September 16, 2024

ಕಡೂರಿನ ಜಿಟಿಟಿಸಿ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ನೂತನ ಕೋರ್ಸ್ ಆರಂಭ

0
ಕಡೂರಿನ ಜಿಟಿಟಿಸಿ ಕಾಲೇಜು ಪ್ರಾಂಶುಪಾಲ ಜಯಪ್ರಕಾಶ್ ಜೆ.ಕೆ ಸುದ್ದಿಗೋಷ್ಠಿ

ಕಡೂರಿನ ಜಿಟಿಟಿಸಿ ಕಾಲೇಜು ಪ್ರಾಂಶುಪಾಲ ಜಯಪ್ರಕಾಶ್ ಜೆ.ಕೆ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಪಟ್ಟಣದಲ್ಲಿರುವ ಹೆಸರಾಂತ ತಾಂತ್ರಿಕ ಶಿಕ್ಷಣ ಸಂಸ್ಥೆ ಜಿಟಿಟಿಸಿ(ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ಕಾಲೇಜು ೨೦೨೪-೨೫ ನೇ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಉದಯೋನ್ಮುಖ ಡಿಪ್ಲೊಮೋ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಜೆ.ಕೆ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಲೇಜಿನಲ್ಲಿ ನೂತನವಾಗಿ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಡಿಪ್ಲೊಮೋ ಇನ್ ಆಟೋಮೇಷಿನ್ ಅಂಡ್ ರೋಬೋಟಿಕ್ಸ್ ಮತ್ತು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋಸ್‌ಗಳನ್ನು ಆರಂಭಿಸಿದ್ದು ಎಸ್‌ಎಸ್‌ಎಲ್‌ಸಿ, ಐಟಿಐ, ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಲ್ಪಾವಧಿಯಲ್ಲಿ ವೃತ್ತಿ ಜೀವನ ನಡೆಸಲು ಈ ಕೋರ್ಸ್‌ಗಳು ಬಹು ಬೇಡಿಕೆಯಾಗಿದೆ ಎಂದರು.

ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಶೇ.೩೩ ರಷ್ಟು ಸೀಟುಗಳನ್ನು ಮೀಸಲಿಟ್ಟಿದ್ದು, ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ವಿದ್ಯಾಸಿರಿ ವಿದ್ಯಾರ್ಥಿವೇತನ ಸೌಲಭ್ಯವನ್ನು ಒದಗಿಸಲಾಗುವುದು. ಈ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಆ.೩೧ ಕೊನೆಯ ದಿನವಾಗಿರುತ್ತದೆ ಎಂದು ಹೇಳಿದರು.

ಕಡೂರಿನ ಈ ಜಿಟಿಟಿಸಿ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಸಿಎಂಕೆಕೆವೈ ಅಡಿಯಲ್ಲಿ ಹಲವು ಉಚಿತ ಅಲ್ಪಾವಧಿ ಕೋರ್ಸ್‌ಗಳನ್ನು ಕಲ್ಪಿಸಲಾಗುವುದು. ಇದರಲ್ಲಿ ಬಹು ಬೇಡಿಕೆಯ ಕೋರ್ಸ್‌ಗಳೆಂದರೆ ಸಿಎನ್‌ಸಿ ಟ್ರೈನಿಂಗ್, ಇಂಜಿನಿಯರಿಂಗ್ ಸಿಎಡಿ, ಎಲೆಕ್ಟ್ರಿಕಲ್ ಟಿಕ್ನಿಷಿಯನ್, ಡಾಟಾ ಎಂಟ್ರಿ ಆಪರೇಟರ್, ಫಿಟ್ಟರ್, ಕನ್ವನ್ಷಲ್ ಮಿಲ್ಲಿಂಗ್, ಟರ್ನಿಂಗ್ ಅಂಡ್ ಗ್ರೈಂಡಿಂಗ್ ಕೋರ್ಸ್‌ಗಳಾಗಿವೆ ಎಂದು ತಿಳಿಸಿದರು.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ೧ ವರ್ಷದ ಟೂಲ್ ರೂಂ ಮೆಷಿನಿಸ್ಟ್‌ಗೆ ಉಚಿತವಾಗಿ ಸೇರಬಯಸುವವರಿಗೆ ವಿದ್ಯಾರ್ಥಿ ವೇತನ ಸೌಲಭ್ಯವನ್ನು ನೀಡಲಾಗುವುದು. ಜೊತೆಗೆ ಈ ಎಲ್ಲಾ ಉಚಿತ ಕೋರ್ಸ್‌ಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಅವಕಾಶವನ್ನು ಜಿಲ್ಲೆಯ ಯುವಕ-ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗೆ ಜಿಟಿಟಿಸಿ ಕಾಲೇಜು, ವೇದಾ ಪಂಪ್ ಹೌಸ್ ಹತ್ತಿರ, ರಾಷ್ಟ್ರೀಯ ಹೆದ್ದಾರಿ-೨೦೬, ಬಿಹೆಚ್ ರಸ್ತೆ, ಕಡೂರು-೫೭೭೫೪೮ ಹಾಗೂ ದೂರವಾಣಿ ಸಂಖ್ಯೆ-೦೮೨೬೭ ೨೯೮೦೫೧, ೯೧೪೧೬೩೦೩೨೦, ೯೯೮೦೩೪೪೪೪೧, ೯೭೪೩೮೭೧೬೪೫ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಮಳವಳ್ಳಿ ಉಪಸ್ಥಿತರಿದ್ದರು

A new course has started for the current year in GTTC College Kadur

About Author

Leave a Reply

Your email address will not be published. Required fields are marked *