September 16, 2024

ಮನುಷ್ಯ ಭಗವಂತ ಆರಾಧನೆ ಮಾಡಿದಾಗ ಶಾಂತಿ ನೆಮ್ಮದಿ

0
ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ

ಶೃಂಗೇರಿ: ಸನಾತನಧರ್ಮ ಹಾಗೂ ಆತ್ಮೋದ್ಧಾರಕ್ಕಾಗಿ ಸ್ವಹಿತಲಾಭವಿಲ್ಲದೇ ದುಡಿದ ಶ್ರೀ ಶಂಕರಭಗವತ್ಪಾದರ ಉಪದೇಶಗಳನ್ನು ನಾವು ಅಳವಡಿಸಿಕೊಂಡಾಗ ಜೀವನ ಸಾರ್ಥಕ್ಯ ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.

ಅವರು ನರಸಿಂಹವನದ ಗುರುನಿವಾಸದಲ್ಲಿ ನಾನಾಪ್ರಾಂತ್ಯಗಳಿಂದ ಆಗಮಿಸಿದ ಮರಾಠಿ,ದೇವಾಡಿಗರ ಸಂಘದ ಪದಾಧಿಕಾರಿಗಳನ್ನು ಉದ್ದೇಶಿಸಿ ಅನುಗ್ರಹಭಾಷಣ ಮಾಡಿ ಜಗತ್ತಿನಲ್ಲಿ ಲೌಕಿಕ ಜಗತ್ತಿನ ನಡುವೆ ಇದ್ದವರಿಗೆ ಸಂಪಾದನೆ ಮಾಡುವುದು.ಜೀವನ ಸಾಗಿಸುವುದು ಕರ್ತವ್ಯವಾಗಿರುತ್ತದೆ

ಅದರ ಜೊತೆಗೆ ಧರ್ಮದ ಆಚರಣೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನದ ಕಷ್ಟಗಳನ್ನು ಎದುರಿಸುವ ಸಮಚಿತ್ತಭಾವ ನಮ್ಮಲ್ಲಿ ಪರಿಮೂಡಲು ಸಾಧ್ಯ.ಅತಿಯಾದ ಧನ,ಸಂಪತ್ತು ನಮಗೆ ನೀಡುವ ಸುಖ ತಾತ್ಕಾಲಿಕವಾದುದು.ಮನುಷ್ಯನು ಭಗವಂತ ಆರಾಧನೆಯನ್ನು ನಿರಂತರ ಮಾಡಿದಾಗ ಮಾತ್ರ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ ಎಂದರು.

ಧರ್ಮ ಉತ್ಕೃಷ್ಟವಾದುದು.ಜೀವನದಲ್ಲಿ ಧರ್ಮಾಚರಣೆಗೆ ಪ್ರಾಮುಖ್ಯ ಸ್ಥಾನವನ್ನು ನಾವು ನೀಡಿ ಮುನ್ನಡೆಯಬೇಕು.ಉತ್ತಮ ಕೆಲಸಮಾಡಲು ನಮಗೆ ಪ್ರಸ್ತುತ ಪ್ರೇರಣೆ ಸಿಗುವುದು ಅಪರೂಪ.ನಮ್ಮೊಳಗಿನ ಸಕಾರತ್ಮಕವಾದ ಚಿಂತನೆಗಳನ್ನು ವಿವೇಚಿಸಿದಾಗ ಯಾವುದು ಸರಿ? ಯಾವುದು ತಪ್ಪು? ಎಂಬ ಉನ್ನತವಾದ ಮೌಲ್ಯಗಳು ನಮಗೆ ಕಾಣಲು ಸಾಧ್ಯ.ನ್ಯಾಯಮಾರ್ಗದಲ್ಲಿ ನಡೆದವರಿಗೆ ಭಗವಂತ ಎಂದಿಗೂ ಕೈಬಿಡುವುದಿಲ್ಲ ಎಂದರು

ನಾವು ಗುರಿಯನ್ನು ಇಟ್ಟುಕೊಂಡು ಜೀವನದಲ್ಲು ಮುನ್ನಡೆಯಬೇಕು.ಸುತ್ತಮುತ್ತಲಿನವರ ಮಾತು ನಮ್ಮ ಗುರಿಗೆ ಪೂರಕವಾಗಿದ್ದರೆ ಮಾತ್ರ ಅದನ್ನು ಸ್ವೀಕರಿಸಬೇಕು.ಬದುಕಿನ ಮೌಲ್ಯಗಳನ್ನು ಅರಿತು ಮುನ್ನಡೆ ಸಾಗಿಸುವ ಸಂದರ್ಭದಲ್ಲಿ ಪ್ರಾಮಾಣಿಕ ಹಿರಿಯರು ನೀಡುವ ಉಪದೇಶಗಳನ್ನು ಸ್ವೀಕರಿಸಬೇಕು.ಆಗ ನಮ್ಮ ಗುರಿ ಸಾಫಲ್ಯ ಪಡೆಯಲು ಸಾಧ್ಯ.ಜೀವನದ ಸಾರ್ಥಕತೆ ನಾವು ಮಾಡುವ ಸತ್ಕಾರ್ಯದಲ್ಲಿ ಅಡಗಿರುತ್ತದೆ ಎಂದರು.

When a man worships the Lord, there is peace

About Author

Leave a Reply

Your email address will not be published. Required fields are marked *