September 16, 2024

ಮಂಜೀಹಳ್ಳಿಯಿಂದ ನಿಡಗಟ್ಟದ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಓಡಾಡಲು ಅವಕಾಶಕ್ಕೆ ಮನವಿ

0
ಮಂಜೀಹಳ್ಳಿಯಿಂದ ನಿಡಗಟ್ಟದ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಓಡಾಡಲು ಅವಕಾಶಕ್ಕೆ ಮನವಿ

ಮಂಜೀಹಳ್ಳಿಯಿಂದ ನಿಡಗಟ್ಟದ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ಓಡಾಡಲು ಅವಕಾಶಕ್ಕೆ ಮನವಿ

ಸಖರಾಯಪಟ್ಟಣ: ಸಖರಾಯಪಟ್ಟಣ ಸಮೀಪದ ಮಂಜೀಹಳ್ಳಿಯಿಂದ ನಿಡಗಟ್ಟದ ಕಡೆಗೆ ಹಾದು ಹೋಗುವ ರಸ್ತೆಯನ್ನು ಏಕಾಏಕಿ ಓಡಾಡಲು ತೊಂದರೆ ಮಾಡುತ್ತಿದ್ದಾರೆ ಎಂದು ಅದನ್ನು ಬಿಡಿಸಿಕೊಡುವಂತೆ ಭಾನುವಾರ ಮಂಜೀಹಳ್ಳಿ ಗ್ರಾಮಸ್ಥರು ಸಖರಾಯಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಸೈಗೆ ಮನವಿ ಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಪಂ.ಸದಸ್ಯ ಅಜ್ಜಯ್ಯ ಮಾತನಾಡಿ, ಸುಮಾರು ನೂರಾರು ವರ್ಷಗಳಿಂದ ನಮ್ಮ ಹಿರಿಯರು ಮಂಜಿಹಳ್ಳಿಯಿಂದ ನಿಡಘಟ್ಟ , ಹಳ್ಳಕೆರೆ ಕಾವಲಿನಲ್ಲಿರುವ ನೂರಾರು ಎಕರೆ ಜಮೀನುಗಳಿಗೆ ಓಡಾಡುತ್ತಿದ್ದೆವು ಆದರೆ ಈಗ ಏಕಾಏಕಿ ಗ್ರಾಮ ವ್ಯಕ್ತಿಯೋರ್ವರು ಅಲ್ಲಿ ಓಡಾಡಲು ಅಡ್ಡಿಪಡಿಸುತ್ತಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಓಡಾಡಲು ಬಿಡುತ್ತಿಲ್ಲ. ಇದನ್ನು ಸರಿಪಡಿಸುವಂತೆ ಗ್ರಾಮಸ್ಥರೆಲ್ಲ ಬಂದಿದ್ದೇವೆ. ಇದಕ್ಕೆ ನ್ಯಾಯ ಕೊಡಿಸಬೇಕಾಗಿ ಮನವಿ ಕೊಡುತ್ತಿದ್ದೇವೆ ಎಂದರು.

ಮೋಹನಕುಮಾರ್ ಮಾತನಾಡಿ, ಗ್ರಾಮಸ್ಥರು ಮತ್ತು ಮಹಿಳೆಯರು ಸೇರಿದಂತೆ ನಾವು ರೈತಾಪಿ ಕೆಲಸವನ್ನು ಮಾಡಿ ಜೀವನ ನಡೆಸುತ್ತಿದ್ದೇವೆ. ನಾವು ರೈತರು,ಈ ರಸ್ತೆಯಲ್ಲಿ ೭೦ ವರ್ಷದಿಂದ ನಮ್ಮ ರೈತಾಪಿ ಕೆಲಸಗಳಿಗೆ ಓಡಾಡುತ್ತಿದ್ದೇವೆ.ಇಲ್ಲಿಂದ ಏಳೆಂಟು ಹಳ್ಳಿಗಳಿಗೆ ಸಂಪರ್ಕವಿದೆ.

ಆದರೆ ಈಗ ಸುಮಾರು ೬ ತಿಂಗಳಿನಿಂದ ಓಡಾಡಲು ಬಿಡುತ್ತಿಲ್ಲ. ಏನಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಅಲ್ಲದೆ ಅಟ್ರಾಸಿಟಿ ಕೇಸನ್ನು ಹಾಕುವುದಾಗಿ ಬೆದರಿಕೆ ಒಡ್ಡುತ್ತಾನೆ. ಈ ಸಂಬಂಧ ಠಾಣಾಕಾರಿಗಳು ಅವರನ್ನು ಕರೆಸಿ ನಮಗೆ ಓಡಾಡಲು ಅನುವು ಮಾಡಿಕೊಡಬೇಕೆಂದರು.

ಗ್ರಾಮಸ್ಥರನ್ನು ಉದ್ದೇಶಿಸಿ ಪಿಎಸ್ಸೈ ಕಿರನಕುಮಾರ್ ಮಾತನಾಡಿ, ರಸ್ತೆಗೆ ತೊಂದರೆ ಮಾಡಿರುವರನ್ನು ಕರೆಸಿ ಕಂದಾಯಾಕಾರಿಗಳನ್ನು ಕರೆಸಿ ಮಾತನಾಡಿ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಂಜೀಹಳ್ಳಿ ಗ್ರಾಮಸ್ಥರಾದ ಚಂದ್ರಪ್ಪ, ಈರಣ್ಣ, ಮರುಳಪ್ಪ, ಮಹೇಶ್ವರಪ್ಪ, ಶೇಖರಣ್ಣ, ಮಲ್ಲಿಕಂಂ, ರೂಪ, ಲಾವಣ್ಯ, ಶೀಲ ಹಾಗೂ ಮಂಜೀಹಳ್ಳಿಯ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು

Request for permission to walk on the road passing from Manjeehalli towards Nidagatta

About Author

Leave a Reply

Your email address will not be published. Required fields are marked *