September 19, 2024

ಮುಖ್ಯಮಂತ್ರಿಯಿಂದ ವಾರ್ತಾ ಇಲಾಖೆ ಕಚೇರಿ ದುರುಪಯೋಗ

0
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸುದ್ದಿಗೋಷ್ಠಿ

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದಿಂದ ವಾರ್ತಾ ಇಲಾಖೆ ಕಚೇರಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಅಧಿಕೃತ ಖಾತೆಯಿಂದ ದುರುಪಯೋಗವಾಗುತ್ತಿದೆ. ಫೇಸ್‌ಬುಕ್‌ನಲ್ಲಿರುವ ಸಿಎಂ ಹೆಸರಿನ ಖಾತೆ ಕಾಂಗ್ರೆಸ್ ಮುಖವಾಣಿಯಾಗಿ ಬದಲಾಗಿದೆ ಎಂದು ದೂರಿದರು.

ಸಿಎಂ ಹೆಸರಿನ ಖಾತೆಯಿಂದ ರಾಜ್ಯಪಾಲರು, ಮೋದಿ, ಬಿಜೆಪಿಯನ್ನು ಟೀಕೆ ಮಾಡಲು ಬಳಕೆಮಾಡಿ ಕೊಳ್ಳ ಲಾಗುತ್ತಿದೆ ಎಂದು ಆರೋಪಿಸಿದ ಅವರು,ಸಿಎಂ ಆಫ್ ಕರ್ನಾಟಕ ಎನ್ನುವ ಫೇಸ್ ಬುಕ್ ಖಾತೆ ಜನರಿಗೆ ಸರ್ಕಾರದ ಬಗ್ಗೆ ಮಾಹಿತಿ ನೀಡುವುದಕ್ಕೆ ಆದರೆ ಬಿಜೆಪಿಯನ್ನು ಟೀಕೆ ಮಾಡಲು ಬಳಕೆ ಮಾಡಲಾಗುತ್ತಿದೆ, ಸಿಎಂ ಹೆಸರಿನ ಖಾತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ನಿರ್ವಹಿಸುತ್ತಿದ್ದಾರೋ ಅಥವಾ ವಾರ್ತಾಧಿಕಾರಿಗಳು ನಿರ್ವಹಿಸುತ್ತಿದ್ದರೋ ಎಂಬ ಅನುಮಾನ ಮಾಡುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಯಡಿಯೂರಪ್ಪನವರ ದಾರಿಯಲ್ಲಿ ಹೋಗಲು ಅವಕಾಶ ಇದೆ.ರಾಮಕೃಷ್ಣ ಹೆಗಡೆ ದಾರಿಯಲ್ಲಿ ಹೋಗುವ ಅವಕಾಶವನ್ನ ಕಳೆದುಕೊಂಡಿದ್ದೀರಿ ಹೇಳಿದರು.

ರಾಮಕೃಷ್ಣ ಹೆಗಡೆಯವರ ಮೇಲೆ ದೂರವಾಣಿ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರು.ನಿಮ್ಮ ಮೇಲೆ ಆರೋಪ ಬಂದಾಗ ಸೈಟ್ ಹಿಂದಿರುಗಿಸಿ ತನಿಖೆಯಾಗೋವರೆಗೂ ಸೈಟ್ ಬೇಡ ಅನ್ನಬೇಕಿತ್ತು.ಹೀಗೆ ಹೇಳಿದ್ದರೆ ತುಂಬಾ ದೊಡ್ಡ ವ್ಯಕ್ತಿ ಆಗುತ್ತಿದ್ದೀರಿ ರಾಜ್ಯದ ಜನ ನಿಮ್ಮನ್ನ ನೈತಿಕ ಉತ್ತುಂಗದ ಸ್ಥಾನದಲ್ಲಿ ಇಡುತ್ತಿದ್ದರು ಎಂದು ತಿಳಿಸಿದರು.

ಈಗ ಮುಡಾ ಹಗರಣವನ್ನು ರಾಜ್ಯಪಾಲರು ತನಿಖೆ ನೀಡಿರುವುದು ಅಪರಾಧ ಎಂದು ಬಿಂಬಿಸಿಕೊಳ್ಳಲಾಗು ತ್ತಿದೆ.ತನಿಖೆ ಮಾಡುವುದರಿಂದ ನಿಮಗೆ ಏಕೆ ಭಯ? ನೀವು ಸ್ವಚ್ಛ ಆಡಳಿತ ಕೊಟ್ಟಿರುವುದರಿಂದ ಭಯ ಏಕೆ ಬೀಳಬೇಕು ಎಂದು ಪ್ರಶ್ನಿಸಿದರು.

