September 16, 2024

ರೈತರಿಗೆ ನೀರಾವರಿ ಯೋಜನೆ ಕಲ್ಪಿಸಿದರೆ ಸ್ವಾಭಿಮಾನಿಯಾಗಿ ಬದುಕುತ್ತಾರೆ

0
ಕೋಡಿ ಬಿದ್ದ ದಾಸರಹಳ್ಳಿ ಕೆರೆಗೆ ಶಾಸಕ ಹೆಚ್.ಡಿ ತಮ್ಮಯ್ಯ ಭಾಗಿನ ಅರ್ಪಣೆ

ಕೋಡಿ ಬಿದ್ದ ದಾಸರಹಳ್ಳಿ ಕೆರೆಗೆ ಶಾಸಕ ಹೆಚ್.ಡಿ ತಮ್ಮಯ್ಯ ಭಾಗಿನ ಅರ್ಪಣೆ

ಚಿಕ್ಕಮಗಳೂರು: ಜಾತಿ ಪಕ್ಷ ಇಲ್ಲದ ರೈತರಿಗೆ ಕುಡಿಯುವ ನೀರು, ಭೂಮಿಗೆ ನೀರಾವರಿ ಒದಗಿಸಿದರೆ ಯಾವುದೇ ಉಚಿತ ಯೋಜನೆಗೆ ಕೈಚಾಚದೆ ರೈತರು ಸ್ವಾಭಿಮಾನಿಯಾಗಿ ಬದುಕುತ್ತಾರೆಂದು ಶಾಸಕ ಹೆಚ್.ಡಿ ತಮ್ಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಲಕ್ಯಾ ಹೋಬಳಿಯ ಹಿರೇಗೌಜ, ಲಕ್ಯಾ ಗ್ರಾ.ಪಂ ವ್ಯಾಪ್ತಿಯ ದಾಸರಹಳ್ಳಿ ಕೆರೆ ಕೋಡಿ ಬಿದ್ದ ಪರಿಣಾಮ ಬಾಗಿನ ಅರ್ಪಿಸಿ ಮಾತನಾಡಿದರು.

ದಾಸರಹಳ್ಳಿ ಕೆರೆ ತುಂಬಿರುವುದು ಲಕ್ಯಾ ಹೋಬಳಿಯ ಬಹುದಿನದ, ಬಹು ಜನರ ಕನಸಾಗಿದ್ದು, ಕೆರೆಗಳು ತುಂಬಿ ರೈತರ ಬದುಕು ಹಸನಾಗುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.

ಚಿಕ್ಕಮಗಳೂರು ವಿಧಾನ ಸಭಾ ವ್ಯಾಪ್ತಿಯ ಬಹುತೇಕ ಕೆರೆಗಳು ತುಂಬಿ ಬಾಗಿನ ಅರ್ಪಿಸುವ ಭಾಗ್ಯ ತಂದುಕೊಟ್ಟ ಕ್ಷೇತ್ರದ ಜನತೆಗೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

ದಾಸರಹಳ್ಳಿ ಕೆರೆ ಅಭಿವೃದ್ಧಿಗೆ ಹಿಂದೆ ಶಾಸಕರುಗಳಾಗಿದ್ದ ಮಲ್ಲಿಕಾರ್ಜುನ್ ಪ್ರಸನ್ನ, ಎಸ್.ಎಲ್ ಧರ್ಮೇಗೌಡ, ಸಿ.ಟಿ ರವಿ, ಗಾಯಿತ್ರಿಶಾಂತೇಗೌಡ ಇವರೆಲ್ಲರ ಪರಿಶ್ರಮದ ಜೊತೆಗೆ ಈಗ ಶಾಸಕರಾಗಿರುವ ನನ್ನ ಪ್ರಯತ್ನ ನಡೆಯುತ್ತಿದೆ. ಕುಡಿಯುವ ನೀರು, ಕೆರೆ ತುಂಬಿಸುವುದು, ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ ಎಲ್ಲರೂ ಒಗ್ಗಟ್ಟಿನಿಂದ ರೈತರ ಪರ ಕೆಲಸ ಮಾಡಲು ಬದ್ಧ ಎಂದು ಭರವಸೆ ನೀಡಿದರು.

ಬೈರಾಪುರ ಪಿಕಪ್, ಹಿರೇಮಗಳೂರು ಕೆರೆಯಲ್ಲಿ ಅಳವಡಿಸಿರುವ ಮೋಟಾರನ್ನು ಚಾಲನೆ ಮಾಡಿರುವುದರಿಂದ ಮಾದರಸನ ಕೆರೆ, ದಾಸರಹಳ್ಳಿ ಕೆರೆ ಕೋಡಿ ಬಿದ್ದಿದೆ. ಇದರ ಅಂಗವಾಗಿ ಭೂಮಿತಾಯಿ, ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ ಎಂದರು.

