September 8, 2024

ಪತ್ರಕರ್ತರ ಸಮಸ್ಯೆಗಳಿಗೆ ಹೊರನಾಡು ಶ್ರೀ ಕ್ಷೇತ್ರ ಸದಾ ಸ್ಪಂದಿಸಲಿದೆ

0
ಶ್ರೀ ಅನ್ನಪೂರ್ಣೇಶ್ವರಿ ದೇವಾಸ್ಥಾನ ಹೊರನಾಡಿನಲ್ಲಿ ನಡೆದ ಪತ್ರಿಕಾ ದಿನಾಚರಣೆ

ಶ್ರೀ ಅನ್ನಪೂರ್ಣೇಶ್ವರಿ ದೇವಾಸ್ಥಾನ ಹೊರನಾಡಿನಲ್ಲಿ ನಡೆದ ಪತ್ರಿಕಾ ದಿನಾಚರಣೆ

ಹೊರನಾಡು: ಪತ್ರಕರ್ತರ ಸಮಸ್ಯೆಗಳಿಗೆ ಹೊರನಾಡು ಶ್ರೀ ಕ್ಷೇತ್ರ ಸದಾ ಸ್ಪಂದಿಸಲಿದೆ ಎಂದು ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತರಾದ ಶ್ರೀ ಜಿ,ಭೀಮೇಶ್ವರ ಜೋಷಿ ತಿಳಿಸಿದರು.

ಶನಿವಾರ ಶ್ರೀ ಅನ್ನಪೂರ್ಣೇಶ್ವರಿ ದೇವಾಸ್ಥಾನ ಹೊರನಾಡಿನಲ್ಲಿ ನಡೆದ ಜಿಲ್ಲಾ ಪರ್ತಕರ್ತರ ಸಂಘ(ರಿ) ಚಿಕ್ಕಮಗಳೂರು ಪತ್ರಿಕಾ ದಿನಾಚರಣೆ ಹಾಗೂ ಮತ್ರಹರ್ತರ ತರಬೇತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಿಗೆ ಯಾವುದೇ ಜಾತಿ ಭೇದದ ಬೇಲಿ ಇರುವುದಿಲ್ಲ ವಸ್ತು ನಿಷ್ಠವಾದ ವಿಷಯಗಳನ್ನು ಸಮಾಜದ ಮುಂದೆ ತೆರೆದಿಡುವ ಜವಬ್ದಾರಿ ಪತ್ರಕರ್ತರದ್ದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ತಮ್ಮಗಳ ಪಾತ್ರ ಮಹತ್ವವಾದುದು ಪ್ರಜಾಪ್ರಭುತ್ವ ವ್ಯವಸ್ಥೆ ಸದೃಡವಾಗಿ ನಿಲ್ಲಲು ಪತ್ರಿಕಾ ರಂಗದ ಪಾತ್ರ ಹಿರಿದು.ಹಿರಿಯರ ಮಾರ್ಗದರ್ಶನದಲ್ಲಿ ಯುವ ಪತ್ರಕರ್ತರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವ ರೀತಿಯಲ್ಲಿ ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿಯುವ ವೃತ್ತಿ ಧರ್ಮ ಪಾಲಿಸಬೇಕು ಎಂದರು.

ಶ್ರೀ ಕ್ಷೇತ್ರ ೧೯೯೧ ರಿಂದ ವಿದ್ಯಾಭ್ಯಾಸಕ್ಕೆ ಆರೋಗ್ಯ ವಿಮೆಗಳಂತಹ ಕಾರ್ಯಗಳಿಗೆ ಸಹಾಯ ನೀಡುತ್ತಾ ಬಂದಿದ್ದು ಇಲ್ಲಿ ಪತ್ರಕರ್ತರಿಗೂ ಆದ್ಯತೆ ನೀಡಲಾಗಿದೆ ನಿಮ್ಮೊಂದಿಗೆ ಸದಾ ಕ್ಷೇತ್ರ ನಿಲ್ಲುತ್ತದೆ ಎಂದರು.

ಸಮಾಜಮುಖಿ ವರದಿಮಾಡುವ ಉತ್ತಮ ಪತ್ರಕರ್ತರನಿಗೆ ಶ್ರೀ ಕ್ಷೇತ್ರದ ವತಿಯಿಂದ ಪ್ರತಿ ವರ್ಷ ಸನ್ಮಾನಿಸಲಾಗುವುದು ಎಂದರು.

