September 16, 2024

ಜಿಲ್ಲಾದ್ಯಂತ ಕ್ಷೀಣಿಸಿದ್ದ ಮಳೆ ಮತ್ತೆ ಮಲೆನಾಡುಭಾಗದಲ್ಲಿ ಅಬ್ಬರ

0
ಚಿಕ್ಕಮಗಳೂರು: ಜಿಲ್ಲಾದ್ಯಂತ ಕ್ಷೀಣಿಸಿದ್ದ ಮಳೆ ಮತ್ತೆ ಮಲೆ ನಾಡು ಭಾಗದಲ್ಲಿ ಮತ್ತೇ ಮುಂದೂವರೆದಿದೆ. ಸೋಮ ವಾರ ರಾತ್ರಿ ಭಾರೀ ಮಳೆಯಾಗಿ ದ್ದು ಚಿಕ್ಕಮಗಳೂರು ತಾಲೂಕು ಹೊರತುಪಡಿಸಿ, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಭಾರೀ ಮಳೆಯಿಂದ ತುಂಗ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಭದ್ರಾ ನದಿ ನೀರಿನಲ್ಲಿ ಹೊರನಾಡು-ಕಳಸ ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೇ ಮುಳುಗಿದೆ. ಬಾಳೆಹೊನ್ನೂರು ಸಮೀಪದ ಮಹಲ್ಗೋಡು, ಭೈರೇಗುಡ್ಡ ಗ್ರಾಮಗಳಿಗೆ ಭದ್ರಾ ನದಿ ನೀರು ನುಗ್ಗಿದ್ದು, ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಕ್ಕೆ ಸ್ಥಳಾಂತರ ಮಾಡಲಾ ಗಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲಾದ್ಯಂತ ಭಾರೀ ಪ್ರಮಾಣದ ಗಾಳಿ ಮಳೆ ಎರಡು ದಿನಗಳ ಕಾಲ ಕಡಿಮೆಯಾಗಿತ್ತು. ಸೋಮವಾರ ಸಂಜೆಯಿಂದ ಭಾರೀ ಮಳೆಯಾಗುತ್ತಿದೆ. ಭದ್ರಾನದಿ ನೀರು ನದಿಪಾತ್ರದ ತೋಟಗಳಿಗೆ ನುಗ್ಗಿದೆ. ಮನೆಗ ಳಿಗೂ ನೀರು ನುಗ್ಗಿದ್ದು ಸ್ಥಳಾಂತ ರ ಮಾಡಲಾಗಿದೆ. ಕಳಸ ಬಾಳೆಹೊನ್ನೂರು ಸಂಪರ್ಕ ಕಡಿತಗೊಂಡಿದೆ. ಬಾಳೆಹೊನ್ನೂರು ಪಟ್ಟಣದ ಸಮೀಪ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ಸಂತೆ ಮೈದಾನ ಜಲಾವೃತಗೊಂಡಿದೆ. ಬಾಳೆಹೊನ್ನೂರು, ಮಾಗುಂಡಿ, ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿದೆ. ಕಳಸ ಸಮೀಪದ ಜಾಂಬಳೆ ಎಂಬಲ್ಲಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿರುವ ಪರಿಣಾಮ ಕುದುರೆಮುಖ ಕಳಸ ರಸ್ತೆ ಮೇಲೆ ನೀರು ಹರಿಯಲಾರಂಭಿಸಿದೆ. ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಕಳಸ ಪಟ್ಟಣ ಸಮೀಪ ಕಳಸ ಕಳಕೋಡು ಸಂಪರ್ಕದ ಕೋಟೆಹೊಳೆ ಸೇತುವೆ ಮುಳುಗುವ ಹಂತದಲ್ಲಿದೆ. ಇದುವರೆಗೂ ಈ ಸೇತುವೆ ಮುಳುಗಿರುವ ಇತಿಹಾಸವೇ ಇಲ್ಲ. ಭದ್ರಾ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು ಸೇತುವೆ ಮುಳುಗುವ ಆತಂಕ ಎದುರಾಗಿದೆ. ಸೇತುವೆ ಸ್ವಲ್ಪ ದೂರದಲ್ಲಿರುವ ಕೊಳಮಗ್ಗೆ ಎಂಬಲ್ಲಿ ಭದ್ರಾ ನೆರೆ ನೀರು ಕಳಸ ಕಳಕೋಡು ರಸ್ತೆ ಮೇಲೆ ಹರಿಯುತ್ತಿದೆ.ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂ ಡಿದೆ. ಹುಳುವಳ್ಳಿ ಮೂಲಕ ಹೊರನಾಡು ಸಂಪರ್ಕಿಸುವ ರಸ್ತೆ ಮೇಲೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳಸ ಹೊರನಾಡು ಶೃಂಗೇರಿ ಸಂಪರ್ಕ ರಸ್ತೆಯ ಅಬ್ಬಿಕಲ್ಲು ಎಂಬಲ್ಲಿ ರಸ್ತೆ ಬಳಿ ಭೂಕುಸಿತ ಉಂಟಾಗಿದೆ. ಮಳೆ ಮುಂದೂವರೆದಲ್ಲಿ ರಸ್ತೆ ಕುಸಿಯುವ ಆತಂಕವಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ ನೆಮ್ಮಾರು ಗ್ರಾಮಗಳಲ್ಲಿ ನದಿ ನೀರು ಅಕ್ಕಪಕ್ಕದ ಹೊಲ ಗದ್ದೆ ರಸ್ತೆಗಳ ಮೇಲೆ ನೀರು ಹರಿಯಲಾರಂಭಿಸಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ಪ್ಯಾರಲರ್ ರಸ್ತೆ, ಜಲಾವೃತ ಗೊಂಡಿದೆ. ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು ಅಕ್ಕಪಕ್ಕದ ಕಾಫಿ, ಅಡಿಕೆ, ಶುಂಠಿ ಗದ್ದೆಗಳು ಜಲಾವೃತ ಗೊಂಡಿದೆ. ಚಾರ್ಮಾಡಿ ಘಾಟಿ 9ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿದ್ದು, ಮಂಗಳವಾರ ಬೆಳಿಗ್ಗೆ ಕೆಲಹೊತ್ತು ಸಂಚಾರಕ್ಕೆ ತೊಂದರೆಯಾಗಿತ್ತು. ಮಣ್ಣು ಮರ ತೆರವು ಮಾಡಿದ ನಂತರ ಸಂಚಾರಕ್ಕೆ ಅವಕಾಶ ನೀಡಲಾಯಿತು. ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ವಾಹನ ಸವಾರರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕೊಪ್ಪ ತಾಲೂಕಿನ ಹುಲ್ಲಿನಗದ್ದೆ ಎಂಬಲ್ಲಿ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು ಕೊಗ್ರೆ, ಜಯಪುರ, ಶೃಂಗೇರಿ ಸಂಪರ್ಕ ಕಡಿತಗೊಂಡಿದೆ. ನೇಡಂಗಿ ಎಂಬಲ್ಲಿ ರಾತ್ರಿ ಧರೆ ಕುಸಿದು ರಸ್ತೆ ಮೇಲೆ ಮಣ್ಣು ಬಿದ್ದಿದೆ. ಶೃಂಗೇರಿ ಮೆಣಸಿನ ಹಾಡ್ಯ ಹೊರನಾಡು ಸಂಪರ್ಕ ಕಡಿತಗೊಂಡಿದೆ.