ಕಳೆದ ೨೦೦೧ರಲ್ಲಿ ಎಲ್ ಅಂಡ್ ಟಿ ಗೆ ೧೧ ಕೋಟಿ ವೆಚ್ಚದಲ್ಲಿ ದೇವನೂರು ಬಡಾವಣೆ ಕೊಟ್ಟಿದ್ದಾರೆ, ಆಗ ಬಿಜೆಪಿ ಆಡಳಿತದಲ್ಲಿ ಇರಲಿಲ್ಲ ಅಭಿವೃದ್ಧಿಯಾಗಿರುವ ಭೂಮಿಯನ್ನು ಡಿನೋಟಿಫೈ ಮಾಡಿದ್ದೀರಾ, ಆಗ ಬಿಜೆಪಿ ಇರಲಿಲ್ಲ ಡೆವಲಪ್‌ಆಗಿರುವ ಜಾಗವನ್ನು ನಿಮ್ಮ ಬಾಮೈದ ಕೃಷಿ ಭೂಮಿ ಅಂತ ಖರೀದಿ ಮಾಡಿದ್ದಾರೆ,ಡೆವಲಪ್ ಆಗಿರುವ ಬಡಾವಣೆ ತೋರಿಸಿ ಕೃಷಿ ಭೂಮಿ ಅಂತ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ೨೦೧೩ರಲ್ಲಿ ಚುನವಾಣೆ ಅಫಿಡವಿಟ್‌ನಲ್ಲಿ ಇದನ್ನು ಕಾಣಿಸಿರಲಿಲ್ಲ, ನೀವು ಅಫಿಡವಿಟ್ ನಲ್ಲಿ ಮುಚ್ಚಿಟ್ಟಿರುವುದರಲ್ಲಿ ಬಿಜೆಪಿ ಕೈವಾಡ ಇದೆಯೇ? ಮುಖ್ಯಮಂತ್ರಿಗಳು ವಕೀಲರಾಗಿದ್ದವರು ಮಾಹಿತಿಯನ್ನು ಮುಚ್ಚಿಟ್ಟರೆರ ಸೆಕ್ಷನ್ ೧೨೫ ಅಡಿಯಲ್ಲಿ ತಪ್ಪೋ.. ಆಗುವುದಿಲ್ಲವೇ ಎಂದು ಹೇಳಿದ್ದಾರೆ.

೧೯೫೦ ರಿಂದ ೨೦೨೪ರವರೆಗೂ ಒಂದೇ ಸಂವಿಧಾನ ಇರುವುದು.೨೦೧೧ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.ಆಗ ಮಲ್ಲಿಕಾರ್ಜುನಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ ಎಲ್ಲರೂ ಅದನ್ನು ಸ್ವಾಗತಿಸಿದ್ದರು ಎಂದಿದ್ದಾರೆ.

ರಾಜ್ಯಪಾಲರದ್ದು ಸಂವಿಧಾನಿಕ ಹುದ್ದೆ ಎಂದು ಸ್ವಾಗತ ಮಾಡಲಾಗಿತ್ತು.ಭ್ರಷ್ಟರು ಮಾತ್ರ ತನಿಖೆಗೆ ಹೆದರುತ್ತಾರೆ, ಭ್ರಷ್ಟಾಚಾರ ಮಾಡದಿದ್ದರೆ ತನಿಖೆಗೆ ಏಕೆ ಭಯ? ೧೩ ವರ್ಷಗಳ ಹಿಂದೆ ಅಂದಿನ ರಾಜ್ಯಪಾಲರ ಕ್ರಮವನ್ನೇ ಇಂದಿನ ರಾಜ್ಯಪಾಲರು ತೆಗೆದುಕೊಂಡಿದ್ದಾರೆ. ಆವತ್ತು ನೀವು ಹೇಳಿದ ಮಾತು ಇಂದು ನಿಮಗೆ ಅನ್ವಹಿಸುವುದಿಲ್ಲವೇ?ಅಂದು ಸ್ವಾಗತ ಮಾಡಿದವರು ಇಂದು ಸ್ವಾಗತ ಮಾಡಬೇಕಲ್ಲವೇ,ಅಂದು ಸ್ವಾಗತಿಸಿ ಇಂದು ಏಕೆ ವಿರೋಧ ಮಾಡುತ್ತಿದ್ದೀರಿ ಎಂದು ಸಿ.ಟಿ.ರವಿ ಮರು ಪ್ರಶ್ನಿಸಿ, ಸಿಎಂ ಭ್ರಷ್ಟಾಚಾರ ಮಾಡಿದ್ದಾರೆ ಅಂತ ಹೇಳಿಲ್ಲ, ಜಡ್ಜ್ ಮೆಂಟ್ ಕೊಡೋ ಅಧಿಕಾರ ರಾಜ್ಯಪಾಲರಿಗೆ ಇಲ್ಲವೆಂದು ಹೇಳಿದ್ದಾರೆ.

Misuse of Information Department office by Chief Minister

About Author

Leave a Reply

Your email address will not be published. Required fields are marked *

You may have missed