September 16, 2024

ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಲದ ಸುಳಿಗೆ ಸಿಲುಕಿದೆ

0
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸುದ್ದಿಗೋಷ್ಠಿ

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸುದ್ದಿಗೋಷ್ಠಿ

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಲದ ಸುಳಿಗೆ ಸಿಲುಕಿದೆ. ಮುಂದೊಂದು ದಿನ ಟಿಎ, ಡಿಎ ಕೊಡಲೂ ಆಗದ ಸ್ಥಿತಿ ಬರಬಹುದು ಎಂದು ವಿದಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಳ್ಳೆ ಕೆಲಸ ಆಗಿದೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ. ತೆರಿಗೆ ಹಣವನ್ನು ಗ್ಯಾರಂಟಿ ಹೆಸರಲ್ಲಿ ಹಂಚುತ್ತಿರುವುದನ್ನು ಬಿಟ್ಟರೆ ಬೇರೇನೂ ಆಗುತ್ತಿಲ್ಲ. ಯಾರದ್ದೋ ತೆಗೆದು, ಯಾರಿಗೋ ಹಂಚುವ ಕೆಲಸಕ್ಕೆ ಆಡಳಿತ ಬೇಕಿಲ್ಲ ಎಂದರು.

ಸಂಪನ್ಮೂಲ ಕ್ರೂಢೀಕರಣದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ವಿಚಾರದಲ್ಲಿ ಇವರ ಚಿಂತನೆಗಳೇ ಇಲ್ಲ. ಸಾಲದ ಸುಳಿಗೆ ಕರ್ನಾಟಕ ಸಿಲುಕಿದೆ. ಸಾಲ ಮಾಡಿ ತುಪ್ಪ ತಿಂದು ಎಷ್ಟು ಕಾಲ ಬದುಕಲು ಸಾಧ್ಯ. ಆದಾಯ ಕ್ರೂಢೀಕರಿಸದೆ ಬರೇ ಸಾಲ ಮಾಡಿದರೆ ಹಿಮಾಚಲ ಪ್ರದೇಶದಲ್ಲಿರುವಂತೆ ಸಂಬಳ ಕೊಡಲೂ ಹಣವಿಲ್ಲದ ಸ್ಥಿತಿ ಕರ್ನಾಟಕಕ್ಕೂ ಬರುತ್ತದೆ. ಜೀವರಕ್ಷಕ ಔಷಧಿ ಖರೀದಿಸಲೂ ಆಗದ ಸ್ಥಿತಿ ಉಂಟಾಗಬಹುದು. ಈ ಸರ್ಕಾರ ಬಂದ ಮೇಲೆ ಕೇವಲ ಹಗರಣ ಕಾರಣಕ್ಕೆ ಸುದ್ದಿ ಆಗುತ್ತಿದೆ ಎಂದರು.

ತನಿಖೆ ಎದುರಿಸಿ: ಮುಖ್ಯಮಂತ್ರಿಗಳ ವಿರುದ್ಧ ತನಿಖೆ ಮಾಡಬಾರದು ಎಂದು ಸಂವಿಧಾನ ಏನಾದರು ಏನಾದರೂ ಸೂಪರ್ ಪವರ್ ಕೊಟ್ಟಿದೆಯಾ ಎಂದು ಪ್ರಶ್ನಿಸಿದ ರವಿ, ಈಗ ರಾಜ್ಯಪಾಲರು ತನಿಖೆ ಮಾಡುವ ಅವಕಾಶ ಕೊಟ್ಟಿದ್ದಾರೆ. ಏನೂ ತಪ್ಪು ಮಾಡದೇ ಇದ್ದರೆ ತನಿಖೆಗೆ ಯಾಕೆ ಹೆದರಬೇಕು ಎಂದರು.

ರಾಜ್ಯಪಾಲರು ಅಪರಾಧಿ ಎಂದು ಆದೇಶ ಕೊಟ್ಟಿಲ್ಲ. ತನಿಖೆಯೇ ನಡೆಯಬಾರದು ಎಂದು ರಾಜ್ಯ ಪಾಲರನ್ನೇ ಗುರಿಯಾಗಿಟ್ಟು ಹೋರಾಟ ಮಾಡಿದರೆ ಹೇಗೆ? ನಡೆದಿರುವ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಜಾತಿ ಮತ್ತು ಬಲ ಪ್ರಯೋಗದ ಮಾತನಾಡುತ್ತಿದ್ದಾರೆ. ಕೆಲವರು ಪ್ರಧಾನಿ ಮನೆ ಮುತ್ತಿಗೆ ಮಾತನಾಡುತ್ತಾರೆ. ಅರಾಜಕತೆಯನ್ನು ನಿರ್ಮಿಸುವ ಸಂಚು ನಡೆದಿದೆ ಎನ್ನಿಸುತ್ತಿದೆ ಎಂದರು.

ಅರ್ಕಾವತಿ ಹಗರಣಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ವರದಿಯನ್ನು ಟೇಬಲ್ ಮಾಡಿ ಕ್ರಮ ತೆಗೆದುಕೊಳ್ಳಬೇಕಿತ್ತು. ಕಾಂಗ್ರೆಸ್ ಸರ್ಕಾರ ಬ್ರಷ್ಟ ಸರ್ಕಾರ, ಬ್ರಷ್ಟರಿಗೆ ಮಣೆ ಹಾಕುತ್ತಿರುವ, ಬ್ರಷ್ಟಾಚಾರ ನಡೆಸುತ್ತಿರುವ ಸರ್ಕಾರ ಎಂದು ದೂರಿದರು.

ಎರಡೂ ಪಕ್ಷದ ತೀರ್ಮಾನ: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವ್ ವಿಧಾನಸಭೆ ಉಪ ಚುನಾವಣೆ ಅಭ್ಯರ್ಥಿ ಕುರಿತಂತೆ ಈಗಾಗಲೇ ಜೆಡಿಎಸ್-ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಲಾಗಿದೆ. ಎಡರೂ ಪಕ್ಷ ಸೇರಿ ತೀರ್ಮಾನಿಸುತ್ತದೆ. ಎನ್‌ಡಿಎ ಗೆಲ್ಲಬೇಕು ಎಂದು ಎಚ್.ಡಿ.ಕುಮಾರ ಸ್ವಾಮಿ ಸಹ ಹೇಳಿದ್ದಾರೆ. ಎಲ್ಲಾ ಅವಕಾಶವನ್ನು ಮುಕ್ತವಾಗಿರಿಸಿಕೊಂಡಿದ್ದೆವೆ. ಶಾಸಕಾಂಗ ಪಕ್ಷದ ಸಭೆ ಈ ವಿಚಾರದಲ್ಲಿ ಅಂತಿಮ ತೀರ್ಮಾನ ಮಾಡಲಿದೆ ಎಂದು ರವಿ ಹೇಳಿದರು.

The Congress government of the state is in debt

About Author

Leave a Reply

Your email address will not be published. Required fields are marked *