September 16, 2024

ಸಂತೋಷ ಕೊಳ್ಳಲು ಸಾಧ್ಯವಿಲ್ಲ-ದುಖಃವನ್ನು ಮಾರಲು ಸಾಧ್ಯವಿಲ್ಲ

0
ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಸಖರಾಯಪಟ್ಟಣದಲ್ಲಿ ನಿರ್ಮಿಸಿರುವ ಶಿವದರ್ಶನ ಭವನ ಉದ್ಘಾಟನೆ

ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಸಖರಾಯಪಟ್ಟಣದಲ್ಲಿ ನಿರ್ಮಿಸಿರುವ ಶಿವದರ್ಶನ ಭವನ ಉದ್ಘಾಟನೆ

ಚಿಕ್ಕಮಗಳೂರು: ಜೀವನದಲ್ಲಿ ನೆಮ್ಮದಿಯಾಗಿರಬೇಕಾದರೆ ಸರಳವಾಗಿ ಬದುಕಬೇಕು. ಸಂತೋಷವನ್ನು ನಾವು ಕಂಡುಕೊಳ್ಳಬೇಕು. ಸಂತೋಷ ಎನ್ನುವುದು ಕೊಳ್ಳಲು ಸಾಧ್ಯವಿಲ್ಲ, ದುಖಃವನ್ನು ಮಾರಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಹೇಳಿದರು

ಸಖರಾಯಪಟ್ಟಣದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಶಿವದರ್ಶನ ಭವನವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲಾ ಧರ್ಮದಲ್ಲೂ ದೇವರು ಕಾಣುತ್ತಾನೆ. ಸಂಸ್ಕೃತಿ ಎಲ್ಲದಕ್ಕಿಂತ ದೊಡ್ಡದು ಅದನ್ನು ಮರೆತರೆ ವಿಕೃತವಾಗುತ್ತದೆ. ಮನುಷ್ಯ ಜನ್ಮ ದೊಡ್ಡದು ,ಅದು ಸುಕೃತದ ಫಲ. ನಾವು ಕಟ್ಟುವ ಮನೆ ದೇಹಕ್ಕೆ. ನಮ್ಮ ಮನೆ ಭಗವಂತನ ಸಾನಿಧ್ಯದಲ್ಲಿದೆ.

ಇವತ್ತಿನ ಸಂದರ್ಭದಲ್ಲಿ ಮನುಷ್ಯ ಮನಃಶಾಂತಿಯನ್ನು ಕಳೆದುಕೊಂಡಿದ್ದಾನೆ. ಅದನ್ನು ಬ್ರಹ್ಮಕುಮಾರೀಸ್ ಸಂಸ್ಥೆಯು ಕೊಡುವ ಪ್ರಯತ್ನವನ್ನು ಮಾಡುತ್ತಿದೆ. ಶಿವದರ್ಶನ ಭವನ ಬರುವ ಭಕ್ತಾದಿಗಳಿಗೆ ಶಿವದರ್ಶನವನ್ನು ನೀಡುವಂತಹ ಚಟುವಟಿಕೆ ಮಾಡಲಿ ಎಂದರು.

ಶಾಸಕ ತಮ್ಮಯ್ಯ ಮಾತನಾಡಿ, ಏಕಾಗ್ರತೆ ಕಡಿಮೆಯಾಗಿ ಒತ್ತಡ ಜಾಸ್ತಿಯಾಗುತ್ತಿದೆ. ಆಧ್ಯಾತ್ಮಿಕತೆದ ಕಡೆಗೆ ಒಲುವು ಮೂಡುತ್ತಿದೆ. ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಈ ಬ್ರಹ್ಮಕುಮಾರೀಸ್ ಈಶ್ವರೀಯ ವಿದ್ಯಾಲಯ ಉತ್ತಮ . ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಮನುಷ್ಯರೂ ಕೂಡ ಶಾಂತಿಯನ್ನು ಅರಸಿ ಇಂತಹ ಕೇಂದ್ರಗಳಿಗೆ ಬರುತ್ತಿದ್ದಾರೆ. ನಮ್ಮ ಹೃದಯ ಮತ್ತು ಮನಸ್ಸು ಸಂತೃಪ್ತವಾಗಬೇಕಾದರೆ ಇಂತಹ ತಾಣಗಳು ಸಹಕಾರಿಯಾಗುತ್ತವೆ ಎಂದರು.

