September 19, 2024

ಕಾಫಿತೋಟ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ವಿಲ್ಲಾಗಳಿಗೆ ನಿಯಂತ್ರಣ ಹೇರಲು ವಿಶೇಷ ಸಭೆ

0
ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಚಿಕ್ಕಮಗಳೂರು: ಜಿಲ್ಲೆಯ ಕಾಫಿತೋಟ ಪ್ರದೇಶಗಳಲ್ಲಿ ಪರಿಸರಕ್ಕೆ ಧಕ್ಕೆ ಆಗುವಂತೆ ನಿರ್ಮಾಣವಾಗುತ್ತಿರುವ ವಿಲ್ಲಾಗಳಿಗೆ ನಿಯಂತ್ರಣ ಹೇರಲು ವಿಶೇಷ ಸಭೆ ನಡೆಸಿ ನಿಯಮ ರೂಪಿಸುವಂತೆ ಕೆಡಿಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಇಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಿಂದಿನ ಸಭೆಯ ನಿರ್ಣಯಗಳ ಮೇಲಿನ ಅನುಪಾಲನ ವರದಿ ಚರ್ಚೆಗೆ ಬಂದಾಗ ಈ ನಿರ್ಣಯ ಕೈಗೊಳ್ಳಲಾಯಿತು.

ಹಿಂದಿನ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿದ್ದಂತೆ ವಿವಿಧ ಕಂಪನಿಗಳು ತೋಟ ಪ್ರದೇಶಗಳಲ್ಲಿ ಭೂಮಿಗಳನ್ನು ವಿಭಾಗ ಮಾಡಿಕೊಂಡು ವಾಣಿಜ್ಯ ವ್ಯವಹಾರಕ್ಕಾಗಿ ವಿಲ್ಲಾಗಳನ್ನು ನಿರ್ಮಿಸುತ್ತಿದ್ದು, ಇದರಿಂದ ಪರಿಸರಕ್ಕೆ ಧಕ್ಕೆ ಆಗುತ್ತಿದೆ ಎಂದು ಹಿಂದಿನ ಸಭೆಯ ನಡವಳಿಕೆಯನ್ನು ಉಲ್ಲೇಖಿಸಿ ಶಾಸಕ ಎಚ್.ಡಿ ತಮ್ಮಯ್ಯ ಅವರು ವಿ?ಯ ಮಂಡಿಸಿದರು.

ಈ ಬಗ್ಗೆ ಶಾಸಕರುಗಳಾದ ಜಿ.ಹೆಚ್ ಶ್ರೀನಿವಾಸ್, ಆನಂದ್, ಎಂ.ಕೆ ಪ್ರಾಣೇಶ್ ಸೇರಿದಂತೆ ಈ ರೀತಿ ವಿಲ್ಲಾಗಳ ನಿರ್ಮಾಣದಿಂದ ಜಿಲ್ಲೆಯ ಪರಿಸರ ಹಾಳಾಗುವ ಜೊತೆಗೆ ವಾಹನ ದಟ್ಟಣೆ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ತೊಂದರೆ ಆಗಲಿದ್ದು ಇದಕ್ಕೆ ಕಡಿವಾಣ ಹಾಕಬೇಕೆಂದು ಸಲಹೆ ನೀಡಿದರು.

ತೋಟ ಪ್ರದೇಶಗಳಲ್ಲಿ ವಿಲ್ಲಾಗಳ ನಿರ್ಮಾಣಕ್ಕೆ ಕಾನೂನಿನಲ್ಲಿ ಯಾವ ಅವಕಾಶವಿದೆ ಎಂಬ ವಿಧಾನ ಪರಿ?ತ್ ಸದಸ್ಯ ಎಸ್.ಎಲ್ ಭೋಜೇಗೌಡರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ಈಗಿರುವ ಭೂಕಂದಾಯ ಕಾನೂನು ಪ್ರಕಾರ ಕರಾವಳಿ ಭಾಗದಲ್ಲಿ ೩ ಗುಂಟೆ ಉಳಿದ ಪ್ರದೇಶಗಳಲ್ಲಿ ೫ಗುಂಟೆಗೆ ಮಾತ್ರ ವಿಭಾಗ ಮಾಡಿಕೊಳ್ಳಲು ಅವಕಾಶ ಇದ್ದು, ವ್ಯವಸಾಯದ ಉದ್ದೇಶದಿಂದ ಕೌಟುಂಬಿಕವಾಗಿ ಜಮೀನು ವಿಭಾಗ ಮಾಡಿಕೊಳ್ಳಲು ಯಾವುದೇ ಅಡ್ಡಿಯಿಲ್ಲ. ಆದರೆ ವಾಣಿಜ್ಯ ಉದ್ದೇಶದಿಂದ ಭೂ ಉಪಯೋಗ ಬದಲಾವಣೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಬೇಕು, ಆಗ ಭೂಮಿಯ ಸ್ವರೂಪ ಬದಲಾದಾಗ ಜಮೀನಿನ ಸ್ವರೂಪ ಬದಲಾಗುವುದರಿಂದ ಕಾನೂನು ಕ್ರಮಕ್ಕೆ ಅವಕಾಶವಿದೆ ಎಂದರು.

