September 19, 2024

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾದರೂ ಅವಘಡಗಳು ಹೆಚ್ಚುತ್ತಿದೆ

0
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆರ್ಭಟಿಸಿದ್ದ ವರಣದೇವ ಕೊಂಚ ಬಿಡುವು ನೀಡಿದ್ದಾನೆ. ವರುಣದೇವನ ಅಲ್ಪವಿರಾಮಕ್ಕೆ ಮಲೆನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ನಾಲ್ಕು ದಿನಗಳಿಂದ ಎಡಬಿಡದೆ ಸುರಿದ ಮಳೆ ಬಿಡುವು ನೀಡಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮಳೆನಿಂತರು ಮಳೆಹನಿ ನಿಂತಿಲ್ಲ ಎಂಬಂತೆ ಅಲ್ಲಲ್ಲಿ ಅವಘಟಗಳು ಸಂಭವಿಸುತ್ತಿವೆ. ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಮಳೆಯಾಗುತ್ತಿದ್ದು, ತುಂಗಾನದಿ ತುಂಬಿ ಹರಿಯುತ್ತಿದೆ. ಮಂಗಳವಾರ ಗಾಂಧಿಮೈದಾನ ಹಾಗೂ ಪಾರ್ಕಿಂಗ್ ಹಾಗೂ ಪ್ಯಾರಲರ್ ರಸ್ತೆ ಭಾಗದಲ್ಲಿ ಆವರಿಸಿದ್ದ ನದಿನೀರು ಇಳಿಕೆಯಾಗಿದೆ. ದೇವಸ್ಥಾನದ ಮೆಟ್ಟಿಲಿನಲ್ಲಿರುವ ಕಪ್ಪೆ ಶಂಕರ ನದಿ ನೀರಿನಲ್ಲಿ ಮುಳುಗಿದೆ. ಗುರುಗಳ ಸಂಧ್ಯಾವಂದನೆ ಮಂಟಪ, ಸ್ನಾನ ಗೃಹದ ವರೆಗೂ ಪ್ರವಾ ಹದ ನೀರು ಹರಿಯುತ್ತಿದೆ. ನದಿಪಾತ್ರದಲ್ಲಿನ ತೋಟಗಳು ಜಾಲವೃತಗೊಂಡಿವೆ. ಮಳೆ ಹೀಗೆ ಮುಂದೂವರೆದರೇ, ಇನಷ್ಟು ಸಮಸ್ಯೆ, ಅನಾಹುತ ಸಂಭವಿಸುವ ಆತಂಕದಲ್ಲಿ ಮಲೆನಾಡಿಗರು ಇದ್ದಾರೆ. ಪುನರ್ವಸು ಮಳೆ ಅಬ್ಬರಕ್ಕೆ ಮಲೆನಾಡಿನ ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ಚಿಕ್ಕಮಗಳೂರಿನ ಸಗೀರ್ ಫಾಲ್ಸ್, ಶೃಂಗೇರಿಯ ಸಿರಿಮನೆ ಜಲಪಾತ, ಕಲ್ಲತ್ತಗಿರಿ ಜಲಪಾತ ತುಂಬಿ ಹರಿಯುತ್ತಿವೆ. ಮಳೆ, ಗಾಳಿ ಅಬ್ಬರಕ್ಕೆ ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮದಲ್ಲಿ ಎರಡು ಮನೆಗಳ ಸಮೀಪ ಧರೆ ಕುಸಿದಿದೆ. ಮಳೆ ಗಾಳಿ ಇನಷ್ಟು ಜಾಸ್ತಿಯಾದರೇ ಬಿದ್ದು ಹೋಗುವ ಆ ತಂಕ ಎದುರಾಗಿದೆ. ಗುಡ್ಡೆ ತೋಟದಲ್ಲಿ ೧೭ ಕುಟುಂಬಗಳು ವಾಸವಾಗಿದ್ದು, ಸ್ಥಳಾಂತರಕ್ಕೆ ಇಲ್ಲಿನ ಕಟುಂಬಗಳು ಸಿದ್ಧವಿದ್ದು, ಸ್ಥಳಾಂತರಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ೧೭ ಕುಟುಂಬಗಳು ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ವಾಸಿಸುತ್ತಿದ್ದು, ಕುಟುಂಬ ಸ್ಥಳಾಂತರಕ್ಕೆ ಗ್ರಾಮ ಪಂಚಾಯತ್ ಬೇರೆ ಜಾಗ ನೋಡಿದೆ. ಆದರೆ, ಅರಣ್ಯ ಇಲಾಖೆ ಡೀಮ್ಡ್ ಫಾರೆಸ್ಟ್ ಎಂದು ಕ್ಲಿಯರೆನ್ಸ್ ಕೊಡದ ಹಿನ್ನಲೆಯಲ್ಲಿ ಸ್ಥಳಾಂತರ ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಮನೆ ಬಿದ್ದರೂ ಬೇರೆ ದಾರಿ ಇಲ್ಲದೆ ಅಲ್ಲೇ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ನೆಮ್ಮಾರಿನ ತೂಗು ಸೇತುವೆ ಕುಸಿದಿದೆ. ಐದಾರೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ತೂಗು ಸೇತುವೆ ಕುಸಿದಿದ್ದರಿಂದ ಗ್ರಾಮದಿಂದ ಜನರು ಹೊರ ಬರಲಾರದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಸೇತುವೆ ದುರಸ್ಥಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಮಳೆಯ ಅಬ್ಬರಕ್ಕೆ ಕೊಪ್ಪ ತಾಲೂಕು ಜಯಪುರ ಸಮೀಪದ ಹುತ್ತಿನಗದ್ದೆ ಗ್ರಾಮದಲ್ಲಿ ಸಚಿನ್‌ಗೌಡ ಎಂಬುವರ ಮನೆಯ ಹಿಂಭಾಗ ಧರೆ ಕುಸಿದಿದೆ. ಮಳೆ ಹೆಚ್ಚಾದರೇ ಮತ್ತಷ್ಟು ಧರೆ ಕುಸಿಯುವ ಭೀತಿ ಎದುರಾಗಿದೆ. ಮಂಗಳವಾರ ಸುರಿದ ಬಾರಿ ಮಳೆ ಹಾಗೂ ಗಾಳಿಗೆ ಬಾಳೆ ಗ್ರಾಮದ ಕುಡ್ನಲ್ಲಿ ಮಧು ಎಂಬುವರಿಗೆ ಸೇರಿದ ಹಸುವಿನ ಮೇಲೆ ಕಾಡು ಮರಬಿದ್ದು ಹಸು ಮೃತ ಪಟ್ಟಿದೆ. ಕಳಸ ಕೈಮರ ಗ್ರಾಮದ ಪುಂಡರೀಕ ಎಂಬುವರ ಮನೆಯ ಹಿಂಬದಿಯ ಧರೆ ಕುಸಿದಿದೆ. ಮನೆ ಹಿಂಬದಿ ಧರೆ ಮಣ್ಣಿನಿಂದ ಮುಚ್ಚಿ ಹೋಗಿದೆ. ಮಳೆಯ ಆರ್ಭಟಕ್ಕೆ ರಸ್ತೆಗಳ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮರ ತೆರವು ಗೊಳಿಸಿ ವಾಹನ ಸಂಚಾರಕಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇನ್ನೂ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಎಡಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಮಟ್ಟಿಗೆ ಬಿಡುವು ನೀಡಿದ್ದು ಮಲೆನಾಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮೋಡ ಕವಿದ ವಾತಾವರಣ ಮುಂದೂವರೆದಿದ್ದು, ಆಗಾಗ್ಗೆ ಮಳೆಯಾಗುತ್ತಿದೆ. ನಾಲ್ಕು ದಿನಗಳಿಂದ ಬಯಲುಸೀಮೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಬುಧವಾರ ಇಲ್ಲಿ ಮೋಡ ಕವಿದ ವಾತಾವರಣ ಮುಂದೂವರೆದಿದ್ದು, ಮಳೆ ಕ್ಷಣಿಸಿದೆ.

