September 16, 2024

ಟಿಪ್ಪರ್- ಲಾರಿ ವಾಹನಗಳಿಗೆ ದಂಡ ವಿಧಿಸುತ್ತಿರುವ ಕ್ರಮ ಖಂಡಿಸಿ ಪ್ರತಿಭಟನೆ

0
ಟಿಪ್ಪರ್- ಲಾರಿ ವಾಹನಗಳಿಗೆ ದಂಡ ವಿಧಿಸುತ್ತಿರುವ ಕ್ರಮ ಖಂಡಿಸಿ ಪ್ರತಿಭಟನೆ

ಟಿಪ್ಪರ್- ಲಾರಿ ವಾಹನಗಳಿಗೆ ದಂಡ ವಿಧಿಸುತ್ತಿರುವ ಕ್ರಮ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು: ಟಿಪ್ಪರ್ ಲಾರಿ ವಾಹನಗಳಿಗೆ ಅಳವಡಿಸಿದ ಜಿಪಿಎಸ್ ತಾಂತ್ರಿಕ ದೋಷ ಮತ್ತು ಪರವಾನಗಿ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡದೆ ವಾಹನಗಳಿಗೆ ವಿಧಿಸಿರುವ ದಂಡವನ್ನು ಸಂಪೂರ್ಣ ರದ್ದುಮಾಡುವಂತೆ ಆಗ್ರಹಿಸಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲಿಕರ ಹಾಗೂ ಚಾಲಕರ ಸಂಘ ಇಂದು ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯ ನೇತೃತ್ವವನ್ನು ಕ್ರಷರ್ ಮಾಲಿಕರ ಸಂಘದ ನಾಸಿರ್, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಕೆಂಪನಹಳ್ಳಿ ಮಂಜುನಾಥ್, ಉಪಾಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಾಹನಗಳು ಪರವಾನಗಿ ಪಡೆದು ಉಪ ಖನಿಜ ತುಂಬಿಸಿ ಜಿಪಿಎಸ್ ತಂತ್ರಾಂಶದಲ್ಲಿ ಪ್ರತಿದಿನ ದಂಡ ವಿಧಿಸಿರುವುದನ್ನು ನಿಲ್ಲಿಸಬೇಕು. ವಾಹನಗಳು ಕ್ರಷರ್‌ಗೆ ಉಪ ಖನಿಜ ತುಂಬಲು ಹೋದಾಗ ಕ್ರಷರ್‌ನಲ್ಲಿ ಮೆಟೀರಿಯಲ್ ಇಲ್ಲದೆ ವಾಹನ ಹಿಂದಿರುಗಿದಾಗ ದಂಡ ವಿಧಿಸಿರುವುದನ್ನು ವಾಪಸ್ ಪಡೆಯುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ವಾಹನಗಳು ರಿಪೇರಿಗಾಗಿ ಗ್ಯಾರೇಜ್‌ಗೆ ಹೋದಾಗ ವೆಲ್ಡಿಂಗ್ ಕೆಲಸದ ವೇಳೆ ಬ್ಯಾಟರಿ ಡಿಸ್‌ಕನೆಕ್ಟ್ ಮಾಡಿದರೂ ದಂಡ ವಿಧಿಸುತ್ತಿದ್ದಾರೆ. ಕ್ರಷರ್‌ನಲ್ಲಿ ಪರವಾನಗಿ ಪಡೆಯುವಾಗ ತಾಂತ್ರಿಕ ಸಮಸ್ಯೆ ಇದ್ದರೆ ಜಿಪಿಎಸ್ ಗೆ ೧೦೫೦೦, ರಿನಿವಲ್‌ಗೆ ೫೫೦೦ ದಂಡ ವಿಧಿಸಿ ಜಿಪಿಎಸ್ ಬಗ್ಗೆ ಮಾಹಿತಿ ನೀಡದೆ ತೊಂದರೆಕೊಡುತ್ತಿದ್ದಾರೆಂದು ದೂರಿದ್ದಾರೆ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡಲೇ ಗಮನ ಹರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ನೀಡುತ್ತಿರುವ ಕಿರುಕುಳವನ್ನು ತಪ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸುರೇಶ್, ಜಯದೀಪ್, ರಾಜಣ್ಣ, ಉಪಸ್ಥಿತರಿದ್ದರು.

Protest against tipper-lorry vehicles

About Author

Leave a Reply

Your email address will not be published. Required fields are marked *