ಈ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಸಿ.ಟಿ ರವಿ ಅವರು, ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಈ ಸಮಸ್ಯೆ ಇದ್ದು ಈ ಬಗ್ಗೆ ವಿಶೇ? ಸಭೆ ನಡೆಸಿ ಪರಿಸರಕ್ಕೆ ತೊಂದರೆ ಆಗದಂತೆ ಪ್ರವಾಸಿಗರಿಗೂ ತೊಂದರೆ ಆಗದಂತೆ ನಿಯಮ ರೂಪಿಸಬೇಕೆಂದು ಸಲಹೆ ನೀಡಿದಾಗ ಸಭಾಧ್ಯಕ್ಷರು ಒಪ್ಪಿಗೆ ಸೂಚಿಸಿ ನಿರ್ಣಯ ಅಂಗೀಕರಿಸಲಾಯಿತು.

ಬಾವಿಕೆರೆ ಮುಂತಾದೆಡೆ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ನಾಮ ನಿರ್ದೇಶಿತ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ ಎಲ್ಲಾ ಶಾಸಕರುಗಳು ಧನಿಗೂಡಿಸಿ ಅರಣ್ಯ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ತಮ್ಮಯ್ಯ ಅವರು ಮಲ್ಲೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಮೇನಹಳ್ಳಿಯಲ್ಲಿ ಆಶ್ರಯ ಮನೆ ನಿರ್ಮಿಸಿಕೊಂಡಿರುವ ಬಡವರನ್ನು ತೆರವುಗೊಳಿಸಲು ಅರಣ್ಯ ಇಲಾಖೆ ನೋಟಿಸ್ ನೀಡಿರುವ ಬಗ್ಗೆ ಪ್ರಸ್ತಾಪಿಸಿದರೆ, ನಯನ ಮೋಟಮ್ಮ ಅವರು ಶೃಂಗೇರಿ-ಮೂಡಿಗೆರೆ ಭಾಗದಲ್ಲಿ ಆಶ್ರಯ ನಿವೇಶನ ವಿತರಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಸಭೆಗೆ ತಿಳಿಸಿದರು.

ಈ ಬಗ್ಗೆ ಇಲಾಖಾ ಅಧಿಕಾರಿಗಳ ವಿವರಣೆ ಕೇಳಿದ ಸಭಾಧ್ಯಕ್ಷ ಸಚಿವ ಜಾರ್ಜ್ ಅವರು ಅಧಿಕಾರಿಗಳು ನೀಡಿದ ಮಾಹಿತಿಯಿಂದ ತೀವ್ರ ಅಸಮಾಧಾನಗೊಂಡು ಕೋರ್ಟು ಕಾನೂನುಗಳ ನೆಪ ಹೇಳಿ ಬಡವರು-ಜನಸಾಮಾನ್ಯರಿಗೆ ತೊಂದರೆ ಕೊಡಬೇಡಿ ಎಂದು ಸೂಚನೆ ನೀಡಿದರು.