ಚಿಕ್ಕಮಗಳೂರು: ಜಿಲ್ಲಾದ್ಯಂತ ಕ್ಷೀಣಿಸಿದ್ದ ಮಳೆ ಮತ್ತೆ ಮಲೆ ನಾಡುಭಾಗದಲ್ಲಿ ಮತ್ತೇ ಮುಂದೂವರೆದಿದೆ. ಸೋಮವಾರ ರಾತ್ರಿ ಭಾರೀ ಮಳೆಯಾಗಿ ದ್ದು ಚಿಕ್ಕಮಗಳೂರು ತಾಲೂಕು ಹೊರತುಪಡಿಸಿ, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಭಾರೀ ಮಳೆಯಿಂದ ತುಂಗ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಭದ್ರಾ ನದಿ ನೀರಿನಲ್ಲಿ ಹೊರನಾಡು-ಕಳಸ ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೇ ಮುಳುಗಿದೆ. ಬಾಳೆಹೊನ್ನೂರು ಸಮೀಪದ ಮಹಲ್ಗೋಡು, ಭೈರೇಗುಡ್ಡ ಗ್ರಾಮಗಳಿಗೆ ಭದ್ರಾ ನದಿ ನೀರು ನುಗ್ಗಿದ್ದು, ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಕ್ಕೆ ಸ್ಥಳಾಂತರ ಮಾಡಲಾ ಗಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಜಿಲ್ಲಾದ್ಯಂತ ಭಾರೀ ಪ್ರಮಾಣದ ಗಾಳಿ ಮಳೆ ಎರಡು ದಿನಗಳ ಕಾಲ ಕಡಿಮೆಯಾಗಿತ್ತು. ಸೋಮವಾರ ಸಂಜೆಯಿಂದ ಭಾರೀ ಮಳೆಯಾಗುತ್ತಿದೆ.

ಭದ್ರಾನದಿ ನೀರು ನದಿಪಾತ್ರದ ತೋಟಗಳಿಗೆ ನುಗ್ಗಿದೆ. ಮನೆಗ ಳಿಗೂ ನೀರು ನುಗ್ಗಿದ್ದು ಸ್ಥಳಾಂತ ರ ಮಾಡಲಾಗಿದೆ. ಕಳಸ ಬಾಳೆಹೊನ್ನೂರು ಸಂಪರ್ಕ ಕಡಿತಗೊಂಡಿದೆ. ಬಾಳೆಹೊನ್ನೂರು ಪಟ್ಟಣದ ಸಮೀಪ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ಸಂತೆ ಮೈದಾನ ಜಲಾವೃತಗೊಂಡಿದೆ. ಬಾಳೆಹೊನ್ನೂರು, ಮಾಗುಂಡಿ, ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿದೆ.

