September 17, 2024

ಶೃಂಗೇರಿಯಲ್ಲಿ ವಿಜೃಂಭಣೆಯ ಗೌರಿ-ಗಣೇಶ ಹಬ್ಬ

0
ನರಸಿಂಹವನದ ಗುರುನಿವಾಸದಲ್ಲಿ ಶ್ರೀ ಭಾರತೀತೀರ್ಥ ಸ್ವಾಮೀಜಿಯಿಂದ ಗಣಪತಿಗೆ ವಿಶೇಷ ಪೂಜೆ

ನರಸಿಂಹವನದ ಗುರುನಿವಾಸದಲ್ಲಿ ಶ್ರೀ ಭಾರತೀತೀರ್ಥ ಸ್ವಾಮೀಜಿಯಿಂದ ಗಣಪತಿಗೆ ವಿಶೇಷ ಪೂಜೆ

ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಶನಿವಾರ ಗಣಪತಿ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿಗಳನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಅರ್ಪಿಸಿ ಶ್ರದ್ಧಾಭಕ್ತಿಯಿಂದ ಗಣಪತಿಯನ್ನು ಪೂಜಿಸಿದರು.

ಶೃಂಗೇರಿ ತಾಲ್ಲೂಕಿನ ನಲ್ಲೂರು, ಬೇಗಾರು, ಕಾಂಚೀನಗರ, ವಿದ್ಯಾರಣ್ಯಪುರ, ನೆರಲಕೂಡಿಗೆ, ಆನೆಗುಂದ, ತೆಕ್ಕೂರು. ಬೆಟ್ಟಗೆರೆ, ಶಿಡ್ಲೆ, ಮಳೂರು, ಗಂಡಘಟ್ಟ, ಅಡ್ಡಗದ್ದೆ, ಕೆಳಕೊಪ್ಪ, ತೊರೆಹಡ್ಲು, ಮೆಣಸೆ, ಕಿಗ್ಗಾ, ಕೋರನಕೂಡಿಗೆ, ವೈಕುಂಠಪುರ, ಹೆಬ್ಬಾರಗದ್ದೆ, ಪಟ್ಟಣದ ಭಾರತೀ ಬೀದಿಯ ಗಣಪತಿ ದೇವಾಲಯ, ವಿ.ಆರ್ ಗೌರೀಶಂಕರ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿ, ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಲಾದ ವಿನಾಯಕನಿಗೆ ವಿಶೇಷ ಪೂಜೆ, ಗಣಹೋಮ ನಡೆಸಲಾಯಿತು. ಗಣೇಶನಿಗೆ ಪಾಯಸ, ಕಡಬು, ಪಂಚಕಜ್ಜಾಯ ಮೊದಲಾದ ನೈವೇದ್ಯಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶೃಂಗೇರಿ ಶಾರದ ಮಠದ ಪ್ರವಚನ ಮಂದಿರದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಶಕ್ತಿಗಣಪತಿ, ಹೊರ ಪ್ರಾಂಗಣದಲ್ಲಿರುವ ತೋರಣಗಣಪತಿಯ ಸನ್ನಿಧಿಯಲ್ಲಿ, ಮಲಹಾನಿಕರೇಶ್ವರ ದೇವಾಲಯದ ಸ್ತಂಭಗಣಪತಿ, ವಿದ್ಯಾಶಂಕರ ದೇವಾಲಯದ ವಿದ್ಯಾಗಣಪತಿ, ದೇವಾಲಯದ ಹೊರಗೆ ಇರುವ ಕಡಲೆ ಗಣಪತಿಗೆ ಋತ್ವಿಜರು ಪೂಜೆ ಸಲ್ಲಿಸಿದರು.

ನರಸಿಂಹವನದ ಗುರುನಿವಾಸದಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಗೆ ವಿಶೇಷ ಪೂಜೆಯನ್ನು ಉಭಯ ಸ್ವಾಮಿಜಿಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿಯವರು ಸಲ್ಲಿಸಿ, ವರಸಿದ್ಧಿ ವಿನಾಯಕ ವ್ರತವನ್ನು ನೆರವೇರಿಸಿದರು.

ವಿವಿಧ ಹೂಗಳಿಂದ ಅಲಂಕೃತವಾದ ಗಣಪತಿಗೆ ಗರಿಕೆಯನ್ನು ಏರಿಸಿ ಪೂಜೆ ಸಲ್ಲಿಸಲಾಯಿತು. ಉಭಯ ಸ್ವಾಮಿಜೀಗಳ ಸಲ್ಲಿಸುತ್ತಿರುವ ಪೂಜೆಯನ್ನು ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು.
ಶೃಂಗೇರಿ ಪಟ್ಟಣದ ಗೌರೀಶಂಕರ್ ಸಭಾಂಗಣದಲ್ಲಿ ೬೪ನೇ ವರ್ಷದ ಮಹಾಗಣಪತಿಯನ್ನು ಶನಿವಾರ ಬೆಳಿಗ್ಗೆ ಅರ್ಚಕರಾದ ನಾಗರಾಜ್ ಭಟ್‌ರವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದರು. ಸಂಜೆ ಶಾರದಾ ಮಠದ ಹರೀಶ್ ಭಟ್ ಸಂಗಡಿಗರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಿತು.

A grand Gauri-Ganesha festival in Sringeri

 

About Author

Leave a Reply

Your email address will not be published. Required fields are marked *

You may have missed