ಪ್ರಾಸ್ತಾವಿಕ ನುಡಿ ಮಾತನಾಡಿದ ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷರಾದ ಜಿ,ಎಂ,ರಾಜಶೇಖರ್ ೮೭ ವರ್ಷದ ಇತಿಹಾಸ ಹೊಂದಿರುವ ನಮ್ಮ ಸಂಘವು ಹತ್ತು ಹಲವು ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ನಮ್ಮ ಸಂಘ ಅಸ್ತಿತ್ವಕ್ಕೆ ಬಂದ ನಂತರ ಗ್ರಾಮೀಣ ಭಾಗದ ಪತ್ರಕರ್ತರನ್ನು ಮುನ್ನಲೆಗೆ ತರುವ ಕೆಲಸವಾಗಿದೆ. ಜಿಲ್ಲಾ ಸಂಘವು ಸಂಘವು ಶೃಂಗೇರಿ ಹಾಗೂ ಅಜ್ಜಂಪುರ ತಾಲೂಕ್ ಗಳಲ್ಲಿ ಪತ್ರಿಕಾ ಭವನ ನಿರ್ಮಾಣ ಕೈಗೊಂಡಿದ್ದು ಕ್ಷೇತ್ರದ ವತಿಯಿಂದ ಸಹಾಯ ಮಾಡುವಂತೆ ಮನವಿ ಮಾಡಿದರು.

ಪತ್ರಕರ್ತರ ಮಕ್ಕಳಿಗೆ ವಿದ್ಯಾಭ್ಯಾಕ್ಕೆ ಪತ್ರಕರ್ತರಿಗೆ ಆರೋಗ್ಯ ವಿಮೆಯಂತಹ ಕಾರ್ಯಗಳಿಗೆ ಕ್ಷೇತ್ರದ ವತಿಯಿಂದ ಸಹಾಯ ನೀಡುವಂತೆ ಮನವಿ ಮಾಡಿದರು.ಈಗಾಗಲೆ ನಾವುಗಳು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಉಚಿತ ಬಸ್ ಪಾಸ್, ಯಶಸ್ವಿನ್ ಕಾರ್ಡ್, ಆಯುಷ್‌ಮಾನ್‌ಕಾರ್ಡ್ ಆರೋಗ್ಯವಿಮೆ ಸೇರಿದಂತೆ ಹತ್ತು ಹಲವು ಕಾರ್ಯಗಳ ನ್ನು ಪತ್ರಕರ್ತರ ಹಿತದೃಷಿಯಿಂದ ನಡೆಸಿಕೊಂಡು ಬರುತ್ತಿದ್ದು ಶ್ರೀ ಕ್ಷೇತ್ರವು ಸಹ ನಮ್ಮೊಂದಿಗೆ ನಿಲ್ಲಲಿ ಎಂದರು.

ಕಾರ್ಯಕ್ರಮ ಉದ್ದೇಶಿ ಮಾತನಾಡಿದ ರಾಮನಾರಾಯಣ ಜೋಷಿ ಅವರು ಪ್ರತಿಯೊಬ್ಬ ವ್ಯಕ್ತಿ ತಾನು ಮಾಡುವ ವೃತ್ತಿಗೆ ಸರಿಯಾದ ನ್ಯಾಯ ಒದಗಿಸಿದಾಗ ಮಾತ್ರ ವೃತ್ತಿ ಜೀವನದ ಬದುಕಿಗೆ ನಿಜವಾದ ಅರ್ಥಬರಲಿದೆ ಎಂದರು. ಸಮಾಜದ ಸಮಸ್ಯೆಗಳನ್ನು ಎತ್ತಿಹಿಡಿಯುವ ಕೆಲಸವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ವಾಗಲು ಸಾಧ್ಯ ಅಂತಹ ಕೆಲಸ ಪತ್ರಿಕೆಗಳಿಂದ ಆಗುತ್ತಿದ್ದು ನಿಮ್ಮೆಲ್ಲರ ಕೊಡುಗೆ ಅಪಾರ ಎಂದರು.

ಪತ್ರಿಕೋದ್ಯಮದಿಂದ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಸಾಧ್ಯ ಆಗಾಗಿ ಮಾಧ್ಯಮಗಳು ಯಾರೊಬ್ಬರ ಹೊಗಳು ಭಟ್ಟರಾಗದೆ ಸಮಾಜದ ನೈಜ ಚಿತ್ರಣವನ್ನು ಬಿಂಬಿಸುವಂತಾಗಬೇಕು ಎಂದರು.

