September 19, 2024
ಇಂದಾವರದ ಕಸ ವಿಲೇವಾರಿ ತ್ಯಾಜ್ಯ ಘಟಕದಲ್ಲಿ ತಯಾರಿಸಲಾಗಿದ್ದ ಸಾವಯವ ಗೊಬ್ಬರವನ್ನು ಹರಾಜು ಪ್ರಕ್ರಿಯೆ ನ

ಇಂದಾವರದ ಕಸ ವಿಲೇವಾರಿ ತ್ಯಾಜ್ಯ ಘಟಕದಲ್ಲಿ ತಯಾರಿಸಲಾಗಿದ್ದ ಸಾವಯವ ಗೊಬ್ಬರವನ್ನು ಹರಾಜು ಪ್ರಕ್ರಿಯೆ ನ

ಚಿಕ್ಕಮಗಳೂರು: ನಗರಸಭೆ ವತಿಯಿಂದ ಪ್ರಥಮ ಬಾರಿಗೆ ದಿನನಿತ್ಯ ಸಂಗ್ರಹವಾಗುವ ಹಸಿ ಕಸ ಒಣ ಕಸ ವಿಂಗಡಿಸಿ, ಸಾವಯವ ಗೊಬ್ಬರ ತಯಾರಿಸಿ ಸುಮಾರು ೧.೫೦ ಲಕ್ಷ ರೂ. ಬೆಲೆಯ ೭೫ ಟನ್ ಗೊಬ್ಬರವನ್ನು ರೈತರಿಗೆ ನೀಡಲಾಗಿದೆ ಎಂದು ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ಇಂದಾವರದ ಕಸ ವಿಲೇವಾರಿ ತ್ಯಾಜ್ಯ ಘಟಕದಲ್ಲಿ ತಯಾರಿಸಲಾಗಿದ್ದ ಸಾವಯವ ಗೊಬ್ಬರವನ್ನು ಹರಾಜು ಪ್ರಕ್ರಿಯೆ ನಡೆಸಿ ೧.೫೦ ಲಕ್ಷ ರೂ ಆದಾಯ ನಗರಸಭೆಗೆ ಬಂದಿದೆ ಎಂದು ತಿಳಿಸಿದರು.

ಈ ಹಣವನ್ನು ನಗರದಲ್ಲಿ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು. ಈಗಾಗಲೇ ಕಸ ವಿಲೇವಾರಿಗೆ ಟೆಂಡರ್ ಕರೆಯಲಾಗಿದ್ದು, ಕಳೆದ ೧೫ ವರ್ಷಗಳಿಂದ ಸಂಗ್ರಹವಾಗಿದ್ದ ಹಳೇಯ ಕಸವನ್ನು ಸಾವಯವ ಗೊಬ್ಬರವಾಗಿ ಮಾರ್ಪಡಿಸಲು ಮಿಷನರಿಗಳ ಮೂಲಕ ಪ್ಲಾಸ್ಟಿಕ್‌ನ್ನು ಬೇರ್ಪಡಿಸಿ ಗೊಬ್ಬರ ತಯಾರಿಸಲು ಚಾಲನೆ ನೀಡಲಾಗಿದೆ ಎಂದರು.

ಕಸ ವಿಲೇವಾರಿ ಘಟಕದಲ್ಲಿ ನಗರಸಭೆಯಿಂದ ಹಸಿರೀಕರಣ ಮಾಡಲು ಉದ್ದೇಶಿಸಲಾಗಿದೆ.ಇಲ್ಲಿ ಇನ್ನೂ ಹೆಚ್ಚು ಹಣ್ಣಿನ ಮರಗಳನ್ನು ನೆಡುವ ಮೂಲಕ ನಗರಸಭೆಗೆ ಹೆಚ್ಚಿನ ಆದಾಯ ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ನಗರಸಭೆಯಿಂದ ೧ ಕೆ.ಜಿ ಸಾವಯವ ಗೊಬ್ಬರವನ್ನು ೨ ರೂ.ಗೆ ನಿಗದಿ ಮಾಡಿ ರೈತರಿಗೆ ನೀಡಲಾಗುತ್ತಿದೆ. ಉತ್ತಮವಾದ ಸಾವಯವ ಗೊಬ್ಬರ ಇದಾಗಿದ್ದು, ಈಗಾಗಲೇ ಕಾಫಿ ಬೆಳೆಗಾರರು ಹೆಚ್ಚಿನ ಗೊಬ್ಬರ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಗೊಬ್ಬರ ಉತ್ಪಾದಿಸಿ ರೈತರಿಗೆ ನೀಡಲು ನಿರ್ಧರಿಸಲಾಗಿದೆ ಎಂದರು.

ನಮ್ಮ ಈ ಕಾರ್ಯಕ್ಕೆ ನಗರದ ನಾಗರೀಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಂಗಡಿಸಿ ನೀಡಬೇಕು ಇದರಿಂದ ಸಂಸ್ಕರಣೆ ಮಾಡಿ, ಸಾವಯವ ಗೊಬ್ಬರ ತಯಾರಿಸಲು ಅನುಕೂಲವಾಗಲಿದ್ದು ನಗರಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ನಗರಸಭೆಯಿಂದ ೫ ಅಧಿಕಾರಿಗಳ ತಂಡವನ್ನು ರಚಿಸಿ ಪ್ಲಾಸ್ಟಿಕ್ ಮಾರಾಟ ಮಾಡುವ ವರ್ತಕರ ಅಂಗಡಿ ಮೇಲೆ ದಾಳಿ ಮಾಡಲಾಗಿದ್ದು, ಪ್ಲಾಸ್ಟಿಕ್ ಪತ್ತೆಯಾದ ವರ್ತಕರಿಗೆ ೧೦ ಸಾವಿರ ರೂ ದಂಡ ವಿಧಿಸಲಾಗಿದೆ. ನಾಳೆ ನಡೆಯುವ ದಾಳಿಯಲ್ಲಿ ಜಿಲ್ಲಾ ಪರಿಸರ ಅಧಿಕಾರಿಗಳು ನಮ್ಮೊಂದಿಗೆ ಭಾಗವಹಿಸಿ ಪ್ಲಾಸ್ಟಿಕ್ ದಾಳಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಬಳಸಬಾರದು, ಪರಿಸರ ಉಳಿಸಬೇಕು ಎಂದು ಮನವಿ ಮಾಡಿದ ಅವರು ಪ್ಲಾಸ್ಟಿಕ್ ಮಾಡಿದ ವರ್ತಕರಿಗೆ ಇಂದು ದಂಡ ವಿಧಿಸಿದ್ದು, ಮುಂದೆಯೂ ಎಚ್ಚರಗೊಳ್ಳದಿದ್ದರೆ ಪರವಾನಗಿಯನ್ನು ರದ್ದು ಮಾಡಿ ಅಂಗಡಿ ಮುಚ್ಚಿಸುತ್ತೇವೆ. ಅಗತ್ಯ ಬಿದ್ದರೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀ ಕ್ಷಕರು ಕೆ.ಎಸ್.ಈಶ್ವರಪ್ಪ, ವೆಂಕಟೇಶ್, ಬಿಡ್ಡುದಾರರಾದ ಮಾಡ್ಲ ಪ್ರಕಾಶ್, ಮಲ್ಲೇಶ್ ಮತ್ತಿತರಿದ್ದರು.

Auction of organic manure produced at Indavara waste disposal unit

About Author

Leave a Reply

Your email address will not be published. Required fields are marked *

You may have missed