September 16, 2024

ಧರ್ಮ ನಿಷ್ಠೇಯಿಂದ ಬದುಕಬೇಕೆಂದು ಹೇಳಿಕೊಟ್ಟವರು ಶ್ರೀಕೃಷ್ಣ

0
ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ

ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ

ಚಿಕ್ಕಮಗಳೂರು:  ಇಡೀ ಜಗತ್ತಿಗೆ ಬೆಳಕನ್ನು ನೀಡಿ ಧರ್ಮ ನಿಷ್ಠೆಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಶ್ರೀಕೃಷ್ಣ ಎಂದು ಸಾಹಿತಿ ನಾಗರಾಜ್ ರಾವ್ ಕಲ್ಕಟ್ಟೆ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು

ಗೋ ಸಂರಕ್ಷಣೆಗೆ ಸಂಪೂರ್ಣವಾಗಿ ಶಕ್ತಿ ಕೊಟ್ಟವನ್ನು ಶ್ರೀಕೃಷ್ಣ ಈ ಸಮಾಜಕ್ಕೆ ಮಾತ್ರ ದೇವರಲ್ಲಾ ಇಡೀ ವಿಶ್ವಕ್ಕೆ ದೇವರು, ಒಳ್ಳೆ ಸಂಗತಿಗಳನ್ನು ಯೋಚನೆ ಮಾಡುತ್ತಾ ಮೈಗೂಡಿಸಿಕೊಳ್ಳಬೇಕು. ನಿಸ್ವಾರ್ಥತೆಯಿಂದ ಕೆಲಸವನ್ನು ಮಾಡು, ಅದರ ಫಲ ನನಗೆ ಬಿಡು, ಅದಕ್ಕೆ ಧಕ್ಕಬೇಕಾದ ಫಲ ಧಕ್ಕುತ್ತದೆ, ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ ಕೃಷ್ಣ ಹುಟ್ಟಿದ ದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಾಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ ಶ್ರೀ ಕೃಷ್ಣನ ಜನ್ಮ ದಿನವನ್ನು ಚಂದ್ರಮಾನ, ಶ್ರಾವಣ ಕೃಷ್ಣ ಅಷ್ಟಮಿ ಎಂದು ಆಚರಿಸಲಾಗುತ್ತದೆ ಎಂದರು.

ಕತ್ತಲೆಯಲ್ಲಿರುವ ದುಷ್ಟತನವನ್ನು ಬೆಳಕಿನಲ್ಲಿರುವ ದುಷ್ಷತನವನ್ನು ನಾಶಮಾಡಿ ತಾಯಿ, ತಂದೆಗೆ ಗೌರವಿಸಿ ತನ್ನಲ್ಲಿರುವ ದುಷ್ಟತನವನ್ನು ನಾಶಮಾಡಿ ತಾಯಿಗೆ ಪರಮ ಆನಂದವನ್ನು ಕೊಡುವವನೇ ಕೃಷ್ಣ ಎಂದು ತಿಳಿಸಿದರು.

ಯಾವ ವ್ಯಕ್ತಿ ಹೃದಯ ದೌರ್ಬಲ್ಯನಾಗಿರುತ್ತಾನೋ ಅಂತಹವರನ್ನು ಜಾಗೃತಿಗೊಳಿಸುವುದೇ ಭಗವಧ್ಗೀತೆ, ಕೃಷ್ಣನ ಉದ್ದೇಶ ಮನುಷ್ಯ ತಾನು ಹಿಡಿದಿರುವ ಕೆಲಸವನ್ನು ಪೂರ್ಣಗೊಳಿಸುವವರೆಗೆ ಯಾರ ಮಾತನ್ನು ಕೇಳದೆ ತನ್ನ ಕೆಲಸವನ್ನು ನಿಷ್ಠೆಯಿಂದ ಯಾವ ಫಲವನ್ನು ಅಪೇಕ್ಷಿಸದೆ ಕಾರ್ಯವನ್ನು ಮಾಡಿದರೆ ಅವನಿಗೆ ಸಕಲ ಗೌರವವು ಸಿಗುತ್ತದೆ ಎಂದು ಹೇಳಿದ್ದಾರೆ ಎಂದರು.

ಮಹಿಳೆಯರಿಗೆ ಕಷ್ಟಗಳು ಎದುರಾದ ಸಂದರ್ಭದಲ್ಲಿ ಕೃಷ್ಣ ಕೈ ಹಿಡಿದಿದ್ದಾನೆ ಹೀಗಾಗಿ ಕೃಷ್ಣನಿಗೆ ಪರನಾರಿ ಸಹೋದರ ಎಂದು ಕರೆಯಲಾಗುತ್ತದೆ. ಮಹಿಳೆಯರಿಗೆ ಸಂಕಷ್ಟದ ಕಾಲ ಎದುರಾದಾಗ ಆತನು ಅಣ್ಣನಾಗಿ ರಕ್ಷಣೆ ಮಾಡಿದ್ದಾನೆ ಆದ್ದರಿಂದ ಕೃಷ್ಣನೂ ಮಹಿಳಿಯರಿಗೆ ಘನತೆ ಗೌರವದ ಸಂಕೇತವಾಗಿದ್ದಾನೆ ಎಂದರು.

ಜಿಲ್ಲಾಧಿಕಾರಿಗಳ ಕಛೇರಿ ಸಹಾಯಕರಾದ ಹರ್ಷವರ್ಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ದ್ವಾರಕದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು ಆದರೆ ಇಂದು ಪ್ರಪಂಚದಾದ್ಯಂತ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ, ಶ್ರೀ ಕೃಷ್ಣ ಜಯಂತಿಯನ್ನು ಹಿಂದುಗಳು ಮಾತ್ರವಲ್ಲದೇ ಮುಸ್ಲೀಮರೂ ಕೂಡ ತಮ್ಮ ಮಕ್ಕಳಿಗೆ ಶ್ರೀ ಕೃಷ್ಣನ ವೇಶ ಹಾಕಿ ಶಾಲೆಗೆ ಕಳುಹಿಸುತ್ತಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಯಾದವ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Shrikrishna Jayanti programme

About Author

Leave a Reply

Your email address will not be published. Required fields are marked *