September 7, 2024

ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿ

0
ಅಸೋಸಿಯೇಷನ್ ಅಧ್ಯಕ್ಷ ನಯನ ತಳವಾರ ಸುದ್ದಿಗೋಷ್ಠಿ

ಅಸೋಸಿಯೇಷನ್ ಅಧ್ಯಕ್ಷ ನಯನ ತಳವಾರ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಇಲ್ಲಿನ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಜು.೨೬, ೨೭, ೨೮ ರಂದು ಮೂರು ದಿನಗಳ ಕಾಲ ಜ್ಯೋತಿನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ನಯನ ತಳವಾರ ತಿಳಿಸಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ೧೩ ವರ್ಷ ವಯೋಮಿತಿಯೊಳಗಿನ ಫಿಡೆ ರೇಟಿಂಗ್ ಪಂದ್ಯಾವಳಿಯು ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಏರ್ ಡೆಕ್ಕನ್ ವಿಮಾನ ಖ್ಯಾತಿಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆಂದು ಹೇಳಿದರು.

ರಾಷ್ಟ್ರಮಟ್ಟದ ಆಯ್ಕೆಗಾಗಿ ಕರ್ನಾಟಕದ ಓಪನ್ ಅಂಡರ್ ೧೩ ಹಾಗೂ ಬಾಲಕಿಯರಿಗಾಗಿ ರಾಜ್ಯ ಗರ್ಲ್ಸ್ ಅಂಡರ್ ೧೩ ಫೀಡೆ ರ್‍ಯಾಂಕಿಂಗ್ ಚೆಸ್ ಪಂದ್ಯಾವಳಿ ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೩೫೦ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪಂದ್ಯಾವಳಿಯು ಕ್ಲಾಸಿಕ್ ಮಾದರಿಯಲ್ಲಿ ನಡೆಯಲಿದ್ದು, ಇಲ್ಲಿ ಆಯ್ಕೆಯಾದವರು ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆಯಲಿದ್ದಾರೆ. ದಿನಕ್ಕೆ ಮೂರರಂತೆ ಮೂರು ದಿನಗಳ ಕಾಲ ೯ ಪಂದ್ಯಗಳು ನಡೆಯಲಿದ್ದು ಅಂತರಾಷ್ಟ್ರೀಯ ರೇಪರಿಗಳ ಸಮ್ಮುಖದಲ್ಲಿ ವಿಜೇತರ ಆಯ್ಕೆ ನಡೆಲಿದೆ ಎಂದರು.

ಅಸೋಸಿಯೇಷನ್ ಉಪಾಧ್ಯಕ್ಷ ರಘು ಜನ್ನಾಪುರ ಮಾತನಾಡಿ, ಈ ಪಂದ್ಯಾವಳಿಯಲ್ಲಿ ೭೨ ಸಾವಿರ ನಗದು ಸೇರಿದಂತೆ ೪೦ ಟ್ರೋಫಿಗಳನ್ನು ನೀಡಲಿದ್ದು, ಭಾಗವಹಿಸುವ ಆಟಗಾರರಿಗೆ ಫಿಡೆ ರೇಟಿಂಗ್ ಕೂಡ ದೊರೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಗ್ರಾಂಡ್ ಮಾಸ್ಟರ್ ಹಾಗೂ ಇಂಟರ್ ನ್ಯಾಷನಲ್ ಮಾಸ್ಟರ್ ಆಕಾಂಕ್ಷಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಈ ಚೆಸ್ ಪಂದ್ಯಾವಳಿಯಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ಶಾಸಕರುಗಳಾದ ಹೆಚ್.ಡಿ ತಮ್ಮಯ್ಯ, ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡ, ಡಾ. ಧನಂಜಯ ಸರ್ಜಿ, ಬಿ.ಬಿ ನಿಂಗಯ್ಯ, ಡಾ. ಅಂಶುಮಂತ್, ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ, ಜಿ.ಪಂ ಸಿಇಓ ಕೀರ್ತನ, ವರಸಿದ್ದಿ ವೇಣುಗೋಪಾಲ್, ಜಿ.ಎಂ ರಾಜಶೇಖರ್, ರಂಜನ್ ಅಜಿತ್‌ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಸೋಸಿಯೇಷನ್ ಸಹಕಾರ್ಯದರ್ಶಿ ಗಿರೀಶ್ ಮಣ್ಣಿಕೆರೆ, ರಘು, ಪ್ರಸನ್ನಕುಮಾರ್, ಶಿವಕಾಶಿ ಮತ್ತಿತರರು ಉಪಸ್ಥಿತರಿದ್ದರು.

National level chess tournament for three days

About Author

Leave a Reply

Your email address will not be published. Required fields are marked *

You may have missed