September 16, 2024

ನಗರಕ್ಕಾಗಮಿಸಿದ ಜೈನ ಧರ್ಮಗುರುಗಳ ಭವ್ಯ ಸ್ವಾಗತ

0
ನಗರಕ್ಕಾಗಮಿಸಿದ ಜೈನ ಧರ್ಮಗುರುಗಳ ಭವ್ಯ ಸ್ವಾಗತ

ನಗರಕ್ಕಾಗಮಿಸಿದ ಜೈನ ಧರ್ಮಗುರುಗಳ ಭವ್ಯ ಸ್ವಾಗತ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದು, ಇಂದು ತೇರಾಪಂಥ್ ಜೈನ ಧರ್ಮಗುರುಗಳ ಪಾದ ಸ್ಪಶದಿಂದ ಈ ವರ್ಷ ಉತ್ತಮ ಮಳೆಯಾಗುತ್ತಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

ತೇರಾಪಂಥ್ ಸಂಘದ ವತಿಯಿಂದ ನಗರಕ್ಕಾಗಮಿಸಿದ ತೇರಾಪಂಥ್ ಧರ್ಮ ಗುರುಗಳಾದ ಮೋಹಜಿತ್ ಕುಮಾರ್‌ಜಿ, ಮುನಿಶ್ರೀ ಭವ್ಯಕುಮಾರ್‌ಜಿ, ಮುನಿಶ್ರೀ ಜಹೇಶ್‌ಕುಮಾರ್, ಜೈನ ಧರ್ಮಗುರುಗಳನ್ನು ಸ್ವಾಗತಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಧರ್ಮ ಗುರುಗಳನ್ನು ಸ್ವಾಗತಿಸಿ ಮಾತನಾಡಿದರು.

ಸೋಮವಾರ ಚಿಕ್ಕಮಗಳೂರಿನಲ್ಲಿ ಚಾತುರ್ಮಾಸ ಪೂಜೆಯನ್ನು ಮುಂದಿನ ಸುಮಾರು ೪ ತಿಂಗಳುಗಳ ಕಾಲ ಇಲ್ಲಿನ ತೇರಾಪಂಥ್ ಭವನದಲ್ಲಿ ನಡೆಸುತ್ತಿದ್ದು, ಗುರೂಜಿಗಳು ಜಿಲ್ಲೆಯಾದ್ಯಂತ ಉತ್ತಮ ಮಳೆ, ಬೆಳೆ ಆಗುವಂತೆ ಆಶೀರ್ವಾದ ಮಾಡಲಿ ಎಂದು ಹರಸಿ ಹಾರೈಸಲು ಮನವಿ ಮಾಡಿದರು.

ಪಾದಯಾತ್ರೆ ಮೂಲಕ ದೇಶಾದ್ಯಂತ ಸಂಚರಿಸಿ ಜೈನ ಮುನಿಗಳು ಸರ್ವ ಜನರ ಒಳಿತಿಗಾಗಿ ಶಾಂತಿಯಿಂದ ಅಹಿಂಸಾ ಧರ್ಮವನ್ನು ಪ್ರತಿಪಾದಿಸುತ್ತ ಎಲ್ಲರೂ ಶಾಂತಿ ಪ್ರಿಯರಾಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಎಂದರು.

ತೇರಾಪಂಥ್ ಸಭಾ ಅಧ್ಯಕ್ಷ ಮಹೇಂದ್ರ ಕುಮಾರ್ ಡೋಸಿ ಮಾತನಾಡಿ, ತೇರಾಪಂಥ್ ಮಹಾ ಸಂಘದ ಆಚಾರ್ಯರುಗಳಾದ ಮುನಿಶ್ರೀ, ಮೋನಿಜತ್ ಗುರೂಜಿ, ಮುನಿಶ್ರೀ ಭವ್ಯ ಕುಮಾರ್ ಜೀ ಹಾಗೂ ಜೈಯಶ್ರೀ ಕುಮಾರ್ ಜೀ ಇಂದು ಜಾತುರ್ಮಾಸದ ಅಂಗವಾಗಿ ತೇರಾಪಂಥ್ ಭವನ ಪ್ರವೇಶಿಸಿ ಮುಂದಿನ ೪ ತಿಂಗಳವರೆಗೆ ಚಾತುರ್ಮಾಸವನ್ನು ಆಚರಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೈನ ಧರ್ಮಗುರುಗಳು ತೇರಾಪಂಥ್ ಧರ್ಮ ಸಂಘದ ಧರ್ಮವನ್ನು ಪ್ರಬೋಧಿಸುತ್ತಾರೆ, ಪ್ರತೀ ದಿನ ಬೆಳಗ್ಗೆ ೯.೩೦ ರಿಂದ ೧೦.೩೦ ರವರೆಗೆ ಧರ್ಮ ಸಭೆ ನಡೆಯಲಿದ್ದು, ನಗರದ ಎಲ್ಲಾ ಧರ್ಮದವರು ಭಾಗವಹಿಸುವ ಮೂಲಕ ಗುರೂಜಿಗಳ ಆಶೀರ್ವಾದ ಪಡೆಯಬೇಕೆಂದು ಮನವಿ ಮಾಡಿದರು.

ತೇರಾಪಂಥ್ ಸಭಾ ನಿಕಟ ಪೂರ್ವ ಅಧ್ಯಕ್ಷ ತಾರಾಚಂದ್, ಜೈನ್ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿ ಅಧ್ಯಕ್ಷೆ ಗುಣವಂತಿ ಸೇರಿ ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಮಾಡುತ್ತಿರುವ ಉದ್ದೇಶ ಸರ್ವ ಜನರ ಒಳಿತಿಗಾಗಿ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪದಮ್ ಚಂದ್, ಮಾಜಿ ಅಧ್ಯಕ್ಷರಾದ ತಾರಾಚಂದ್ ತೇರಾಪಂಥ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಉಪಾಧ್ಯಕ್ಷರಾದ ಗೌತಮ್ ಚಂದ್, ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್, ತೇರಾಪಂಥ್ ಯುವಕ್ ಪರಿಷತ್ ಅಧ್ಯಕ್ಷ ಜಯಿಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

A grand welcome for the Jain priests who arrived in the city

About Author

Leave a Reply

Your email address will not be published. Required fields are marked *