September 8, 2024

ಕಳೆದ 90 ರ ದಶಕದ ನಂತರ ಜಾಗತೀಕರಣದ ನಂತರ ಕನ್ನಡ ಬಡವಾಗಿದೆ

0
೬ನೇ ಕನ್ನಡ ಸಾಹಿತ್ಯ ತಾಲ್ಲೂಕು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ

೬ನೇ ಕನ್ನಡ ಸಾಹಿತ್ಯ ತಾಲ್ಲೂಕು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ

ಕಡೂರು: ಕಳೆದ ೯೦ ರ ದಶಕದ ನಂತರ ಜಾಗತೀಕರಣದ ನಂತರ ಕನ್ನಡ ಬಡವಾಗಿದೆ. ಸಾಂಸ್ಕೃತಿಕವಾಗಿ ಹಿಂದುಳಿದಿದೆ ಎಂಬುದು ವಾಸ್ತವಿಕ ಸತ್ಯ. ನಮ್ಮ ತನ ನೆಲಕಚ್ಚುತ್ತಿದೆ, ಪ್ರಾದೇಶಿಕತೆ ಮರೆಯಾಗುತ್ತಿದೆ. ಸರ್ಕಾರಗಳೂ ಸಹ ಕನ್ನಡದ ಬಗ್ಗೆ ತಾತ್ಸಾರ ಮಾಡುತ್ತಿವೆಯೆಂಬ ಭಾವನೆ ಕಾಡುತ್ತಿದೆ. ಸಾಹಿತ್ಯ ಸಮ್ಮೇಳನಗಳಿಗೆ ರಾಜಕಾರಣಿಗಳನ್ನು ಕರೆಯುವ ಕೆಟ್ಟ ಪರಿಪಾಠ ತಪ್ಪಬೇಕು. ಸಾಹಿತ್ಯ ಸಮ್ಮೇಳನ ಸಂಪೂರ್ಣ ಸಾಹಿತ್ಯದ ಜಾತ್ರೆಯಾಗಬೇಕು ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.

ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ನಡೆದ ೬ನೇ ಕನ್ನಡ ಸಾಹಿತ್ಯ ತಾಲ್ಲೂಕು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಾಜಕೀಯದ ಮೇಲಾಟಕ್ಕೆ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಬಾರದು ಎಂದರು.

ಸಾಹಿತ್ಯ ಕ್ಷೇತ್ರಕ್ಕೆ ಕಡೂರಿನ ಕೊಡುಗೆ ಅಪಾರವಾಗಿದ್ದು, ಬರದ ಕ್ಷಾಮಕ್ಕೆ ನಲುಗುತ್ತಿದ್ದರೂ ಸಾಹಿತ್ಯಕವಾಗಿ ಎಂದಿಗೂ ಬರದ ಛಾಯೆ ಕಾಡಿಲ್ಲ, ತಾಲ್ಲೂಕಿನ ನೆಲದಲ್ಲಿದಲ್ಲಿರುವ ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಾಹಿತ್ಯ ಪರಿಷತ್ ಕಾರ್ಯ ಶ್ಲಾಘನೀಯ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವಂತಹ ಪ್ರತಿಭೆಗಳಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.

ಹಳೆಗನ್ನಡ, ನಡುಗನ್ನಡ, ನವ್ಯ, ನವೋದಯ ಸಾಹಿತ್ಯ, ವಚನ ಚಳುವಳಿ, ದಾಸ ಸಾಹಿತ್ಯದ ಬೆಳವಣಿಗೆಗಳನ್ನು ಎಳೆ ಎಳೆಯಾಗಿ ವಿವರಿಸಿದ ದತ್ತ, ಸಾಹಿತ್ಯದ ಮೇಲೆ ಕುವೆಂಪು, ಮಾಸ್ತಿಯವರಂತಹ ಹಿರಿಯ ಸಾಹಿತಿಗಳ ಪ್ರಭಾವವನ್ನು ವಿವರಿಸಿದರು. ಹಲವಾರು ವ?ಗಳ ಹೋರಾಟದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರಕಿತು. ಅದೊಂದೇ ಸಮಾಧಾನದ ಸಂಗತಿ. ಅದರಾಚೆಗೆ ಏನೂ ಆಗಿಲ್ಲವೆಂಬುದು ಬೇಸರದ ಸಂಗತಿ ಎಂದರು