ನಾವುಗಳು ವೈಯಕ್ತಿಕವಾಗಿ ನಮ್ಮ ಪೂರ್ವಿಕರ ಹೆಸರಿನಲ್ಲಿ ೨ ಲಕ್ಷ ರೂ ದತ್ತಿ ನಿಧಿಯನ್ನು ಜಿಲ್ಲಾಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ಗೆ ನೀಡುತ್ತಿದ್ದು ಇದರಿಂದ ಬರುವಂತಹ ಬಡ್ಡಿ ಹಣದಿಂದ ಉತ್ತಮ ವರದಿ ಪ್ರಕಟಿಸುವ ಪತ್ರಕರ್ತರಿಗೆ ವಾರ್ಷಿಕವಾಗಿ ಸನ್ಮಾನಿಸುವಂತೆ ಸಲಹೆ ನೀಡಿದರು.

ಪತ್ರಕರ್ತರ ಕಾರ್ಯಗಾರವನ್ನು ಉದ್ದೇಶಿಸಿ ಶ್ರೀ ಹನುಮಂತಪ್ಪ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಚಿಕ್ಕಮಗಳೂರು ಮಾತನಾಡಿ ನೂತನವಾಗಿ ಭಾರತ ನ್ಯಾಯ ಸಂಹಿತೆ ಜಾರಿಗೊಂಡಿದ್ದು ಶಿಕ್ಷೆಯ ಪ್ರಮಾಣ ಅದರ ಉದ್ದೇಶಗಳು ಯಾತಾವತ್ತಾಗಿದ್ದು ದಂಡದ ಪ್ರಮಾಣ ಹೆಚ್ಚಿಸಲಾಗಿದೆ.

ಡಿಜಿಟಲ್ ಸಾಕ್ಷಿಗಳನ್ನು ಬದಲಾದ ಕಾನೂನಿನಲ್ಲಿ ಪರಿಗಣಿಸುತ್ತಿದ್ದು ಪತ್ರಕರ್ತರು ಸುದ್ದಿ ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುವಾಗ ಜಾಗೃತಿಯಿಂದ ಸುದ್ದಿ ಪ್ರಸಾರ ಮಾಡುವ ಜವಬ್ದಾರಿ ಪತ್ರಕರ್ತರದ್ದು ವಿದ್ಯಾರ್ಥಿಗಳಲ್ಲಿ ಕಾನೂನಿನ ಪ್ರಜ್ಞೆ ಮೂಡಿಸುವ ಜವಬ್ದಾರಿ ನಮ್ಮೆಲ್ಲರದ್ದು ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರವು ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು ಪತ್ರಕರ್ತರು ನಮ್ಮೊಂದಿಗೆ ಸಹಕರಿಸಿ ಎಂದರು.

ಇಂದಿನ ಸಮಾಜದಲ್ಲಿ ಗುರು ಹಿರಿಯರ ಮೇಲೆ ಗೌರವ ನೀಡುವ ಭಾವನೆ ಕಡಿಮೆಯಾಗುತ್ತಿರುವುದು ವಿಷಾಧಕರ ಯುವ ಪೀಳೀಗೆಗೆ ಗುರು ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸುವುದು ಅನಿವಾರ್‍ಯವಾಗಿದೆ ಇಂದಿನ ಯುವಪೀಳೀಗೆಗೆ ಇತಿಹಾಸದ ಬಗ್ಗೆ ತಿಳಿಯದಿರುವುದು ಕಳವಳದ ಸಂಗತಿ ಇನ್ನಾದರು ನಮ್ಮ ಪೂರ್ವಿಕರ ಇತಿಹಾಸವನ್ನು ತಿಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಠಿಗಳಾದ ರಾಜಲಕ್ಷ್ಮೀ ಜೋಷಿ, ಶ್ರಿ ರಾಜಗೋಪಾಲ್ ಜೋಷಿ, ಜಿಲ್ಲಾ ಸಮಿತಿ ಸದಸ್ಯರಾದ ಪ್ರಸನ್ನ, ರಾಜೇಶ್, ಕುಮಾರ್, ತಾಲೂಕ್ ಸಂಘದ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Press Day function held at Sri Annapurneswari Devasthanam

 

About Author

Leave a Reply

Your email address will not be published. Required fields are marked *

You may have missed