September 19, 2024

ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಪ್ರಾಧಿಕಾರದ ವತಿಯಿಂದ ಮಾಹಿತಿ ಸಭೆ

0
ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಪ್ರಾಧಿಕಾರದ ವತಿಯಿಂದ ಮಾಹಿತಿ ಸಭೆ

ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಪ್ರಾಧಿಕಾರದ ವತಿಯಿಂದ ಮಾಹಿತಿ ಸಭೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ನೊಂದಾಯಿಸಿದ ಸುಮಾ ರು ೨೬.೬೦ ಲಕ್ಷ ಮಹಿಳೆಯರಿಗೆ ಆರ್ಥಿಕ ಸಬಲತೆಗಾಗಿ ಪ್ರತಿ ತಿಂಗಳು ೫೨.೫೦ ಕೋಟಿ ರೂ.ಗಳನ್ನು ಸರ್ಕಾ ರ ಖಾತೆಗೆ ಜಮಾವಣೆ ಮಾಡುತ್ತಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಪ್ರಾಧಿಕಾರದ ವತಿಯಿಂದ ಶುಕ್ರವಾರ ಮಾಹಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯಸರ್ಕಾರ ರಚನೆಗೊಂಡ ಬಳಿಕ ೨೦೨೩ರ ಆಗಸ್ಟ್ ಮಾಹೆಯಿಂದ ೨೦೨೪ರ ಮೇವರೆಗೆ ಚಿಕ್ಕಮ ಗಳೂರು, ಕಡೂರು, ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ತರೀಕೆರೆ ಅಜ್ಜಂಪುರ ಹಾಗೂ ನ.ರಾ.ಪುರ ತಾಲ್ಲೂಕಿನಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಒಟ್ಟು ೪೯೭ ಕೋಟಿ ಹಣ ಖಾತೆಗೆ ಸಂದಾಯವಾಗಿದೆ ಎಂ ದರು.

ಜಿಲ್ಲೆಯಲ್ಲಿ ಒಟ್ಟು ೨೮೦೯೩೭ ರೇಷನ್ ಕಾರ್ಡ್‌ಗಳಿವೆ. ಇವುಗಳಲ್ಲಿ ೨೬೬೩೪೩ ಮಂದಿ ಕಾರ್ಡ್‌ದಾರರು ನೋಂದಣಿ ಮಾಡಿಸಿದ್ದು ಈ ಪೈಕಿ ೨೬೦೨೫೦ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ೫೨.೫೦ ಕೋಟಿ ರೂ. ಹಣವನ್ನು ಜಮಾವಣೆ ಮಾಡಿ ಶೇ.೯೫ ರಷ್ಟು ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ಒದಗಿಸಿ ಆರ್ಥಿಕ ಸಬಲರಾಗಿಸಿದ್ದಾರೆ. ಅಲ್ಲದೇ ಸಣ್ಣಪುಟ್ಟ ಖರ್ಚು, ಮಕ್ಕಳ ವಿದ್ಯಾಭ್ಯಾಸ ಹಾಗೂ ಇನ್ನಿತರೆ ಉಳಿತಾಯಕ್ಕೆ ಕಾಂಗ್ರೆಸ್ ಸರ್ಕಾರ ಭದ್ರಬುನಾದಿ ಹಾಕಿಕೊಟ್ಟಿದೆ ಎಂದು ತಿಳಿಸಿದರು.

ಈ ನಡುವೆ ಕೆಲವು ಮಹಿಳೆಯರಿಗೆ ಖಾತೆಗೆ ಹಣ ಜಮಾವಣೆಗೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇದಕ್ಕೆ ಮೂಲ ಕಾರಣ ಮಹಿಳೆಯರ ಹೆಸರಿನಲ್ಲಿ ಜಿಎಸ್‌ಟಿ ಅಥವಾ ಐಟಿ ಹೊಂದಿರುತ್ತಾರೆ ಅಥವಾ ತೆರಿಗೆ ಪಾವತಿಸದೇ ಸ್ಥಗಿತಗೊಳಿಸಿರುವ ಕಾರಣಗಳಿಂದ ಗೃಹಲಕ್ಷ್ಮೀ ಯೋಜನೆ ಲಭ್ಯವಾಗುತ್ತಿಲ್ಲ ಎಂದು ಹೇಳಿದರು.

