September 16, 2024

ಶ್ರೀ ಕೃಷ್ಣ ಜನ್ಮಾಷ್ಟಮಿ ನಮ್ಮ ದೇಶದ ಧಾರ್ಮಿಕ ಹಬ್ಬ

0
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಚಿಕ್ಕಮಗಳೂರು: ಶಾಲಾ ಮಕ್ಕಳಿಗೆ ಪೋಷಕರು ಯಾವುದೆ ಜಾತಿ ಬೇಧ ಮಾಡದೆ ಎಲ್ಲರೊಂದಿಗು ಬೆರೆತು ಶಿಕ್ಷಣ ಪಡೆಯುವುದರ ಜೊತೆಗೆ ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸುವಂತೆ ಪ್ರೇರಣೆ ನೀಡಬೇಕೆಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ತಿಳಿಸಿದರು.

ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವುದೆ ಜಾತಿ ಬೇಧವಿಲ್ಲದೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ತಮ್ಮ ಮಕ್ಕಳಿಗೆ ರಾಧೆ, ಕೃಷ್ಣನ ವೇಷ ಧರಿಸಿ ಅತ್ಯಂತ ಸಂತೋಷವಾಗಿ ಆಚರಿಸುತ್ತಾರೆ ಎಂದರು.

ನಮ್ಮ ಶಾಲೆಯಲ್ಲಿ ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ರಾಧೆಕೃಷ್ಣರ ಕಾರ್ಯಕ್ರಮ ಮಾಡಿ ಉತ್ತಮವಾಗಿ ಛದ್ಮವೇಶ ಧರಿಸಿದ ಮಕ್ಕಳಿಗೆ ಬಹುಮಾನವನ್ನು ವಿತರಿಸುತ್ತೇವೆ, ಪೋಷಕರಿಗೆ ಎಷ್ಟೇ ಕಷ್ಟವಿದ್ದರು ಮಕ್ಕಳಿಗೆ ಉನ್ನತ ಶಿಕ್ಷಣ ಮಾಡಿಸಿ ಎಂದರು.

ನಮ್ಮ ದೇಶದಲ್ಲಿ ಎಲ್ಲಾ ಧರ್ಮದವರು ಒಟ್ಟುಗೂಡಿ ಬಾಳಬೇಕೆಂಬ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮತ್ತು ಬಾಲಗಂಗಾಧರನಾಥ್ ತಿಲಕ್ ರವರ ಆಸೆಯಂತೆ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಎಂಬ ಬೇಧಬಾವವಿಲ್ಲದೆ ಕೃಷ್ಣ ಮತ್ತು ರಾಧೆಯ ವೇಷ ಧರಿಸಿರುವುದು ಈ ಬಾರಿಯ ವಿಶೇಷವಾಗಿದೆ, ಜೆವಿಎಸ್ ಶಾಲೆಯಲ್ಲಿ ಎಲ್ಲಾ ಧರ್ಮದ ಹಬ್ಬಗಳ ಆಚರಣೆಗೆ ಪ್ರಾಮುಖ್ಯತೆ ನೀಡುವ ಮೂಲಕ ಮಕ್ಕಳಲ್ಲಿ ನಾವೆಲ್ಲರೂ ಒಂದೇ ನಾವು ಭಾರತೀಯರು ಎಂಬ ಮನೋಭಾವನೆಯನ್ನು ಬೆಳಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಸಿಇಓ ಕುಳ್ಳೇಗೌಡ, ಮ್ಯಾನೇಜರ್ ತೇಜಸ್, ಮುಖ್ಯ ಶಿಕ್ಷಕ ವಿಜಿತ್, ತೀರ್ಪುಗಾರರಾಗಿ ಜಿಲ್ಲಾ ಮಹಿಳಾ ಸಂಘದ ಕೋಮಲಾರವಿಕುಮಾರ್, ವೇದಾವತಿ ಚಂದ್ರಶೇಖರ್, ಮಂಜುಳಾಹರೀಶ್ ಉಪಸ್ಥಿತರಿದ್ದರು

Sri Krishna Janmashtami is a religious festival of our country

About Author

Leave a Reply

Your email address will not be published. Required fields are marked *