ಡಾ.ಸಂತೋಷ್ ನೇತಾ ಮಾತನಾಡಿ, ಈ ಸಂಸ್ಥೆ ಮಾಡುತ್ತಿರುವ ಕಾರ್ಯ ಅತ್ಯುತ್ತಮವಾಗಿದೆ. ನಾವುಗಳು ದೇಹಕ್ಕೆ ಔಷಯನ್ನು ಕೊಡಬಹುದು. ಆದರೆ ಮನಸ್ಸಿಗೆ ಔಷಯನ್ನು ಕೊಟ್ಟು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತಿರುವುದು ಸಂತೋಷದ ವಿಚಾರ. ಸುಮಾರು ೮೦೦೦ ಶಾಖೆಗಳನ್ನು ೧೧೦ ದೇಶದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರೆ ಅದರ ಕಾರ್ಯವೈಖರಿ ಎಷ್ಟಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದರು.

ದಿವ್ಯ ಸಾನಿಧ್ಯವನ್ನು ಬೆಂಗಳೂರು ಉಪವಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಡಾ.ಅಂಬಿಕಾಜಿ ಮಾತನಾಡಿ, ಮನುಕುಲದ ಪರಿವರ್ತನೆಯೇ ನಮ್ಮ ಧ್ಯೇಯ. ಇಡೀ ಮನುಕುಲ ಶಾಂತಿ ನೆಮ್ಮದಿಯಿಂದ ನಡೆಯಬೇಕು. ಈ ನೂತನ ಕಟ್ಟಡ ಇನ್ನು ಹೆಚ್ಚಿನ ಶಾಂತಿ ನೆಮ್ಮದಿಯನ್ನು ಸಾರ್ವಜನಿಕರಿಗೆ ಕರುಣಿಸಲಿ ಎಂದರು.

ಈ ಕಾರ್ಯಕ್ರಮದಲ್ಲಿ ಜ್ಞಾನರಶ್ಮಿ ಶಾಲೆಯ ಸಂಸ್ಥಾಪಕ ಸಹೋದರ ನಂದಕುಮಾರ್ , ಕಾಂಗ್ರೆಸ್ ಮುಖಂಡ ಮಹಡಿಮನೆ ಸತೀಶ್, ಗ್ರಾಪಂ.ಅಧ್ಯಕ್ಷೆ ರಾಜಮ್ಮ, ಪ್ರೆಸ್ ಕ್ಲಬ್ ಅಧ್ಯಕ್ಷ ರಾಜೇಶ್,
ಪೋಲೀಶ್ ಉಪನಿರೀಕ್ಷಕ ಕಿರನ್‌ಕುಮಾರ್,ಕಾರ್ಯಪಾಲಕ ಇಂಜಿನಿಯರ್ ಡಿ ವಿ ಜಯಪ್ಪ, ಲತಾಪುಟ್ಟಸ್ವಾಮಿ,ವಿಜಯಕ್ಕ ಹಾಗೂ ಜಿಲ್ಲೆಯಿಂದ ಆಗಮಿಸಿದ ನೂರಾರು ಸಹೋದರ ಸಹೊದರಿಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬ್ರಹ್ಮಕುಮಾರೀಸ್ ರಾಜಯೋಗಿನಿ ಬ್ರಹ್ಮಕುಮಾರಿ ಭಾಗ್ಯಕ್ಕ ನಿರೂಪಿಸಿ, ಸಖರಾಯಪಟ್ಟಣದ ಬ್ರಹ್ಮಕುಮಾರೀಸಿನ ಸಂಚಾಲಕಿ ಬಿ ಕೆ ಯಶೋಧಕ್ಕ ಸ್ವಾಗತಿಸಿ ಈಶ್ವರಾಚಾರ್ ವಂದಿಸಿದರು.

Happiness cannot be bought-sadness cannot be sold

About Author

Leave a Reply

Your email address will not be published. Required fields are marked *