ಕಳಸ ಸಮೀಪದ ಜಾಂಬಳೆ ಎಂಬಲ್ಲಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿರುವ ಪರಿಣಾಮ ಕುದುರೆಮುಖ ಕಳಸ ರಸ್ತೆ ಮೇಲೆ ನೀರು ಹರಿಯಲಾರಂಭಿಸಿದೆ. ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಕಳಸ ಪಟ್ಟಣ ಸಮೀಪ ಕಳಸ ಕಳಕೋಡು ಸಂಪರ್ಕದ ಕೋಟೆಹೊಳೆ ಸೇತುವೆ ಮುಳುಗುವ ಹಂತದಲ್ಲಿದೆ.

ಇದುವರೆಗೂ ಈ ಸೇತುವೆ ಮುಳುಗಿರುವ ಇತಿಹಾಸವೇ ಇಲ್ಲ. ಭದ್ರಾ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು ಸೇತುವೆ ಮುಳುಗುವ ಆತಂಕ ಎದುರಾಗಿದೆ. ಸೇತುವೆ ಸ್ವಲ್ಪ ದೂರದಲ್ಲಿರುವ ಕೊಳಮಗ್ಗೆ ಎಂಬಲ್ಲಿ ಭದ್ರಾ ನೆರೆ ನೀರು ಕಳಸ ಕಳಕೋಡು ರಸ್ತೆ ಮೇಲೆ ಹರಿಯುತ್ತಿದೆ.ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂ ಡಿದೆ.

ಹುಳುವಳ್ಳಿ ಮೂಲಕ ಹೊರನಾಡು ಸಂಪರ್ಕಿಸುವ ರಸ್ತೆ ಮೇಲೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳಸ ಹೊರನಾಡು ಶೃಂಗೇರಿ ಸಂಪರ್ಕ ರಸ್ತೆಯ ಅಬ್ಬಿಕಲ್ಲು ಎಂಬಲ್ಲಿ ರಸ್ತೆ ಬಳಿ ಭೂಕುಸಿತ ಉಂಟಾಗಿದೆ. ಮಳೆ ಮುಂದೂವರೆದಲ್ಲಿ ರಸ್ತೆ ಕುಸಿಯುವ ಆತಂಕವಿದೆ.

ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ ನೆಮ್ಮಾರು ಗ್ರಾಮಗಳಲ್ಲಿ ನದಿ ನೀರು ಅಕ್ಕಪಕ್ಕದ ಹೊಲ ಗದ್ದೆ ರಸ್ತೆಗಳ ಮೇಲೆ ನೀರು ಹರಿಯಲಾರಂಭಿಸಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ಪ್ಯಾರಲರ್ ರಸ್ತೆ, ಜಲಾವೃತ ಗೊಂಡಿದೆ. ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು ಅಕ್ಕಪಕ್ಕದ ಕಾಫಿ, ಅಡಿಕೆ, ಶುಂಠಿ ಗದ್ದೆಗಳು ಜಲಾವೃತ ಗೊಂಡಿದೆ.

ಚಾರ್ಮಾಡಿ ಘಾಟಿ 9ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿದ್ದು, ಮಂಗಳವಾರ ಬೆಳಿಗ್ಗೆ ಕೆಲಹೊತ್ತು ಸಂಚಾರಕ್ಕೆ ತೊಂದರೆಯಾಗಿತ್ತು. ಮಣ್ಣು ಮರ ತೆರವು ಮಾಡಿದ ನಂತರ ಸಂಚಾರಕ್ಕೆ ಅವಕಾಶ ನೀಡಲಾಯಿತು. ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ವಾಹನ ಸವಾರರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕೊಪ್ಪ ತಾಲೂಕಿನ ಹುಲ್ಲಿನಗದ್ದೆ ಎಂಬಲ್ಲಿ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು ಕೊಗ್ರೆ, ಜಯಪುರ, ಶೃಂಗೇರಿ ಸಂಪರ್ಕ ಕಡಿತಗೊಂಡಿದೆ. ನೇಡಂಗಿ ಎಂಬಲ್ಲಿ ರಾತ್ರಿ ಧರೆ ಕುಸಿದು ರಸ್ತೆ ಮೇಲೆ ಮಣ್ಣು ಬಿದ್ದಿದೆ. ಶೃಂಗೇರಿ ಮೆಣಸಿನ ಹಾಡ್ಯ ಹೊರನಾಡು ಸಂಪರ್ಕ ಕಡಿತಗೊಂಡಿದೆ.

The rains that had subsided across the district were heavy again in the hilly areas

About Author

Leave a Reply

Your email address will not be published. Required fields are marked *