September 16, 2024

ಹೆಣ್ಣು ಮಕ್ಕಳು ಸಮಾಜ ಕಟ್ಟುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು

0
ಅನುಭವ ದಿ ಗ್ರ್ಯಾಂಡ್ ಮೇಳ ಕಾರ್ಯಕ್ರಮ ಉದ್ಘಾಟನೆ

ಅನುಭವ ದಿ ಗ್ರ್ಯಾಂಡ್ ಮೇಳ ಕಾರ್ಯಕ್ರಮ ಉದ್ಘಾಟನೆ

ಚಿಕ್ಕಮಗಳೂರು: ಪ್ರತಿ ಹೆಣ್ಣು ಮಕ್ಕಳು ಸಮಾಜ ಕಟ್ಟುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶೃಂಗೇರಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ತಿಳಿಸಿದರು.

ಅವರು ಜಿಲ್ಲಾ ಮಹಿಳಾ ಒಕ್ಕಲಿಗ ಸಂಘದ ವತಿಯಿಂದ ನಗರದ ಆದಿಚುಂಚನಗಿರಿ ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅನುಭವ ದಿ ಗ್ರ್ಯಾಂಡ್ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಹಿಳೆ ಎಂದರೆ ಕೇವಲ ಅಡುಗೆ ಮನೆಗೆ ಸೀಮಿತ ಎನ್ನುವ ಪದ್ಧತಿ ಇತ್ತು. ಆದರೆ ಇಂದು ಮಹಿಳೆಯರೂ ಸಹ ಸಾಮಾಜಿಕ ರಂಗದಲ್ಲಿ ಬಂದು ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ ಎಂದರು.

ಒಕ್ಕಲಿಗ ಮಹಿಳಾ ಸಂಘದಿಂದ ಸಮಾಜದ ಏಳಿಗೆ ದೃಷ್ಠಿಯಿಂದ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಸಮಾಜ ಸೇವೆ ಮಾಡುವಾಗ ಕರ್ಮಫಲ ರ್‍ಯಾಗವನ್ನು ಮಾಡಬೇಕು. ನಾವು ಮಾಡುವ ಕೆಲಸದಲ್ಲಿ ಫಲದ ಅಪೇಕ್ಷೆ, ಆಸೆ ಇಟ್ಟುಕೊಳ್ಳಬಾರದು ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ. ಅದೇ ನಿಟ್ಟಿನಲ್ಲಿ ಹಿರಿಯರೆಲ್ಲರೂ ಒಕ್ಕಲಿಗ ಸಂಘವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ ಎಂದರು.

ಜಗತ್ತಿಗೆ ನೊಗವಾಗಿ, ನೇಗಿಲಾಗಿ ಬದುಕನ್ನು ಕಟ್ಟಿಕೊಟ್ಟಿರುವುದು ಒಕ್ಕಲು ತನ, ಆತನೇ ಅನ್ನಬ್ರಹ್ಮ, ಆತನನ್ನೇ ಕುವೆಂಪು ಅವರು ನೇಗಿಲ ಯೋಗಿ ಎಂದು ಕರೆದರು. ಯೋಗಿ ಎಂದರೆ ತಪಸ್ವಿ ಎಂದರ್ಥ ಎಂದು ತಿಳಿಸಿದರು.

ಇದೀಗ ಆರ್ಥಿಕ ವ್ಯವಹಾರದಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೀಗ ಮಹಿಳಾ ಒಕ್ಕಲಿಗ ಸಂಘವು ಅನುಭವ ಹೆಸರಿನಲ್ಲಿ ಗ್ರ್ಯಾಂಡ್ ಮೇಳ ಹಮ್ಮಿಕೊಂಡಿದೆ. ಇದು ಮುಂದುವರಿಯಲಿ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜೇಶೇಖರ್ ಮಾತನಾಡಿ, ದಿ ಗ್ರ್ಯಾಂಡ್ ಮೇಳವು ಕೇವಲ ವಾಣಿಜ್ಯ, ವ್ಯಾಪಾರದ ಉದ್ದೇಶವನ್ನು ಹೊಂದಿಲ್ಲ. ಬದಲಿಗೆ ವ್ಯಾಪಾರ, ವಹಿವಾಟಿನ ಅನುಭವಗಳಿಸಿಕೊಳ್ಳಬೇಕು ಎನ್ನುವ ಉದ್ದೇಶದ ಹಿನ್ನೆಲೆ ಕಾರ್ಯಕ್ರಮದ್ದಾಗಿದೆ ಎಂದರು.

ಕೃಷಿ, ತೋಟಗಾರಿಕೆ ನಮ್ಮೆಲ್ಲರ ರಕ್ತದಲ್ಲಿ ಬಂದ ಗುಣ, ಇದರ ಜೊತೆಗೆ ವ್ಯಾಪಾರದ ತಾಂತ್ರಿಕತೆಯನ್ನು ಕಲಿಸು ಸ್ವಾವಲಂಬಿಯಾಗಿ ಬದುಕು ಸಾಗಿಸುವಂತಾಗಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ ಎಂದರು.

ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ.ಜಯದೇವ, ಜಿಲ್ಲಾ ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ಕಲ್ಪನಾ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಾವ್ಯಾ ಸುಕುಮಾರ್, ಗೌರವ ಕಾರ್ಯದರ್ಶಿ ಅಮಿತಾ ಸುಜೇಂದ್ರ, ಸಹ ಕಾರ್ಯದರ್ಶಿ ಕೋಮಲಾ ರವಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ ಮತ್ತು ಮಹಿಳಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಭಾಗವಹಿಸಿದ್ದರು.

Experience The Grand Mela Program Inauguration

About Author

Leave a Reply

Your email address will not be published. Required fields are marked *