September 16, 2024
ಜಿಲ್ಲಾ ಆಹಾರ, ನಾಗರೀಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸಭೆ

ಜಿಲ್ಲಾ ಆಹಾರ, ನಾಗರೀಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸಭೆ

ಚಿಕ್ಕಮಗಳೂರು: ಜನತೆ ಹಸಿನಿಂದ ಬಳಲಬಾರದೆಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ನಿವಾಸಿಗಳಿಗೆ ಅಕ್ಕಿ ಜೊತೆಗೆ ಆರಂಭದಿಂದ ಸುಮಾರು ೧೨೬ ಕೋಟಿ ರೂ.ಗಳನ್ನು ಫಲಾನುಭವಿಯ ಖಾತೆಗೆ ಭರಿಸಿ ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.

ಜಿಲ್ಲಾ ಆಹಾರ, ನಾಗರೀಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ಹಾಗೂ ಪರಿಷ್ಕರಣೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ೨.೫೯ ಲಕ್ಷ ಕಾರ್ಡ್‌ಗಳ ಪೈಕಿ ೮.೩೮ ಲಕ್ಷ ಮಂದಿಗೆ ಮಾಹೆಯಾನ ೧೩ ಕೋಟಿ ರೂ.ಗಳ ಅನ್ನಭಾಗ್ಯದ ಮೊತ್ತವನ್ನು ರಾಜ್ಯಸರ್ಕಾರ ಭರಿಸಿ ಸಾರ್ವಜನಿಕರಿಗೆ ಸಹಾಯಹಸ್ತ ಕಲ್ಪಿಸಿದೆ ಎಂದರು.

ಕಳೆದ ಸಾಲಿನ ಜುಲೈ ತಿಂಗಳಿನಿಂದ ಆರಂಭಗೊಂಡ ಅನ್ನಭಾಗ್ಯ ಯೋಜನೆಯಿಂದ ಜಿಲ್ಲೆಯ ಲಕ್ಷಾ ಂತರ ಮಂದಿಗೆ ೧೨೬ ಕೋಟಿ ರೂ.ಗಳನ್ನು ಆಹಾರ ಖರೀದಿಸಲು ಕುಟುಂಬದ ಯಜಮಾನಿಗೆ ಹಣ ಸಂದಾ ಯ ಗೊಳಿಸಿದೆ. ಇಂತಹ ಮಹಾತ್ವಕಾಂಕ್ಷೆ ಯೋಜನೆಯು ಜನತೆ ದುರ್ಬಳಕೆ ಮಾಡಿಕೊಳ್ಳದೇ ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಸ್ತುತ ಅನ್ನಭಾಗ್ಯ ಯೋಜನೆ ಸೌಲಭ್ಯಗಳು ಯಾವ ಕುಟುಂಬಕ್ಕೆ ತಲುಪಿಲ್ಲ, ಅಂಥ ಕುಟುಂಬಗಳು ಅರ್ಹತೆ ಹೊಂದಿದ್ದಲ್ಲಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ನಿರ್ವಹಿಸಬೇಕು. ಮುಂಬರುವ ದಿನಗ ಳಲ್ಲಿ ಸೌಲಭ್ಯದಿಂದ ವಂಚಿತಗೊಳ್ಳದಂತೆ ಸಮರ್ಪಕವಾಗಿ ರಾಜ್ಯಸರ್ಕಾರ ಐದು ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಆಹಾರ ಪಡಿತರ ವಿತರಣೆ ವೇಳೆಯಲ್ಲಿ ಅರ್ಜಿ ಸಲ್ಲಿಸುವುದು ಆನ್‌ಲೈನ್ ಮೂಲಕವೇ ಇರುವುದರಿಂದ ಗ್ರಾಮ್-೧ ವ್ಯವಸ್ಥೆ ತಾಂತ್ರಿಕ ಕಾರಣದಿಂದ ಸರಿಯಾದ ರೀತಿಯ ಲ್ಲಿ ಕೆಲಸ ನಿರ್ವಹಿಸಿಲ್ಲ. ಹೀಗಾಗಿ ಜಿಲ್ಲೆಯ ಸುಮಾರು ೪ ಸಾವಿರ ಮಂದಿ ಈ ಯೋಜನೆಯಿಂದ ವಂಚಿ ತವಾಗಿದ್ದು ಮುಂದೆ ಅವರಿಗೆ ಯೋಜನೆಯ ಸವಲತ್ತು ಒದಗಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ದ ಜನತೆಗೆ ಹಸಿವು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಪ್ರತಿ ಬಡವ ರ ಮನೆಗಳಿಗೆ ಪ್ರತಿದಿನದ ಹಸಿವು ನೀಗಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ದರು.

ಇದೇ ವೇಳೆ ಸೆಪ್ಟೆಂಬರ್ ೧೫ ರಂದು ನಡೆಯುವ ಸಂವಿಧಾನ ದಿನಾಚರಣೆ ಅಂಗವಾಗಿ ಮಾನವ ಸರಪವಳಿಯಲ್ಲಿ ಫಲಾನುಭವಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಲು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆಹಾರ, ನಾಗರೀಕ ಮತ್ತು ಗ್ರಾಹಕರ ವ್ಯವಹಾರಗಳ ಉಪನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷರಾದ ಹೇಮಾವತಿ, ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ಮಲ್ಲೇ ಶಸ್ವಾಮಿ, ಎನ್.ಆರ್.ಪುರ ಅಧ್ಯಕ್ಷೆ ಚಂದ್ರಮ್ಮ, ಶೃಂಗೇರಿ ಅಧ್ಯಕ್ಷೆ ರಾಜು, ಸದಸ್ಯರುಗಳಾದ ಜೇಮ್ಸ್ ಡಿಸೋ ಜಾ, ಬಸವರಾಜ್, ಶಫಿವುಲ್ಲಾ ಹಾಗೂ ಆಹಾರ ನಿರೀಕ್ಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

168 crore for food purchase. Deposit from Govt

About Author

Leave a Reply

Your email address will not be published. Required fields are marked *