September 20, 2024

ಚಿಕ್ಕಮಗಳೂರು: ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರವಳಿಕೆ ತಜ್ಞ ಡಾ.ಪಿ.ಸೋಮಶೇಖರ್ ವಿರುದ್ದ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ ಆಯುಕ್ತರು ಅಮಾನತ್ತುಗೊಳಿಸಿ ಆದೇಶಿಸಿದ್ದು, ಡಾ|ಪಿ.ಸೋಮಶೇಖರ್ ಅವರು ಕರ್ತವ್ಯದ ವೇಳೆ ದುರ್ವತನೆ ತೋರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.

ಕರ್ತವ್ಯದ ವೇಳೆ ಪಾನಮತ್ತರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅನೇಕ ಶಸ್ತ್ರಚಿಕಿತ್ಸೆ ಪ್ರಕರಣ ಗಳು ವಿಫಲವಾಗಿವೆ. ಇದರಿಂದ ರೋಗಿಗಳು ತೊಂದರೆ ಅನುಭವಿಸಿದ್ದು, ವೈದ್ಯರು ಅನೇಕ ಬಾರೀ ದೂರು ಸಲ್ಲಿಸಿದ್ದಾರೆ. ಮದ್ಯಪಾನ ಮಾಡಿ ತಡವಾಗಿ ಕರ್ತವ್ಯಕ್ಕೆ ಹಾಜರಾಗುವುದು ಹೀಗೆ ಅನೇಕ ಬಾರೀ ದುರ್ವತನೆ ತೋರಿದ್ದಾರೆ ಎನ್ನಲಾಗಿದೆ.

ವೈದ್ಯರ ದುರ್ವತೆನೆ ಕುರಿತು ನಾಲ್ಕು ಬಾರೀ ಕಾರಣ ಕೇಳಿ ನೋಟಿಸ್ ನೀಡಿದ್ದು, ನೋಟಿಸ್‌ಗೆ ಸಮಜಾಯಿಸಿ ನೀಡದೆ ತಮ್ಮ ಪ್ರವೃತ್ತಿಯನ್ನು ಮುಂದೂವರೆಸಿದ್ದಾರೆ. ಈ ಹಿನ್ನಲೆಯಲ್ಲಿ ಆಯುಕ್ತರು ಇಲಾಖೆ ವಿಚಾರಣೆಗೆ ಬಾಕೀ ಇರಿಸಿ ಅರವಳಿಕೆ ತಜ್ಞ ವೈದ್ಯ ಡಾ|ಪಿ. ಸೋಮಶೇಖರ್ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Anesthesiologist Dr. P. Somashekhar suspended

About Author

Leave a Reply

Your email address will not be published. Required fields are marked *

You may have missed