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆರ್ಭಟಿಸಿದ್ದ ವರಣದೇವ ಕೊಂಚ ಬಿಡುವು ನೀಡಿದ್ದಾನೆ. ವರುಣದೇವನ ಅಲ್ಪವಿರಾಮಕ್ಕೆ ಮಲೆನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ನಾಲ್ಕು ದಿನಗಳಿಂದ ಎಡಬಿಡದೆ ಸುರಿದ ಮಳೆ ಬಿಡುವು ನೀಡಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮಳೆನಿಂತರು ಮಳೆಹನಿ ನಿಂತಿಲ್ಲ ಎಂಬಂತೆ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿವೆ.

ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಮಳೆಯಾಗುತ್ತಿದ್ದು, ತುಂಗಾನದಿ ತುಂಬಿ ಹರಿಯುತ್ತಿದೆ. ಮಂಗಳವಾರ ಗಾಂಧಿಮೈದಾನ ಹಾಗೂ ಪಾರ್ಕಿಂಗ್ ಹಾಗೂ ಪ್ಯಾರಲರ್ ರಸ್ತೆ ಭಾಗದಲ್ಲಿ ಆವರಿಸಿದ್ದ ನದಿನೀರು ಇಳಿಕೆಯಾಗಿದೆ. ದೇವಸ್ಥಾನದ ಮೆಟ್ಟಿಲಿನಲ್ಲಿರುವ ಕಪ್ಪೆ ಶಂಕರ ನದಿ ನೀರಿನಲ್ಲಿ ಮುಳುಗಿದೆ. ಗುರುಗಳ ಸಂಧ್ಯಾವಂದನೆ ಮಂಟಪ, ಸ್ನಾನ ಗೃಹದ ವರೆಗೂ ಪ್ರವಾ ಹದ ನೀರು ಹರಿಯುತ್ತಿದೆ. ನದಿಪಾತ್ರದಲ್ಲಿನ ತೋಟಗಳು ಜಾಲವೃತಗೊಂಡಿವೆ. ಮಳೆ ಹೀಗೆ ಮುಂದೂವರೆದರೇ, ಇನಷ್ಟು ಸಮಸ್ಯೆ, ಅನಾಹುತ ಸಂಭವಿಸುವ ಆತಂಕದಲ್ಲಿ ಮಲೆನಾಡಿಗರು ಇದ್ದಾರೆ.

ಪುನರ್ವಸು ಮಳೆ ಅಬ್ಬರಕ್ಕೆ ಮಲೆನಾಡಿನ ಜಲಪಾತಗಳು ಜೀವಕಳೆ ಪಡೆದುಕೊಂಡಿವೆ. ಚಿಕ್ಕಮಗಳೂರಿನ ಸಗೀರ್ ಫಾಲ್ಸ್, ಶೃಂಗೇರಿಯ ಸಿರಿಮನೆ ಜಲಪಾತ, ಕಲ್ಲತ್ತಗಿರಿ ಜಲಪಾತ ತುಂಬಿ ಹರಿಯುತ್ತಿವೆ. ಮಳೆ, ಗಾಳಿ ಅಬ್ಬರಕ್ಕೆ ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮದಲ್ಲಿ ಎರಡು ಮನೆಗಳ ಸಮೀಪ ಧರೆ ಕುಸಿದಿದೆ. ಮಳೆ ಗಾಳಿ ಇನಷ್ಟು ಜಾಸ್ತಿಯಾದರೇ ಬಿದ್ದು ಹೋಗುವ ಆ ತಂಕ ಎದುರಾಗಿದೆ. ಗುಡ್ಡೆ ತೋಟದಲ್ಲಿ ೧೭ ಕುಟುಂಬಗಳು ವಾಸವಾಗಿದ್ದು, ಸ್ಥಳಾಂತರಕ್ಕೆ ಇಲ್ಲಿನ ಕಟುಂಬಗಳು ಸಿದ್ಧವಿದ್ದು, ಸ್ಥಳಾಂತರಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ.

