September 16, 2024

ಸಿಎಂ ವಿರುದ್ಧ ಪ್ಯಾಸಿಕ್ಯೂಷನ್‌ಗೆ ಅನುಮತಿಗೆ ಸೋಟಿಸ್‌ ವಿರುದ್ಧ ಪ್ರತಿಭಟನೆ

0
ಸಿಎಂ ವಿರುದ್ಧ ಪ್ಯಾಸಿಕ್ಯೂಷನ್‌ಗೆ ಅನುಮತಿಗೆ ಸೋಟಿಸ್‌ ವಿರುದ್ಧ ಪ್ರತಿಭಟನೆ

ಸಿಎಂ ವಿರುದ್ಧ ಪ್ಯಾಸಿಕ್ಯೂಷನ್‌ಗೆ ಅನುಮತಿಗೆ ಸೋಟಿಸ್‌ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರು:  ಮನುವಾದಿ ಮತ್ತು ಜಾತಿವಾದಿಗಳ ಜೊತೆಗೆ ಕೇಂದ್ರ ಸರ್ಕಾರವು ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ಯಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಮುಖಂಡರುಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರುವ ಆತುರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಹಿಂದಾ ನಾಯಕರ ವಿರುದ್ಧ ಸುಳ್ಳು ಆರೋಪವೆಸಗಿ ರಾಜ್ಯಪಾಲರ ಮೂಲಕ ಪ್ಯಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಧಕ್ಕೆ ತಂದಿದೆ ಎಂದು ದೂರಿದರು.

ಎರಡು ಪಕ್ಷಗಳು ರಾಜ್ಯದಲ್ಲಿ ಜನರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಗೊಳಿಸುವ ಹುನ್ನಾರವನ್ನಿಟ್ಟುಕೊಂಡು ಹಳೇ ಚಾಳಿಯನ್ನು ಪ್ರಾರಂಭಿಸುತ್ತಿದೆ. ಇದರಿಂದ ರಾಜ್ಯದ ಸಜ್ಜನ ಹಾಗೂ ದೀನ ದಲಿತರ, ಬಡವರ ನಾಯಕನ ವಿರುದ್ಧ ಸುಳ್ಳು ಅಪಾದನೆ ಮಾಡುತ್ತಿರುವುದು ಬಿಜೆಪಿ-ಜೆಡಿಎಸ್ ನಾಯ ಕರಿಗೆ ಶೋಭೆ ತರುವುದಿಲ್ಲ ಎಂದರು.

ಬಲಾಢ್ಯ ಜಾತಿ, ಕೋಮು ಬೆಂಗಾವಲಿನಲ್ಲಿಟ್ಟುಕೊಂಡು ಅಧಿಕಾರದ ಗದ್ದುಗೆಯನ್ನು ಏರಿರುವ ಬಿಜೆ ಪಿ ಮತ್ತು ಜೆಡಿಎಸ್ ಸರ್ಕಾರದ ಬಗ್ಗೆ ನಾವು ಇಟ್ಟುಕೊಂಡ ಭಯವು ನಿಜವಾಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಗಳ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿ ಎರ ಡು ಪಕ್ಷಗಳು ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಜನಪರ ಆಡಳಿತದ ಭರವಸೆ ನೀಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿಯೇತರ ಜನ ರಿಂದ ಆಯ್ಕೆಗೊಂಡ ರಾಜ್ಯಸರ್ಕಾರ ವಿರುದ್ಧ ಷಡ್ಯಂತ್ರ ರೂಪಿಸುವುದಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಸ್ಥಾನದಿಂದ ಕಿತ್ತೋಗೆಯಲು ಮನುವಾದಿ ಪಕ್ಷಗಳ ಕುತಂತ್ರವನ್ನು ಖಂಡಿಸುತ್ತೇವೆ ಎಂದರು.

ರಾಜ್ಯದಲ್ಲಿ ಎಲ್ಲಾ ಕಾಲದಲೂ ದ್ವೇಷದ ರಾಜಕಾರಣ ಮಾಡುತ್ತಾ ಉಸಿರಾಡುತ್ತಿರುವ ಬಿಜೆಪಿ-ಜೆಡಿ ಎಸ್ ನಾಯಕರು ಇದೀಗ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಸಿಎಂ ವಿರುದ್ಧ ತನಿಖೆ ನಡೆಸಲು ಎಚ್ಚರಿಕೆ ನೋಟಿಸ್ ನೀಡಿರುವುದು ಕಾನೂನು ರೀತಿ ನಿಯಮಗಳು ಇರ ದೇ ಇರುವುದು ಗಮನಹರಿಸಿ ನೀಡಿರುವ ನೋಟೀಸ್ ಹಿಂಪಡೆಯಬೇಕು ಎಂದು ತಿಳಿಸಿದರು.

ರಾಜ್ಯಪಾಲರು ಪ್ಯಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಜಗಜ್ಜಾಹೀರಾಗಿದ್ದು ಇದನ್ನು ರಾಷ್ಟ್ರ ಪತಿಗಳು ಮನಗಂಡು ಸಿದ್ದರಾಮಯ್ಯ ಅವರಿಗೆ ನೀಡಿರುವ ನೋಟೀಸ್ ಹಿಂಪಡೆಯಲು ಸೂಚಿಸಿ, ಮುಖ್ಯ ಮಂತ್ರಿ ಸ್ಥಾನದಿಂದ ಮುಂದುವರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ಪ್ರಸನ್ನಕುಮಾರ್, ಖಜಾಂಚಿ ಬಾಬು, ಮುಖಂಡರುಗಳಾದ ಯೋಗೀಶ್, ಸಿದ್ದಯ್ಯ, ವಸಂತ್, ಗಿರೀಶ್, ಶೇಖರ್, ರಮೇಶ್, ಟಿ.ರವಿ ಮತ್ತಿತರರು ಹಾಜರಿದ್ದರು.

Protest against Sotis for permission to prosecute against CM

About Author

Leave a Reply

Your email address will not be published. Required fields are marked *