September 16, 2024

ಕಿರ್ಲೋಸ್ಕರ್‌ನ ಅತ್ಯಾಧುನಿಕ ಜನರೇಟರ್ ಮಾರುಕಟ್ಟೆಗೆ

0
ಕಿರ್ಲೋಸ್ಕರ್ ಕಂಪನಿಯು ಅತ್ಯಾಧುನಿಕ ಸಂತ್ರಜ್ಞಾನ ಜನರೇಟರ್‌ ಉದ್ಘಾಟನೆ

ಕಿರ್ಲೋಸ್ಕರ್ ಕಂಪನಿಯು ಅತ್ಯಾಧುನಿಕ ಸಂತ್ರಜ್ಞಾನ ಜನರೇಟರ್‌ ಉದ್ಘಾಟನೆ

ಚಿಕ್ಕಮಗಳೂರು:  ಕಿರ್ಲೋಸ್ಕರ್ ಕಂಪನಿಯು ಈಗ ಅತ್ಯಾಧುನಿಕ ಸಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ೨.೮ – ೫.೫ ಕೆವಿಎ ವರೆಗಿನ ಇನ್ವರ್ಟರ್ ತಂತ್ರಜ್ಞಾನ ಮಾದರಿಯ ಜನರೇಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಎಂದು ಕಂಪನಿಯ ಸೀನಿಯರ್ ಜನರಲ್ ಮ್ಯಾನೇಜರ್ ಭೂಷಣ್ ಪವಾರ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜನರೇಟರ್‌ಗಳನ್ನು ದೇಶದಲ್ಲೇ ಮೊದಲಬಾರಿಗೆ ಚಿಕ್ಕಮಗಳೂರು ನಗರದಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಿರ್ಲೋಸ್ಕರ್ ಕಂಪನಿಯಿಂದ ಈ ಹಿಂದೆ ಮಾರುಕಟ್ಟೆಗೆ ತಂದಿರುವ ಜನರೇಟರ್‌ಗಳಿಗಿಂತ ಇಂದು ಬಿಡುಗಡೆಯಾಗುತ್ತಿರುವ ಜನರೇಟರ್ ಉತ್ಪನ್ನ ಇನ್ವರ್ಟರ್ ತಂತ್ರಜ್ಞಾನದ ಸುಧಾರಿತ ಉತ್ಪನ್ನವಾಗಿದೆ. ವಿದ್ಯುತ್ ಸರಬರಾಜುನಲ್ಲಿ ಉಂಟಾಗುವ ಏರಿಳಿತವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಗುಣಮಟ್ಟದ, ಸ್ಥಿರವಾದ ವಿದ್ಯುತ್ ಮತ್ತು ಯಾವುದೇ ತೊಂದರೆಗಳಿಲ್ಲದೆ ವಿದ್ಯುತ್ ಪೂರೈಸುವ ಸಾಮರ್ಥ್ಯ ಈ ಜನರೇಟರ್‌ನ ವಿಶೇಷತೆಯಾಗಿದೆ ಎಂದು ವಿವರಿಸಿದರು.

ಈ ಜನರೇಟರ್ ಪರಿಸರ ಸ್ನೇಹಿಯಾಗಿದೆ. ಶಬ್ದ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸುರಕ್ಷತೆ ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಈ ಜನರೇಟರ್ ಇಂಧನ ಕಾರ್ಯಕ್ಷಮತೆ ದೃಷ್ಟಿಯಿಂದ ಉತ್ತಮ ಲಾಭದಾಯಕವಾಗಿದೆ ಎಂದು ಹೇಳಿದರು.

ಇತರೆ ಕಂಪನಿಗಳ ಜನರೇಟರ್‌ಗಳಿಗೆ ಹೋಲಿಕೆ ಮಾಡಿದಾಗ ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ. ಈ ಜನರೇಟರ್‌ಗೆ ಚಕ್ರಗಳನ್ನು ಅಳವಡಿಸಿರುವುದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಜೊತೆಗೆ ಕಡಿಮೆ ಸ್ಥಳಾವಕಾಶದಲ್ಲಿ ಈ ಜನರೇಟರ್ ಇಡಬಹುದಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಇಂಧನವನ್ನು ಬಳಸುವ ಎರಡು ಮಾದರಿಗಳಿವೆ ಎಂದು ತಿಳಿಸಿದರು.

ದೇಶದಾದ್ಯಂತ ಮಾರುಕಟ್ಟೆ ಜವಬ್ದಾರಿ ವಹಿಸಿಕೊಂಡಿರುವ ಮುಂಬೈನ್ ಪವರ್ ಟೆಕ್ ಐಡಿಯಾಸ್ ಸಂಸ್ಥೆಯ ಮುಖ್ಯಸ್ಥರಾದ ಸುನಿಲ್ ಸುಬ್ರಮಣಿ, ಕಿರ್ಲೋಸ್ಕರ್ ಕಂಪನಿಯ ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ಶ್ರೀನಿವಾಸ್, ಸುಹಾಸ್, ಚಿಕ್ಕಮಗಳೂರು ಜಿಲ್ಲೆಯ ಅಧಿಕೃತ ಮಾರಾಟಗಾರರಾದ ವಾಟರ್ ಜೆಟ್ ಎಂಜಿನಿಯರ್ಸ್‌ನ ಸುನಿಲ್ ಬ್ಯಾಪ್ಟಿಸ್ಟ್ ಇದ್ದರು.

Kirloskar Company inaugurates state-of-the-art alarm generator

About Author

Leave a Reply

Your email address will not be published. Required fields are marked *