September 16, 2024

ಆಜಾದ್ ಮೈದಾನ ಸಾರ್ವಜನಿಕ ಗಣೇಶೋತ್ಸವದಲ್ಲಿ 21 ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

0
ಆಜಾದ್ ಮೈದಾನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಆರ್ ಕೇಶವಮೂರ್ತಿ ಸುದ್ದಿಗೋಷ್ಠಿ

ಆಜಾದ್ ಮೈದಾನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಆರ್ ಕೇಶವಮೂರ್ತಿ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಇಲ್ಲಿನ ಸಾರ್ವಜನಿಕ ಶ್ರೀ ಗಣಪತಿ ಸೇವಾ ಸಮಿತಿ, (ಆಜಾದ್ ಮೈದಾನ) ವತಿಯಿಂದ ಶ್ರೀ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಈಬಾರಿಯ ೮೮ನೇ ವರ್ಷದ ಗಣೇಶೋತ್ಸವವನ್ನು ೨೧ ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಆರ್ ಕೇಶವಮೂರ್ತಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸೆ.೭ ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಬಸವನಹಳ್ಳಿಯ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಗಣಪತಿ ಮೆರವಣಿಗೆಯನ್ನು ಪ್ರಾರಂಭಿಸಿ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀಯವರ ಆಸ್ಥಾನ ಮಂಟಪದಲ್ಲಿ ಸಂಜೆ ೫ ಗಂಟೆಗೆ ಪ್ರತಿಷ್ಠಾಪಿಸಲಾಗುವುದೆಂದು ಹೇಳಿದರು.

ಗಣೇಶೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹರಿಕಥೆ-೩, ಸುಗಮ ಸಂಗೀತ-೩, ನೃತ್ಯರೂಪಕ-೨, ಜಾದು-೨, ಆರ್ಕೆಸ್ಟ್ರಾ-೬, ಜನಪದ ಕಾರ್ಯಕ್ರಮ-೧, ಡ್ಯಾನ್ಸ್-೧ ಸೇರಿದಂತೆ ಒಟ್ಟು ೨೧ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ದಿನ ಸಂಜೆ ೭ ಗಂಟೆಯಿಂದ ರಾತ್ರಿ ೧೦.೩೦ ರವರೆಗೆ ನಡೆಸಲಾಗುವುದು ಎಂದರು.

ಸೆ.೧೮ ರ ಬುಧವಾರ ಸಂಜೆ ೬ ಗಂಟೆಗೆ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ೨೧ ರಂದು ಶನಿವಾರ ಸಂಕಷ್ಠಹರ ಗಣಪತಿ ವಿಶೇಷ ಪೂಜೆ, ೨೨ ರಂದು ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀಯವರ ಗಣಹೋಮ, ಮಧ್ಯಾಹ್ನ ೧೨ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸೆ.೨೮ ರಂದು ಶನಿವಾರ ಮಧ್ಯಾಹ್ನ ೩ ಗಂಟೆಗೆ ಶ್ರೀಯವರನ್ನು ಭವ್ಯ ಅಲಂಕೃತ ಪ್ರಭಾವಳಿಯಲ್ಲಿ ಕುಳ್ಳಿರಿಸಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಾದಸ್ವರ, ಗೊಂಬೆ, ಡೊಳ್ಳು ಕುಣಿತ, ಹಳ್ಳಿ ವಾದ್ಯ ಇನ್ನೂ ಮುಂತಾದ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದರು.

ವಿಜೃಂಭಣೆಯಿಂದ ಕೂಡಿದ ಮೆರವಣಿಗೆಯು ನಗರದ ಪ್ರಮುಖ ರಾಜಬೀದಿಯಲ್ಲಿ ಹಾಗೂ ಎಂ.ಜಿ ರಸ್ತೆ ಯಲ್ಲಿ ಸಾಗಿ ಸೆ.೨೯ ರ ಭಾನುವಾರ ಬೆಳಿಗ್ಗೆ ೯.೩೦ ಕ್ಕೆ ನಗರದ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ತಿಳಿಸಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಗರದ ನಾಗರೀಕರು, ಭಕ್ತಾಧಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎಸ್ ಕುಬೇರ, ಖಜಾಂಚಿ ಹೆಚ್.ಕೆ ಮಂಜುನಾಥ್, ಕಾರ್ಯಾಧ್ಯಕ್ಷ ಈಶ್ವರಪ್ಪ.ಎನ್ ಕೋಟೆ, ಗೌರವಾಧ್ಯಕ್ಷ ಎಂ.ದಿವಾಕರ್, ಉಪಾಧ್ಯಕ್ಷ ಎಂ.ಎಸ್ ಉಮೇಶ್ ಕುಮಾರ್, ಕಾರ್ಯದರ್ಶಿ ಸಚಿನ್, ಸಿ.ಆರ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

21 Days of Various Cultural Program at Azad Maidan Public Ganeshotsav

About Author

Leave a Reply

Your email address will not be published. Required fields are marked *