September 19, 2024

ಪ್ಲಾಸ್ಟಿಕ್ ಲೋಟ ಬಳಸಿದ ಬಾರ್ & ರೆಸ್ಟೋರೆಂಟ್‌ಗಳ ಮೇಲೆ ನಗರಸಭೆ ದಾಳಿ

0
ಪ್ಲಾಸ್ಟಿಕ್ ಲೋಟ ಬಳಸಿದ ಬಾರ್ & ರೆಸ್ಟೋರೆಂಟ್‌ಗಳ ಮೇಲೆ ನಗರಸಭೆ ದಾಳಿ

ಚಿಕ್ಕಮಗಳೂರು: ನಗರ ವ್ಯಾಪ್ತಿಯ ಬಾರ್ & ರೆಸ್ಟೋರೆಂಟ್‌ಗಳಲ್ಲಿ ಅನಧಿಕೃತ ಪ್ಲಾಸ್ಟಿಕ್ ಲೋಟಗಳನ್ನು ಬಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಇಂದು ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ನೇತೃತ್ವದಲ್ಲಿ ಆರೋಗ್ಯ ಪರಿವೀಕ್ಷಕರ ತಂಡ ದಾಳಿಮಾಡಿ ೪ ಬಾರ್‌ಗಳಿಗೆ ತಲಾ ೧ ಸಾವಿರ ದಂಡ ವಿಧಿಸಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಾಯುಕ್ತ ಬಿ.ಸಿ ಬಸವರಾಜ್ ಅವರು ನಗರ ವ್ಯಾಪ್ತಿಯ ಬಾರ್‌ಗಳಲ್ಲಿ ಪ್ಲಾಸ್ಟಿಕ್ ಲೋಟ ಬಳಕೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಬಾರ್‌ಗಳಿಗೆ ದಿಢೀರ್ ದಾಳಿಮಾಡಿ ಗೃಹ ಮಂಡಳಿ ಬಡಾವಣೆಯಲ್ಲಿರುವ ಅಶ್ವಮೇಧ ವೈನ್ಸ್, ರಿಲ್ಯಾಕ್ಸ್ ಇನ್ ಬಾರ್, ಬೈಪಾಸ್ ರಸ್ತೆಯ ವಿಜಯ ವೈನ್ಸ್, ಹಿರೇಮಗಳೂರು ಅಂಬೇಡ್ಕರ್ ವೃತ್ತದಲ್ಲಿರುವ ಆಶ್ರಯ ಬಾರ್‌ನಲ್ಲಿ ಯತೇಚ್ಚವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದನ್ನು ಪತ್ತೆಹಚ್ಚಿ ದಂಡ ವಿಧಿಸಲಾಗಿದೆ ಎಂದರು.

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಮದ್ಯ ಸೇವಿಸಲು ಪ್ಲಾಸ್ಟಿಕ್ ಲೋಟಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಇಂದು ದಿಢೀರ್ ದಾಳಿಮಾಡಲಾಗಿದೆ ಎಂದರು.

ಕನಿಷ್ಟ ೫೦ ಕೆ.ಜಿ ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡಿದ್ದು, ಪ್ರಥಮ ಬಾರಿ ಆಗಿರುವುದರಿಂದ ಪ್ರತೀ ಬಾರ್‌ಗೆ ೧ ಸಾವಿರ ರೂಗಳಂತೆ ದಂಡ ವಿಧಿಸಲಾಗಿದೆ. ಪುನಾಃ ಇದೇ ವರ್ತನೆ ಮುಂದುವರೆದರೆ ಬಾರ್ & ರೆಸ್ಟೋರೆಂಟ್‌ನ ಉದ್ಯಮಿ ಪರವಾನಗಿಯನ್ನು ರದ್ದುಪಡಿಸಿ ಅಂಗಡಿಯನ್ನು ಮುಚ್ಚಿಸಲಾಗುವುದೆಂದು ಎಚ್ಚರಿಸಿದರು.

ನಗರದ ಎಲ್ಲಾ ಬಾರ್ & ರೆಸ್ಟೋರೆಂಟ್ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಲೋಟಗಳನ್ನು ಬಳಸಬಾರದು, ಈ ಮೂಲಕ ನಗರಸಭೆಯೊಂದಿಗೆ ಸಹಕರಿಸಿ ಪ್ರಕೃತಿ ಉಳಿಸಿ ಸ್ವಚ್ಚತೆ ಕಾಪಾಡಬೇಕು ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್ ಲೋಟಗಳ ತಯಾರಿಕೆ ನಗರದಲ್ಲಿ ಎಲ್ಲೂ ಉತ್ಪಾದನೆಯಾಗುತ್ತಿಲ್ಲ, ಶಿವಮೊಗ್ಗ, ಹಾಸನ ಸೇರಿದಂತೆ ಪಕ್ಕದ ಜಿಲ್ಲೆಗಳಿಂದ ರಾತ್ರಿ ಸಮಯದಲ್ಲಿ ಬಾರ್‌ಗಳಿಗೆ ಸರಬರಾಜಾಗುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಿರ್ದೇಶನ ನೀಡಿ ಪ್ಲಾಸ್ಟಿಕ್ ಲೋಟ ಸರಬರಾಜಾಗದಂತೆ ತಡೆಯಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದರು.

City council raids bars & restaurants that use plastic cups

About Author

Leave a Reply

Your email address will not be published. Required fields are marked *

You may have missed