ಇದೇ ವಿ?ಯದ ಚರ್ಚೆಯಲ್ಲಿ ವಿಧಾನ ಪರಿ?ತ್ ಸದಸ್ಯ ಎಸ್.ಎಲ್ ಭೋಜೇಗೌಡರು ಸರ್ಕಾರಿ ನೌಕರರೊಬ್ಬರು ಒತ್ತುವರಿ ಮಾಡಿಕೊಂಡಿರುವ ೩೦ ಎಕರೆ ಜಮೀನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ವಿಳಂಭ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಸಭಾಧ್ಯಕ್ಷರು ಇನ್ನೂ ೪೮ ಗಂಟೆಗಳ ಅವಧಿಯಲ್ಲಿ ಸರ್ಕಾರಿ ನೌಕರ ಮಾಡಿರುವ ಒತ್ತುವರಿ ಜಮೀನನ್ನು ತೆರವುಗೊಳಿಸುವಂತೆ ಆದೇಶ ನೀಡಿದರು.

ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಸೊಪ್ಪಿನಬೆಟ್ಟ ಮುಂತಾದ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡಿರುವ ಬಡ ಫಲಾನುಭವಿಗಳಿಗೆ ೫೩ ಮತ್ತು ೫೭ ಅರ್ಜಿಯಡಿ ಮಂಜೂರು ಮಾಡಲು ಹಾಗೂ ನಿವೇಶನ ಮಂಜೂರು ಮಾಡಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗಿರುವುದರಿಂದ ಯಾವುದೇ ಬಡವರಿಗೆ ಜಮೀನು ಅಥವಾ ನಿವೇಶನ ನೀಡಲಾಗುತ್ತಿಲ್ಲ ಎಂದು ಪ್ರಸ್ತಾಪಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ವಿವರಣೆ ನೀಡಿ, ಒಂದೇ ವಿಭಾಗದಲ್ಲಿ ಇರುವ ಅರಣ್ಯ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವರ್ಗೀಕರಣವಾಗಿರುವುದರಿಂದ ಕಾನೂನು ತೊಡಕುಗಳಿವೆ ಇವುಗಳು ಸರ್ಕಾರದ ಹಂತದಲ್ಲಿ ಸರಿಪಡಿಸಬೇಕಾಗಿದೆ ಎಂದು ಹೇಳಿದರು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಟಾರಿಯಾ ಅವರು ಸ್ಪ?ಣೆ ನೀಡಿ, ಈಗಿರುವ ಕಾನೂನು ಪ್ರಕಾರ ಸೊಪ್ಪಿನಬೆಟ್ಟ ಗೋಮಾಳ, ಉಲುಬಂದಿ, ಅಮೃತ್ ಮಹಲ್ ಕಾವಲ್‌ನಂತ ಸಮುದಾಯದ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡುವ ಅವಕಾಶವಿಲ, ಈ ಪ್ರದೇಶಗಳಲ್ಲಿ ಬಹಳ? ಜಮೀನು ಅನಧಿಕೃತ ಒತ್ತುವರಿಯಾಗಿರುವುದರಿಂದ ಸುಪ್ರೀಂಕೋರ್ಟ್ ಸೂಚನೆಯಂತೆ ಪರ್ಯಾಯ ನಿಯಮ ರೂಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.

ವಿವಿಧ ವಿ?ಯಗಳ ಚರ್ಚೆಯ ನಂತರ ಕೆಲವು ವ್ಯಕ್ತಿಗಳು ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹಾಗೂ ಜಿ.ಎಚ್ ಶ್ರೀನಿವಾಸ್ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಂ ಅಮಟೆ ಅವರು ಹಣಕ್ಕಾಗಿ ಮಾಹಿತಿ ಹಕ್ಕು ಕಾಯಿದೆ ಅನ್ವಯ ತೊಂದರೆ ಕೊಡುವ ಬಗ್ಗೆ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಶಾಸಕರುಗಳಾದ ಹೆಚ್.ಡಿ ತಮ್ಮಯ್ಯ, ಜಿ.ಹೆಚ್ ಶ್ರೀನಿವಾಸ್, ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯಸರ್ಜಿ, ಸಿ.ಟಿ ರವಿ, ಸಭೆ ಪ್ರಾರಂಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಸ್ವಾಗತಿಸಿ ಸಭಾ ಕಲಾಪ ನಡೆಸಿಕೊಟ್ಟರು.

A special meeting to control the villas being built in the coffee plantation areas

About Author

Leave a Reply

Your email address will not be published. Required fields are marked *

You may have missed