September 19, 2024

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣಗೆ ಸನ್ಮಾನ

0
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣಗೆ ಸನ್ಮಾನ

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣಗೆ ಸನ್ಮಾನ

ಚಿಕ್ಕಮಗಳೂರು: ಕೇಂದ್ರದ ಎನ್‌ಡಿಎ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಪೈಕಿ ಶೇ.೧೦ ರಿಂದ ೧೫ ರಷ್ಟನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಲ್ಲಿ ಕರ್ನಾಟಕದಲ್ಲೂ ರಾಮ ರಾಜ್ಯ ಆಗುತ್ತದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಗುರುವಾರ ಪಕ್ಷದ ವತಿಯಿಂದ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವು ಒಳ್ಳೆಯ ಅಧಿಕಾರಿಗಳು ಇದ್ದಾರೆ.

ಅಂತಹವರನ್ನು ಕೆಲವೇ ದಿನಗಳಲ್ಲಿ ದೆಹಲಿಗೆ ಕರೆದೊಯ್ದು ಕೇಂದ್ರದ ಕಾರ್ಯಕ್ರಮಗಳೇನು, ರಾಜ್ಯಕ್ಕೆ ಕೊಡುವ ನೆರವೇನು, ಅದರ ಉದ್ದೇಶವೇನು, ಅದರಿಂದಾಗುವ ಪ್ರಗತಿ ಏನು ಎನ್ನುವ ಮನವರಿಕೆ ಮಾಡಬೇಕೆನ್ನುವ ಅಭಿಲಾಷೆ ಹೊಂದಿದ್ದೇನೆ.

ಭವ್ಯ ಭಾರತದ ಭವಿಷ್ಯದಲ್ಲಿ ನರೇಂದ್ರ ಮೋದಿ ಅವರ ದೂರ ದೃಷ್ಠಿಯ ಚಿಂತನೆಗಳು ನಮ್ಮೆಲ್ಲರಿಗೂ ಬೆನ್ನೆಲುಬಾಗಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಸಂಸದ ಶ್ರೀನಿವಾಸ ಪೂಜಾರಿ ಅವರು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿನಂತೆ ಅನುಭವಿಗಳಾಗಿದ್ದಾರೆ. ಅವರಂತಹ ಇನ್ನೊಬ್ಬ ವ್ಯಕ್ತಿ ಕರ್ನಾಟಕದಲ್ಲಿ ಇಲ್ಲ ಎನ್ನುವುದು ನಮ್ಮ ೪೦ ವರ್ಷದ ರಾಜಕೀಯದಲ್ಲಾದ ಅನುಭವ. ಚಿಕ್ಕಮಗಳೂರು-ಉಡುಪಿ ಜನರು ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದರು.

ಚಿಕ್ಕಮಗಳೂರು ಜಿಲ್ಲೆ ಪಕ್ಷ ಸಂಘಟನೆಗೆ ಹೆಸರಾಗಿರುವಂತಹದ್ದು, ಒಮ್ಮೊಮ್ಮೆ ಎಡವಟ್ಟಾಗುತ್ತದೆ. ಯಾರ್‍ಯಾರು ಪಕ್ಷ ಬಿಟ್ಟು ಹೋಗಿದ್ದಾರೆ ಅವರ ಪಟ್ಟಿ ಸಿದ್ಧಪಡಿಸಿ ಅವರನ್ನು ಮತ್ತೆ ಕರೆತರುವ ಕೆಲಸ ಮಾಡೋಣ. ಅದು ಜಿಲ್ಲಾಧ್ಯಕ್ಷರ ಜವಾಬ್ದಾರಿ. ಗೆಲ್ಲಲಿಕ್ಕೆ ಎಲ್ಲರೂ ಬೇಕು. ಸೋಲಲು ಯಾರೂ ಬೇಕಿಲ್ಲ ಎನ್ನುವುದಕ್ಕೆ ಸಿ.ಟಿ.ರವಿ ಅವರು ಸಹ ಉದಾಹರಣೆ.

ರವಿ ಅವರು ಯಾರಿಗೆ ಏನು ಕೊಟ್ಟಿದ್ದಾರೋ ಗೊತ್ತಿಲ್ಲ ಒಳ್ಳೆ ನಡವಳಿಕೆ, ಒಳ್ಳೆತನವನ್ನು ಕೊಟ್ಟಿದ್ದಾರೆ. ತನ್ನ ಮನಸಿನಲ್ಲಿರುವುದನ್ನು ಬಿಚ್ಚಿ ಹೇಳಿದ್ದಾರೆ. ಅಂತಹ ನಾಯಕರ ನೇತೃತ್ವದಲ್ಲಿ ಮುಂದುವರಿಯಬೇಕು ಎಂದರು.

ಹಿಂದೆ ಆದಂತೆ ಮತ್ತೊಮ್ಮೆ ಹಾಗೆ ಆಗಬಾರದು. ಒಳ್ಳೆ ನಡತೆ, ಒಳ್ಳೆ ತನಕ್ಕೆ ದೇವರು, ನಾಯಕರು ಎಲ್ಲರೂ ಇದ್ದಾರೆ. ಅದು ಬಿಜೆಪಿಯಲ್ಲಿದ್ದಾರೆ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಮುಖಂಡರುಗಳಾದ ಕೋಟೆ ರಂಗನಾಥ್, ಕೆ.ಪುಷ್ಪರಾಜ್, ಗುಣಸಾಗರ ರವಿ ಕುಮಾರ್, ಮಧುಕುಮಾರ ರಾಜ್ ಅರಸ್, ಈಶ್ವರಳ್ಳಿ ಮಹೇಶ್, ಎಚ್.ಸಿ.ಕಲ್ಮರುಡಪ್ಪ ಸೇರಿದಂತೆ ಇತರೆ ಮುಖಂಡರು ಇದ್ದರು.

Union Minister V. Somanna honored at District BJP Office Panchajanya

About Author

Leave a Reply

Your email address will not be published. Required fields are marked *

You may have missed