೆ ಮತ್ತು ಹೆಮ್ಮೆ ತಂದಿದೆ ಎಂದರು,

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಭಕ ಓದುಗ ಬಳಗದ ಅಧ್ಯಕ್ಷ ಕುಂದೂರು ಅಶೋಕ್ ಸಮಾಜದಲ್ಲಿ ಎಲೆ ಮರೆಯ ಕಾಯಿಯಂತೆ ಸಾಹಿತ್ಯ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸುವುದರ ಜೊತೆಗೆ ಗ್ರಾಮೀಣ ಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕ ಓದು. ಉಪನ್ಯಾಸ. ಚರ್ಚೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು,

ಲೇಖಕ ಹಿರೇಮಗಳೂರು ಪುಟ್ಟಸ್ವಾಮಿ ಅವರನ್ನು ಕುಂಭಕ ಓದುಗ ಬಳಗದಿಂದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶಿಕ್ಷಕ ಬಿ.ಡಿ. ಚಂದ್ರಶೆಟ್ಟಿ ತಂಡದಿಂದ ಗೀತ ಗಾಯನ ನಡೆಯಿತು,

ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಪೋಷಕ ಕೆ.ಕೆ. ಜಗನ್ನಾಥ್ ಶಿಕ್ಷಕ ಬಿ.ಸಿ. ಶಿವನಂಜೇಗೌಡ ಎ.ಆರ್. ಪರಮೇಶ್ವರಪ್ಪ ಉಪಸ್ಥಿತರಿದ್ದರು.

Reading habit shapes a person’s personality

About Author

Leave a Reply

Your email address will not be published. Required fields are marked *