ಸಿದ್ದರಾಮಯ್ಯನವರು ಕನ್ನಡ ಭಾ? ಶಿಕ್ಷಣ ಕಡ್ಡಾಯ ಮಾಡಿ ಪ್ರಸ್ತಾವನೆಯನ್ನು ದೆಹಲಿ ಮಟ್ಟಕ್ಕೆ ಕೊಂಡೊಯ್ದರೆ ಸುಪ್ರೀಂ ಕೋರ್ಟ್ ಶಿಕ್ಷಣದ ಭಾ?ಯ ಆಯ್ಕೆ ಪೋ?ಕರದ್ದು ರಾಜ್ಯ ಸರ್ಕಾರದ್ದಲ್ಲ ಎಂದು ತೀರ್ಪು ನೀಡಿತು. ಇಂತಹ ಪರಿಸ್ಥಿತಿಯಲ್ಲಿ ಕನ್ನಡದ ಉಳಿವಿಗೆ ಏನು ಮಾಡಲು ಸಾಧ್ಯವೆಂಬುದನ್ನು ಯೋಚಿಸಲೂ ಗೊಂದಲ ಕಾಡುತ್ತಿದೆ ಎಂದು ಕಳವಳವ್ಯಕ್ತಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಸಮ್ಮೇಳಗಳನ್ನು ನಡೆಸುವುದರ ಹಿಂದಿನ ಔಚಿತ್ತವನ್ನು ಪ್ರಶ್ನಿಸುವವರು ಇದ್ದಾರೆ. ಆದರೆ ನಮ್ಮ ನೆಲದ ಹಿರಿಮೆ ಮುಂದಿನ ಪೀಳಿಗೆಗೆ ತಿಳಿಯಬೇಕು. ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಹಾಗೂ ಸಾಹಿತ್ಯದ ಕಂಪು ಸದಾ ಹರಿಯುತ್ತಿರಬೇಕೆಂಬ ಆಶಯದಿಂದ ಇಂತಹ ಸಾಹಿತ್ಯ ಸಮ್ಮೇಳನಗಳನ್ನು ಪರಿ?ತ್ತು ಸದಾ ಆಯೋಜಿಸುತ್ತಿದೆ ಎಂದು ಹೇಳಿದರು.

ಎಲ್ಲರ ಸಹಬಾಗಿತ್ವದೊಂದಿಗೆ ಕನ್ನಡತನವನ್ನು ಗಟ್ಟಿಗೊಳಿಸಲು ಪರಿಷತ್ ನಿರಂತರವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಿಗಿಸಿಕೊಳ್ಳಲಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಹೊಸೂರು ಪುಟ್ಟರಾಜು ಮಾತನಾಡಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಂತಹ ಹಿರಿಯ ಗೌರವ ದೊರೆತಿದ್ದು ಇಡೀ ಶಿಕ್ಷಕ ಸಮೂಹಕ್ಕೆ ಸಂದ ಗೌರವವಾಗಿದೆ ಎಂದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ ಕೆ.ವಿ.ವಾಸು ಮತ್ತು ನಿವೃತ್ತ ಶಿಕ್ಷಕ ಸಿ.ಕೆ.ಬಸವರಾಜಪ್ಪ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಲಾಯಿತು.

ಡಾ.ಪಿ.ಎಚ್.ವಿಜಯಲಕ್ಷ್ಮಿ, ಮರವಂಜಿ ವಿಜಯಕುಮಾರ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಬಿ.ವಿ.ಶೃತಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಪರಿ?ತ್ತಿನ ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಪುರಸಭಾ ಸದಸ್ಯ ತೋಟದಮನೆ ಕೆ.ಎಂ. ಮೋಹನ್‌ಕುಮಾರ್, ಬಿ.ಟಿ.ಗಂಗಾಧರ ನಾಯ್ಕ, ಕೋಡಿಹಳ್ಳಿ ಮಹೇಶ್ವರಪ್ಪ, ವಿ.ಜಿ.ಒಡೆಯರ್ ಮತ್ತಿತರಿದ್ದರು.

Kannada has become poorer after globalization since the late 90s

About Author

Leave a Reply

Your email address will not be published. Required fields are marked *

You may have missed