September 20, 2024

ಇಂಡಿಯನ್ ಬ್ಯಾಂಕ್ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ವಾಕಥಾನ್

0
ಇಂಡಿಯನ್ ಬ್ಯಾಂಕ್ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ವಾಕಥಾನ್

ಇಂಡಿಯನ್ ಬ್ಯಾಂಕ್ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ವಾಕಥಾನ್

ಚಿಕ್ಕಮಗಳೂರು: ಇಂಡಿಯನ್ ಬ್ಯಾಂಕ್ ಭಾರತದ ಹಣಕಾಸು ಕ್ಷೇತ್ರದಲ್ಲಿ ತನ್ನದೇ ಸೇವೆ ಸಲ್ಲಿಸುತ್ತಾ ಬಂದಿದ್ದು, ಇದೇ ಆಗಸ್ಟ್ ೧೫ ರಂದು ತನ್ನ ೧೧೮ ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದಾಗಿ ಇಂಡಿಯನ್ ಬ್ಯಾಂಕ್ ಚಿಕ್ಕಮಗಳೂರು ಶಾಖೆ ವ್ಯವಸ್ಥಾಪಕ ನರೇಶ್‌ಕುಮಾರ್ ತಿಳಿಸಿದರು.

ಅವರು ನಗರದಲ್ಲಿ ಇಂಡಿಯನ್ ಬ್ಯಾಂಕ್ ೧೧೮ ನೇ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಜಾಗೃತಿ ವಾಕಥಾನ್ ಸಂದರ್ಭದಲ್ಲಿ ಮಾತನಾಡಿ ಭಾರತದ ಅತ್ಯಂತ ಹಳೆಯ ಬ್ಯಾಂಕ್‌ಗಳಲ್ಲೊಂದಾದ ಇಂಡಿಯನ್ ಬ್ಯಾಂಕ್ ಸದಾ ಗ್ರಾಹಕ ಸ್ನೇಹಿ ಸೇವೆ ಸಲ್ಲಿಸುತ್ತಾ ಬಂದಿರುವುದಾಗಿ ಹೇಳಿದರು.

ನಗರತ್ತಿಂಡಿಯನ್ ಬ್ಯಾಂಕ್ ಕಛೇರಿಯಿಂದ ಹೊರಟು ಹನುಮಂತಪ್ಪ ವೃತ್ತ,ಐ.ಜಿ.ರಸ್ತೆ,ಎಂ.ಜಿ.ರಸ್ತೆ,ಆಜಾದ್ ಪಾರ್ಕ್, ಶ್ರೀ ಬೋಳರಾಮೇಶ್ವರ ದೇವಸ್ಥಾನದ ಸುತ್ತಮುತ್ತ ವಾಕಥೋನ್ ನಡೆಸಿ ಬ್ಯಾಂಕಿನ ಸುದೀರ್ಘ ಕಾಲದ ಸೇವೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಅತ್ಯಂತ ಹಿರಿಯ ನಾಗರೀಕರಿಗೆ ಶೇ.೮,ಹಿರಿಯ ನಾಗರೀಕರಿಗೆ ಶೇ. ೭.೭೫, ಹಾಗೂ ಇತರೆ ಸಾರ್ವಜನಿಕರ ಠೇವಣಿಗಳಿಗೆ ಶೇ. ೭.೨೫ ರಷ್ಟು ಬಡ್ಡಿ ನೀಡಲಾಗುತ್ತಿದೆ ಎಂದು ತಿಳಿಸಿದ ನರೇಶ್ ಕುಮಾರ್ ರವರು, ಇಂಡಿಯನ್ ಬ್ಯಾಂಕ್ ದೇಶದಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಮತ್ತು ಜನಪರ ಕಾರ್ಯಕ್ರಮಗಳಿಗೆ ನೆರವಾಗುತ್ತಾ ಬಂದಿದ್ದು ಮುಂದೆಯೂ ಇಂಡಿಯನ್ ಬ್ಯಾಂಕ್ ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.

ನಗರದಲ್ಲಿ ನಡೆಸಿದ ಕಲ್ನಡಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಮತ್ತಿತರರು ಭಾಗವಹಿಸಿದರು.

Walkathon in the city as part of Indian Bank Anniversary

About Author

Leave a Reply

Your email address will not be published. Required fields are marked *