September 19, 2024

ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ಮನೋಜ್ ಸಾಲ್ದಾನಗೆ ಸನ್ಮಾನ

0
ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ಮನೋಜ್ ಸಾಲ್ದಾನಗೆ ಸನ್ಮಾನ

ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ಮನೋಜ್ ಸಾಲ್ದಾನಗೆ ಸನ್ಮಾನ

ಚಿಕ್ಕಮಗಳೂರು:  ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ಅತ್ಯುತ್ತಮ ವೈದ್ಯ ಪ್ರಶಸ್ತಿ ಸ್ವೀಕರಿಸಿದ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ|| ಮನೋಜ್ ಸಾಲ್ದಾನ ಅವರನ್ನು ಮಂಗಳವಾರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಹಾಗೂ ಗ್ರಾಮ ಸ್ಥರುಗಳು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ವೈದ್ಯಕೀಯ ವೃತ್ತಿ ಜಾತ್ಯಾತೀತ ವಾದದು. ಜೀವರಾಶಿಯ ಪ್ರಾಣವನ್ನು ಸಂರಕ್ಷಿಸುವ ಕ್ಷೇತ್ರ, ಕಾಯಕದಲ್ಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಿರಂತರವಾಗಿ ಮುನ್ನಡೆಯಬೇಕು ಎಂದು ಶುಭಕೋರಿದರು.

ಇಡೀ ಪ್ರಪಂಚವೇ ಕೊರೋನಾ ಅಥವಾ ಮಾರಕ ಕಾಯಿಲೆಗಳಿಗೆ ಬಳಲುತ್ತಿರುವ ಸಂದರ್ಭದಲ್ಲಿ ವೈದ್ಯರು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ತಿಂಗಳುಗಟ್ಟಲೇ ಕುಟುಂಬವನ್ನು ತೊರೆದು ಜನಸಾಮಾನ್ಯರ ಬದುಕಿಗಾಗಿ ಹೋರಾಡಿದವರು ಎಂದು ಬಣ್ಣಿಸಿದರು.

ಸಹಜವಾಗಿ ಮನುಷ್ಯನ ಆರೋಗ್ಯವು ಹದಗೆಟ್ಟ ಕೂಡಲೇ ವೈದ್ಯರ ಬಳಿಗೆ ತೆರಳುವರು. ಸಹನೆ, ತಾಳ್ಮೆ ಯಿಂದ ರೋಗಿಗಳನ್ನು ಆರೈಸುವ ಕೆಲಸ ಸಾಮಾನ್ಯವಲ್ಲ. ತುರ್ತು ಪರಿಸ್ಥಿತಿ ಅಥವಾ ಇನ್ಯಾವುದೇ ಪ್ರಕರಣ ಗಳಲ್ಲಿ ರೋಗಿಗಳನ್ನು ಗುಣಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವ ವೈದ್ಯರ ಸೇವೆ ಅವಿಸ್ಮರಣೀಯ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಎಸ್.ಸಿ. ಘಟಕದ ಕಾರ್ಯದರ್ಶಿ ಸೀತರಾಮಭರಣ್ಯ ಮಾತನಾಡಿ ವೈದ್ಯರ ದಿನಾಚರ ಣೆ ಪ್ರಯುಕ್ತ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ಅತ್ಯುತ್ತಮ ವೈದ್ಯರೆಂಬ ಡಾ|| ಮನೋಜ್ ಅವರನ್ನು ಗೌರವಿಸಿರುವುದು ಜಿಲ್ಲೆಗೆ ಕೀರ್ತಿ ತಂದಿದೆ. ಜೊತೆಗೆ ಹಿರೇಮಗಳೂರು ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಸ್ಥರಿಗೆ ಇನ್ನಷ್ಟು ಖುಷಿ ನೀಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ವಕ್ತಾರ ಎಚ್.ಎಸ್ ಪುಟ್ಟಸ್ವಾಮಿ, ಗ್ರಾಮಾಂತರ ಸಹ ವಕ್ತರ ಹಂಪಯ್ಯ, ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ನಗರ ಮಂಡಲ ಉಪಾಧ್ಯಕ್ಷ ಬಿ.ರೇವನಾಥ್, ಮಾಜಿ ಸಿ.ಡಿ.ಎ ಸದಸ್ಯ ರಾಜಕುಮಾರ, ನಗರ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಂಜಯ್, ನಗರ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಬೂತ್ ಅಧ್ಯಕ್ಷ ನಂದನ್ ಕುಮಾರ್, ವಕೀಲ ಶಿವಣ್ಣ, ಮುಖಂಡರುಗಳಾದ ಅರುಣ್, ಶಿವಕುಮಾರ್, ರವಿ ಕುಮಾರ್, ಸುರೇಶ್, ಪ್ರಕಾಶ್, ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.

Honor to Dr. Manoj Saldana Medical Officer of Hiremagaluru Primary Health Center

About Author

Leave a Reply

Your email address will not be published. Required fields are marked *

You may have missed