೧೭ ಕುಟುಂಬಗಳು ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ವಾಸಿಸುತ್ತಿದ್ದು, ಕುಟುಂಬ ಸ್ಥಳಾಂತರಕ್ಕೆ ಗ್ರಾಮ ಪಂಚಾಯತ್ ಬೇರೆ ಜಾಗ ನೋಡಿದೆ. ಆದರೆ, ಅರಣ್ಯ ಇಲಾಖೆ ಡೀಮ್ಡ್ ಫಾರೆಸ್ಟ್ ಎಂದು ಕ್ಲಿಯರೆನ್ಸ್ ಕೊಡದ ಹಿನ್ನಲೆಯಲ್ಲಿ ಸ್ಥಳಾಂತರ ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಮನೆ ಬಿದ್ದರೂ ಬೇರೆ ದಾರಿ ಇಲ್ಲದೆ ಅಲ್ಲೇ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ನೆಮ್ಮಾರಿನ ತೂಗು ಸೇತುವೆ ಕುಸಿದಿದೆ. ಐದಾರೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ತೂಗು ಸೇತುವೆ ಕುಸಿದಿದ್ದರಿಂದ ಗ್ರಾಮದಿಂದ ಜನರು ಹೊರ ಬರಲಾರದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಸೇತುವೆ ದುರಸ್ಥಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಮಳೆಯ ಅಬ್ಬರಕ್ಕೆ ಕೊಪ್ಪ ತಾಲೂಕು ಜಯಪುರ ಸಮೀಪದ ಹುತ್ತಿನಗದ್ದೆ ಗ್ರಾಮದಲ್ಲಿ ಸಚಿನ್‌ಗೌಡ ಎಂಬುವರ ಮನೆಯ ಹಿಂಭಾಗ ಧರೆ ಕುಸಿದಿದೆ. ಮಳೆ ಹೆಚ್ಚಾದರೇ ಮತ್ತಷ್ಟು ಧರೆ ಕುಸಿಯುವ ಭೀತಿ ಎದುರಾಗಿದೆ. ಮಂಗಳವಾರ ಸುರಿದ ಬಾರಿ ಮಳೆ ಹಾಗೂ ಗಾಳಿಗೆ ಬಾಳೆ ಗ್ರಾಮದ ಕುಡ್ನಲ್ಲಿ ಮಧು ಎಂಬುವರಿಗೆ ಸೇರಿದ ಹಸುವಿನ ಮೇಲೆ ಕಾಡು ಮರಬಿದ್ದು ಹಸು ಮೃತ ಪಟ್ಟಿದೆ. ಕಳಸ ಕೈಮರ ಗ್ರಾಮದ ಪುಂಡರೀಕ ಎಂಬುವರ ಮನೆಯ ಹಿಂಬದಿಯ ಧರೆ ಕುಸಿದಿದೆ. ಮನೆ ಹಿಂಬದಿ ಧರೆ ಮಣ್ಣಿನಿಂದ ಮುಚ್ಚಿ ಹೋಗಿದೆ.

ಮಳೆಯ ಆರ್ಭಟಕ್ಕೆ ರಸ್ತೆಗಳ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮರ ತೆರವು ಗೊಳಿಸಿ ವಾಹನ ಸಂಚಾರಕಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇನ್ನೂ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಎಡಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಮಟ್ಟಿಗೆ ಬಿಡುವು ನೀಡಿದ್ದು ಮಲೆನಾಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮೋಡ ಕವಿದ ವಾತಾವರಣ ಮುಂದೂವರೆದಿದ್ದು, ಆಗಾಗ್ಗೆ ಮಳೆಯಾಗುತ್ತಿದೆ. ನಾಲ್ಕು ದಿನಗಳಿಂದ ಬಯಲುಸೀಮೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಬುಧವಾರ ಇಲ್ಲಿ ಮೋಡ ಕವಿದ ವಾತಾವರಣ ಮುಂದೂವರೆದಿದ್ದು, ಮಳೆ ಕ್ಷಣಿಸಿದೆ.

In the hilly parts of the district the number of accidents is increasing even though the rainfall has decreased

About Author

Leave a Reply

Your email address will not be published. Required fields are marked *

You may have missed