ಗೃಹಲಕ್ಷ್ಮೀ ಯೋಜನೆ ಪಡೆಯದ ಅನೇಕ ಮಹಿಳೆಯರು ಈ ರೀತಿಯ ಸಮಸ್ಯೆಯಿಂದ ಸಿಲುಕಿದ್ದು ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ೭೩೫ ಮಂದಿಗೆ ತಡೆಯಾಗಿತ್ತು. ಈ ವರ್ಷದಲ್ಲಿ ೩೩೨ ಮಂದಿ ನಿಂತಿದೆ. ಹೀಗಾಗಿ ಗೃಹಲಕ್ಷ್ಮೀ ವಂಚಿತರು ಜಿಎಸ್‌ಟಿ ಅಥವಾ ಐಟಿ ಪ್ರಾಧಿಕಾರದಿಂದ ಐಟಿ ಪಾವತಿದಾರರಲ್ಲ ಎಂಬ ಪ್ರಮಾಣ ಪತ್ರ ಸಿಡಿಪಿಓ ಕಚೇರಿಗೆ ತಲುಪಿಸಿದರೆ ಮುಂದಿನ ತಿಂಗಳಿಂದ ಯೋಜನೆ ಸೌಲಭ್ಯ ಪಡೆಯಬಹುದು ಎಂ ದರು.

ಅದೇ ರೀತಿ ಜಿಲ್ಲೆಯಲ್ಲಿ ದಾಖಲೆ ಪ್ರಕಾರ ೩೮೧ ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಈ ಪೈಕಿ ಜಿಲ್ಲಾಧಿಕಾರಿಯಿಂದ ಗುರುತಿನ ಚೀಟಿ ಹೊಂದಿರುವ ಫಲಾನುಭವಿಗಳು ಸಿಡಿಪಿಓ ಅರ್ಜಿ ಸಲ್ಲಿಸಿದರೆ ಗೃಹಲಕ್ಷ್ಮೀ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು.

ಅರ್ಜಿ ಸಲ್ಲಿಕೆಗೆ ಗ್ರಾಮ ಒನ್, ಸೇವಾ ಒನ್ ಕೇಂದ್ರಗಳಲ್ಲಿ ತಾಂತ್ರಿಕ ದೋಷದಿಂದ ಸಮಸ್ಯೆಯಿರುವ ಕಾರಣ ಪ್ರತಿ ಗ್ರಾ.ಪಂ.ನ ಬಾಪೂಜಿ ಕೇಂದ್ರವನ್ನು ಪ್ರಾರಂಭಿಸಿದರೆ ಸುಗಮವಾಗಲಿದೆ. ಈ ನಿರ್ಣಯಗಳನ್ನು ರಾಜ್ಯಮಟ್ಟದಲ್ಲಿ ತೀರ್ಮಾನಿಸುವ ಕಾರಣ ಅಧಿಕಾರಿ ವೃಂದ ಹಾಗೂ ಪ್ರಾಧಿಕಾರದ ಆಡಳಿತವು ರಾಜ್ಯ ಮಾಹಿತಿ ತಲುಪಿಸುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಮೀವುಲ್ಲಾ, ಹೇಮಾವತಿ, ಸದಸ್ಯ ಬಸವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಪಿ.ಲೋಕೇಶಪ್ಪ, ಅಧಿಕಾರಿಗ ಳಾದ ಎಂ.ಪಿ.ದೇವಾನಂದ್, ಪಂಚಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು.

Information meeting on behalf of State Guarantee Schemes District Administration Authority

About Author

Leave a Reply

Your email address will not be published. Required fields are marked *

You may have missed