September 16, 2024

ಆರೋಗ್ಯ ಇಲಾಖೆಯಲ್ಲಿ ನಡೆದ ವೈದ್ಯರ ನೇಮಕಾತಿಯಲ್ಲಿ ಅಕ್ರಮ-ಆರೋಪ

0
ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕೆಳಗೂರು ರಮೇಶ್ ಸುದ್ದಿಗೋಷ್ಠಿ

ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕೆಳಗೂರು ರಮೇಶ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಆರೋಗ್ಯ ಇಲಾಖೆಯಲ್ಲಿ ೬೧ ವೈದ್ಯರು ಮತ್ತು ನರ್ಸ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕೆಳಗೂರು ರಮೇಶ್ ಆರೋಪಿಸಿದರು

ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ೬೧ ಹುದ್ದೆಗೆ ೯೪೩ ಅರ್ಜಿಗಳು ಸಲ್ಲಿಕೆಯಾಗಿವೆ.ಅದರಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅನುಸರಿಸಿರುವ ಮಾನದಂಡ ಇದು ಯಾವುದನ್ನು ನೀಡದೆ ಅಕ್ರಮವನ್ನುಯ ಮುಚ್ಚಿಹಾಕಲು ಯತ್ನಿಸಲಾಗಿದೆ. ಹಗರಣ ಬಯಲಿಗೆಳೆಯಲು ನಾವು ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ಘಟಕಕ್ಕೆ ಮಾಹಿತಿ ಕೇಳಿದ್ದು, ೫೦ ಕಟ್ಟಿಸಿಕೊಂಡು ನೀಡಿರುವ ಮಾಹಿತಿಯಲ್ಲಿ ದೊಡ್ಡಮಟ್ಟದ ಹಣಕಾಸಿನ ವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆ ಸಂದರ್ಭದಲ್ಲಿ ಅಕ್ರಮ ನಡೆಸಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯವೆಸಗಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿರುವುದರಿಂದ ಈ ಅಕ್ರಮದ ಬಗ್ಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಹಣಕೊಟ್ಟವರು ಉದ್ಯೋಗ ಪಡೆದುಕೊಂಡಿರುವ ಶಂಕೆ ಇದೆ. ಅರ್ಹತೆ ಇದ್ದೂ ಹಣನೀಡದವರನ್ನು ಆಯ್ಕೆಪಟ್ಟಿಯಲ್ಲಿ ಕಡೆಗಣಿಸಲಾಗಿದೆ. ಈ ಕುರಿತು ಮಾಹಿತಿಹಕ್ಕು ಅಧಿನಿಯಮ ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಹಸ್ತಾಂತರಮಾಡಿದ್ದಾರೆ. ಸರ್ವಜನಿಕ ಮಾಹಿತಿ ಅಧಿಕಾರಿ ೧೨೦೮೪ ಪುಟಗಳು ಇರುವುದರಿಂದ ಪ್ರತಿ ಪುಟಕ್ಕೆ ೨ ರೂಪಾಯಿಗಳಂತೆ ನಮ್ಮಿಂದ ೨೪ಸಾವಿರ ರೂ. ಕಟ್ಟಿಸಿಕೊಂಡಿದ್ದಾರೆಂದರು.

ಆಯ್ಕೆಯ ಮಾನದಂಡದಲ್ಲಿ ನಡೆದಿರುವ ಅಕ್ರಮ ಮುಚ್ಚಿಹಾಕುವ ಉದ್ದೇಶದಿಂದ ನನಗೆ ನೋಟಿಸ್ ಕೊಡುತ್ತಾರೆ.ಆ ನೋಟಿಸ್‌ಗೆ ೫ ಹಿಂಬರಹಕೊಟ್ಟು ನನಗೆ ಬೇಕಾಗಿರುವ ಮಾಹಿತಿನೀಡುವಂತೆ ಕೋರಲಾಗಿದೆ. ಅಗತ್ಯವಿರುವ ಪುಟಗಳು ಎಂದು ಅನಗತ್ಯ ೧೨೦೮೪ ಪುಟಗಳ ಮಾಹಿತಿ ನೀಡಿ ವಂಚಿಸಿದ್ದಾರೆಂದು ದೂರಿದರು.

ಸರಿಯಾದ ಮಾಹಿತಿ ನೀಡದೆ ವಂಚಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಸಾರ್ವಜನಿಕ ಮಾಃಇತಿ ಅಧಿಕಾರಿಯ ಮೇಲೆ ಮಾಹಿತಿ ಆಯೋಗ ಕೋರ್ಟ್‌ನಲ್ಲಿ ದೂರುದಾಖಲಿಸಿದ್ದೇವೆ. ಮತ್ತು ಸರ್ಕಾದ ತನಿಖಾ ಸಂಸ್ಥೆಗಳಿಗೂ ಅಹವಾಲು ಸಲ್ಲಿಸಲಿದ್ದೇವೆ.ಈ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಅಟಾರಿಯಾ ಅವರಿಗೂ ದೂರು ಸಲ್ಲಿಸಿದ್ದೇವೆಂದು ತಿಳಿಸಿದರು.ಹೊನ್ನೇಶ್, ಸುಜಯ್, ಜಗದೀಶ್ ಚಕ್ರ ವರ್ತಿ, ಚೇತನ್‌ಜೇನುಬೈಲು ಇದ್ದರು

Allegation of illegality in appointment of doctors in health department

About Author

Leave a Reply

Your email address will not be published. Required fields are marked *