September 16, 2024

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಂದ ದಿವಂಗತ ಡಿ.ಸಿ. ಶ್ರೀಕಂಠಪ್ಪನವರ ವೃತ್ತ ಉದ್ಘಾಟಿನೆ

0
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಂದ ದಿವಂಗತ ಡಿ.ಸಿ. ಶ್ರೀಕಂಠಪ್ಪನವರ ವೃತ್ತ ಉದ್ಘಾಟಿನೆ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಂದ ದಿವಂಗತ ಡಿ.ಸಿ. ಶ್ರೀಕಂಠಪ್ಪನವರ ವೃತ್ತ ಉದ್ಘಾಟಿನೆ

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ವೇಳೆ ನೀಡಿದ ಭರವಸೆಯಂತೆ ನಗರದ ಡಿ ಎ ಸಿ ಜಿ ಪಾಲಿಟೆಕ್ನಿಕ್ ಸಮೀಪ ಸ್ವಂತ ವೆಚ್ಚದಲ್ಲಿ ನಿರ್ಮಿಸಿರುವ ಮಾಜಿ ಸಂಸದ ದಿವಂಗತ ಡಿ.ಸಿ. ಶ್ರೀಕಂಠಪ್ಪನವರ ವೃತ್ತವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಶ್ರೀಕಂಠಪ್ಪ ಕುಟುಂಬದವರು ಸರಳವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ೨೦೨೪ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪೂರ್ವಭಾವಿಯಾಗಿ ಜಿಲ್ಲೆಯ ಸಮಸ್ಯೆಗಳನ್ನು ತಿಳಿಯಲು ಮತ್ತು ಅಲ್ಲಿನ ಜನರ ಸಂಪರ್ಕ ಮಾಡುವ ಉದ್ದೇಶದಿಂದ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರದ ಗ್ರಾಮಸ್ಥರನ್ನು, ಬಿಜೆಪಿಯ ಮುಖಂಡರುಗಳನ್ನು ಭೇಟಿಗಾಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದೆ. ಆ ಸಂದರ್ಭದಲ್ಲಿ ಸುಮಾರು ೧೫ ವರ್ಷಗಳ ಹಿಂದೆ ಲೋಕಸಭಾ ಸದಸ್ಯರಾಗಿದ್ದ ದೇಶಕ್ಕೆ ಮಾದರಿ ಸಂಸದರಾಗಿದ್ದ ಡಿ.ಸಿ ಶ್ರೀಕಂಠಪ್ಪನವರು ಮಾಡಿದ್ದ ಸರಳತೆ ,ಪ್ರಾಮಾಣಿಕತೆ ಸಜ್ಜನಿಕೆ,ಜನಪರ ಜನಸ್ನೇಹಿ ವ್ಯಕ್ತಿತ್ದ ಬಗ್ಗೆ ಜಿಲ್ಲೆಯ ಜನತೆ ಮಾಡುತ್ತಿದ್ದ ಸ್ಮರಣೆಯಿಂದ ಪ್ರೇರೇಪಿತನಾಗಿದ್ದೆ ಎಂದರು.

ಇಂತಹ ಮಾದರಿ ರಾಜಕಾರಣಿಯೋರ್ವರನ್ನು ಸ್ಮರಿಸುವಂತಹ ಯಾವುದೇ ಶಾಶ್ವತವಾದ ಸ್ಮಾರಕಗಳು ಇಲ್ಲದಿರುವುದುಕೊರತೆಯಾಗಿ ಕೊರತೆ ಕಂಡಿತ್ತು. ಲೋಕಸಭ ಚುನಾವಣೆಗೆ ತಮಗೆ ಟಿಕೆಟ್ ಸಿಗಲಿ ಸಿಗದೇ ಇರಲಿ ಅಧಿಕಾರ ಸಿಗಲಿ ಸಿಗದೇ ಇರಲಿ ತಮ್ಮಸ್ವಂತ ಖರ್ಚಿನಲ್ಲಿ ನಗರದಲ್ಲಿ ಪ್ರಮುಖ ವೃತ್ತದಲ್ಲಿ ಶ್ರೀಕಂಠಪ್ಪನವರ ಒಂದು ಸ್ಮಾರಕವನ್ನು ನಿರ್ಮಿಸಬೇಕೆನ್ನುವ ತೀರ್ಮಾನಕ್ಕೆ ಬಂದುಅಂದೇ ನಗರಸಭೆಗೆ ಅರ್ಜಿಯನ್ನು ಸಲ್ಲಿಸಿ ಕಾರ್ಯಪ್ರವೃತ್ತರಾಗಿದ್ದೆ ಎಂದು ಹೇಳಿದರು.

ಕಳೆದ ಹಲವು ದಿನಗಳಿಂದ ಆರಂಭಗೊಂಡ ಕಾಮಗಾರಿ ಪೂರ್ಣಗೊಂಡು,ಶ್ರೀಕಂಠಪ್ಪನವರ ಪ್ರತಿಮೆಯನ್ನು ಕಲ್ಕತ್ತಾದಿಂದ ಪ್ರತಿಮೆಯನ್ನು ತರಿಸಲಾಗಿತ್ತು. ಸುಪ್ರೀಂಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ಪ್ರತಿಮೆ ಸ್ಥಾಪನೆಗೆ ನಗರಸಭೆ ಅನುಮತಿ ನೀಡದಿರುವುದು ನೋವು ತಂದಿದೆ ಎಂದು ಹೇಳಿದರು.

ತಾವು ಕಾನೂನಿಗೆ ತಲೆಬಾಗುವುದಾಗಿ ತಿಳಿಸಿ ಸುಪ್ರೀಂ ಕೋರ್ಟಿನ ಎಲ್ಲಾ ಆದೇಶಗಳನ್ನು ಅಧಿಕಾರಿಗಳು ಅನುಷ್ಠಾನಗೊಳಿಸುವರೇ ಎಂದು ಪ್ರಶ್ನಿಸಿ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ಹಿನ್ನೆಲೆಯಲ್ಲಿ ನಿರಾಸೆಗೊಂಡ ಪ್ರಮೋದ್ ಮಧ್ವರಾಜ್ ಮೂರ್ತಿಯನ್ನು ಶ್ರೀಕಂಠಪ್ಪನವರ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ಶ್ರೀಕಂಠಪ್ಪನವರ ವೃತ್ತ ನಿರ್ಮಿಸಿರುವ ಬಗ್ಗೆ ಹಿರಿಯ ವೈದ್ಯ ಜೆ.ಪಿ. ಕೃಷ್ಣೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶ್ರೀಕಂಠಪ್ಪನವರ ಪುತ್ರ ಅಶೋಕ್, ಪುತ್ರಿ ಆಶಾ ಮಂಜುನಾಥ್ ಹಾಗೂ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

Former minister Pramod Madhwaraj to late D.C. Inauguration of Srikanthappa’s circle

About Author

Leave a Reply

Your email address will not be published. Required fields are marked *