ದಾಸರಹಳ್ಳಿ ಕೆರೆ ಪ್ರಕೃತಿ ಮಡಿಲಲ್ಲಿ ಇದ್ದು, ಸುತ್ತ ಪರಿಸರದ ಮಧ್ಯೆ ಇರುವ ಎಲ್ಲಾ ದೇವಾಲಯಗಳಲ್ಲಿ ಒಳ್ಳೆ ಮಳೆ, ಬೆಳೆ, ಬೆಲೆ ಕೊಟ್ಟು ರೈತರ ಕಾಪಾಡು ಎಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ದಾಸರಹಳ್ಳಿ ಕೆರೆ ಏರಿ ಸೋರುತ್ತಿದ್ದು, ಇದರ ದುರಸ್ಥಿಗೆ ಸಂಬಂಧಿಸಿದ ಸಚಿವರ ಗಮನ ಸೆಳೆದು ಅನುದಾನವನ್ನು ತಂದು ನೀರು ಪೋಲಾಗದಂತೆ ತಡೆದು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಎರಡು ಪಂಚಾಯಿತಿಗಳ ವ್ಯಾಪ್ತಿಗೆ ದಾಸರಹಳ್ಳಿ ಕೆರೆ ಬರಲಿದ್ದು, ಅಚ್ಚುಕಟ್ಟುದಾರರು ನಿರ್ವಹಣಾ ಸಮಿತಿ ರಚಿಸಿಕೊಂಡು ತಾವೇ ನಿರ್ವಹಣೆ ಮಾಡಿದರೆ ಕೆರೆ ಹಾನಿಯಾಗುವುದಿಲ್ಲ, ಆಗ ಅದಕ್ಕೊಂದು ಶಕ್ತಿ ಬಂದು ಸರ್ಕಾರ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಡಿ.ಹೆಚ್ ಮರಿಗೌಡ ಹಾಗೂ ಲೋಕಯ್ಯ ದಾಸರಹಳ್ಳಿ ಕೆರೆ ಅಭಿವೃದ್ಧಿಗೆ ಹೋರಾಟ ಮಾಡಿದ್ದಾರೆ. ಇವರ ಹೋರಾಟದ ಫಲವಾಗಿ ದಾಸರಹಳ್ಳಿ ಕೆರೆ ಕೋಡಿ ಬಿದ್ದಿದೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಅಭಿವೃದ್ಧಿ ಕೆಲಸಗಳು ಹೆಚ್ಚು ಹೆಚ್ಚು ಆಗುತ್ತವೆ ಎಂಬುದಕ್ಕೆ ಈ ಬಾರಿ ಹೆಚ್ಚು ಮಳೆಯಾಗುತ್ತಿರುವುದು ಸಮೃದ್ಧಿಯ ಸಂಕೇತ ಎಂದು ಸ್ಮರಿಸಿದರು.

ಮಾಜಿ ಜಿ.ಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ದಾಸರಹಳ್ಳಿ ಕೆರೆ ಭರ್ತಿಯಾಗಿರುವುದು ಈ ಭಾಗದ ರೈತರ ಬಹಾಳ ವರ್ಷಗಳ ಬೇಡಿಕೆ ಈಡೇರಿದೆ. ಇದರಿಂದ ಬಯಲು ಭಾಗದ ಎಲ್ಲಾ ಬೋರ್‌ವೆಲ್‌ಗಳು ಬೇಸಿಗೆ ಕಾಲದಲ್ಲಿ ಒಳ್ಳೆಯ ನೀರನ್ನು ರೈತರಿಗೆ ಒದಗಿಸಲು ಸಹಕಾರಿಯಾಗಿದೆ ಎಂದರು.

ರೈತರ ಜೀವನಾಡಿಯಾಗಿರುವ ಈ ಕೆರೆ ಮುಂದೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದ ಅವರು ದಾಸರಹಳ್ಳಿ ಕೆರೆ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಲಕ್ಯಾ ಗ್ರಾ.ಪಂ ಅಧ್ಯಕ್ಷ ಹನೀಫ್, ಹಿರೇಗೌಜ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ರೈತ ಮುಖಂಡ ಗುರುಶಾಂತಪ್ಪ, ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ, ಗ್ರಾಮಸ್ಥರಾದ ನಾಗಣ್ಣ, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.ಗ್ರಾ.ಪಂ ಮಾಜಿ ಅಧ್ಯಕ್ಷ ಕಾಂತರಾಜ್ ಅರಸ್ ಸ್ವಾಗತಿಸಿದರು.

MLA H. D. Thammaiah’s offering to the Dasarahalli lake where Kodi fell

About Author

Leave a Reply

Your email address will not be published. Required fields are marked *