September 19, 2024
ಬ್ರಹ್ಮಸಮುದ್ರ ರಂಗಣ್ಣವರ ಕಲ್ಯಾಣ ಮಂಟಪದಲ್ಲಿ ನಡೆದ ಚೂಡಾನಾಥ ಅಯ್ಯರ್ ನುಡಿ ನಮನ

ಬ್ರಹ್ಮಸಮುದ್ರ ರಂಗಣ್ಣವರ ಕಲ್ಯಾಣ ಮಂಟಪದಲ್ಲಿ ನಡೆದ ಚೂಡಾನಾಥ ಅಯ್ಯರ್ ನುಡಿ ನಮನ

ಚಿಕ್ಕಮಗಳೂರು: ಇತ್ತೀಚೆಗೆ ನಿಧನ ಹೊಂದಿದ ಪತ್ರಕರ್ತ ಜಿ.ವಿ.ಚೂಡಾನಾಥ ಅಯ್ಯರ್ ಅವರು ನಿರ್ಭೀತ ಪತ್ರಿಕೋದ್ಯಮ ನಡೆಸಿದ ಜೊತೆಗೆ ಸಾಮಾಜಿಕವಾಗಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಪರಿಚಿತರಾಗಿ ಉಳಿದಿದ್ದಾರೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ ಹೇಳಿದರು.

ನಗರದ ಬ್ರಹ್ಮಸಮುದ್ರ ರಂಗಣ್ಣವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಚೂಡಾನಾಥ ಅಯ್ಯರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಟ್ಟು ಸಾವಿನ ಮಧ್ಯೆ ಹೆಜ್ಜೆ ಗುರುತು ಮೂಡಿಸಿದವರು ಅನೇಕರ ಹೃದಯಗಳಲ್ಲಿ ಹೃದಯಸ್ತರಾಗುತ್ತಾರೆ. ಹಾಗೆಯೇ ಅಯ್ಯರ್ ಅವರು ಒಳ್ಳೆಯ ಪತ್ರಿಕೆಯನ್ನು ನಡೆಸುವ ಮೂಲಕ ಅನೇಕರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.

ಅಯ್ಯರ್ ತುಂಬಾ ಧೈರ್ಯವಂತ ಮನುಷ್ಯರಾಗಿದ್ದರು. ಎಷ್ಟೇ ಕೋಪ ಮಾಡಿಕೊಂಡರು ಅಷ್ಟೇ ಬೇಗನೆ ಮೃಧುವಾಗಿಬಿಡುತ್ತಿದ್ದರು. ಯಾರ ಮೇಲೂ ದ್ವೇಷ ಸಾಧಿಸಿದವರಲ್ಲ. ಈ ಕಾರಣಕ್ಕೆ ಅವರ ಪತ್ರಿಕೆ, ಬರಹ ಎಂದಿಗೂ ಬ್ಲಾಕ್ ಮೇಲ್ ಎನಿಸಲಿಲ್ಲ ಎಂದರು.

ಆರ್‌ಎಸ್‌ಎಸ್‌ನ ಅನೇಕ ಕಾರ್ಯಕ್ರಮಗಳಲ್ಲಿ ಭಾಗಹಿಸುವ ಮೂಲಕ, ಎಬಿವಿಪಿ ಸ್ಥಾಪನೆ ಸೇರಿದಂತೆ ಸಾಮಾಜಿಕವಾಗಿ ಸಹ ಅನೇಕ ಜವಾಬ್ದಾರಿಗಳನ್ನು ತೆಗೆದುಕೊ ನಿಭಾಯಿಸಿದ್ದರು ಎಂದರು.

ಹರಿಹರಪುರ ಪ್ರಬೋಧಿನಿ ಗುರುಕುಲದ ಮುಖ್ಯಸ್ಥರಾದ ಉಮೇಶ್ ರಾವ್ ಅವರು ಮಾತನಾಡಿ, ಅಯ್ಯರ್ ಅವರು ರಾಷ್ಟ್ರೀಯ ವಿಚಾರಧಾರೆಗಳಿಗೆ ಹಾಗೂ ಹಿಂದುತ್ವದ ವಿಷಯಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದವರು. ಸಂಘದ ಹಿರಿಯರ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರು. ಅವರ ಸಾಮಾಜಿಕ ಕಾರ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಚಂದ್ರಬಿಂಬ ಪತ್ರಿಕೆ ಸಂಪಾದಕಿ ವಾಣಿ ಚಂದ್ರಯ್ಯ ನಾಯ್ಡು, ಪತ್ರಕರ್ತ ಸಿ.ಸುರೇಶ್, ರಾಜ್ಯ ಕಾರ್ಯದರ್ಶಿ ಸೀತಾರಾಂ ಭರಣ್ಯ, ಸುಗಮ ಸಂಗೀತ ಗಂಗಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮತ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಷಿ, ಹಾಸನದ ರಾಷ್ಟ್ರಸೇವಿಕಾ ಸಮಿತಿಯ ಶಾಂತಕ್ಕ, ಭಂಡೀಗಡಿ ಶಿವಸ್ವಾಮಿ ಇತರರು ಅಯ್ಯರ್ ಅವರಿಗೆ ನುಡಿ ನಮನ ಸಲ್ಲಿಸಿದರು.

ಅಯ್ಯರ್ ಅವರ ಹಿರಿಯ ಪುತ್ರ ರಾಜೀವ್ ಅಯ್ಯರ್ ಮತ್ತು ಮೊಮ್ಮಗ ಪ್ರತೀಕ್ ಅನಿಸಿಕೆಗಳನ್ನು ಹಂಚಿಕೊಂಡರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಚಿ.ಸ.ಪ್ರಭುಲಿಂಗಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ರೇಖಾ ಪ್ರೇಂಕುಮಾರ್ ಹಾಗೂ ಸುಗಮ ಸಂಗೀತ ಗಂಗಾದ ಸಂಚಾಲಕರಾದ ಸುಮಾ ಪ್ರಸಾದ್ ಗಾಯನ ನಡೆಸಿಕೊಟ್ಟರು.

ಸೀತಾರಾಂ ಅವಧಾನಿ ಸೇರಿದಂತೆ ಅಯ್ಯರ್ ಅವರ ಪತ್ನಿ ಯಶೋಧ ಮತ್ತು ಕುಟುಂಬದವರು, ಹಿತೈಷಿಗಳು, ಬಂಧುಗಳು ಭಾಗವಹಿಸಿದ್ದರು.

Choodanatha Iyer Nudinamana program

About Author

Leave a Reply

Your email address will not be published. Required fields are marked *

You may have missed