September 17, 2024

ಗಣಪತಿ ಪ್ರತಿಷ್ಟಾಪನ ಮೊದಲ ದಿನವೇ ೬೦೦ ಮೂರ್ತಿ ವಿಸರ್ಜನೆ

0
ಚಿಕ್ಕಮಗಳೂರು ನಗರದ ಕೋಟೆಕೆರೆ ದ್ವಾರದಲ್ಲಿ ಗಣಪತಿ ವಿಸರ್ಜನೆ

ಚಿಕ್ಕಮಗಳೂರು ನಗರದ ಕೋಟೆಕೆರೆ ದ್ವಾರದಲ್ಲಿ ಗಣಪತಿ ವಿಸರ್ಜನೆ

ಚಿಕ್ಕಮಗಳೂರು:  ಗಣಪತಿ ಮೂರ್ತಿ ಪ್ರತಿ?ಪನಾ ಮೊದಲ ದಿನದಂದು ಕೋ ಟೆಕೆರೆ ಹಾಗೂ ನಗರದ ವಿವಿದೆಡೆ ನಿರ್ಮಿಸಿರುವ ತಾತ್ಕಾಲಿಕ ಬಾವಿಗಳಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಗಣ ಪತಿ ಹಾಗೂ ಗೌರಮ್ಮನ ವಿಗ್ರಹಗಳನ್ನು ಭಕ್ತಾಧಿಗಳು ಕುಟುಂಬ ಸಮೇತ ಆಗಮಿಸಿ ಶ್ರದ್ದೆಯಿಂದ ಪೂಜಿಸಿ ವಿಸರ್ಜಿಸಿದರು.

ಹನುಮಂತಪ್ಪ ಸರ್ಕಲ್, ಆಜಾದ್‌ಪಾರ್ಕ್ ಹಾಗೂ ಕೋಟೆಕೆರೆಯಲ್ಲಿ ನಗರಸಭೆ ನಿಗಧಿಗೊಳಿಸಿದ್ಧ ಸ್ಥಳಗಳಲ್ಲಿ ಸಾರ್ವಜನಿಕರು ಪುಟ್ಟ ಗಣಪತಿ ಮೂರ್ತಿಗಳನ್ನು ಬೆಳಿಗ್ಗೆ ಪ್ರತಿ?ಪಿಸಿ ಸಂಜೆ ವಿಸರ್ಜನೆ ನಡೆಸಿ ದ್ದು ಕೋಟೆಕೆರೆ ದ್ವಾರದಿಂದ ಕಲ್ಯಾಣಿವರೆಗೂ ವಿದ್ಯುತ್ ದೀಪಾಲಂಕಾರವು ಆಗಮಿಸಿದ್ಧ ಭಕ್ತಾಧಿಗಳಿಗೆ ಮು ದ ನೀಡುತ್ತಿತ್ತು.

ಗಣೇಶನ ಮೂರ್ತಿಗಳ ವಿಸರ್ಜನೆಗೆ ನಗರಸಭಾ ಆಡಳಿತ ಸಮರ್ಪಕ ವ್ಯವಸ್ಥೆ ಕಲ್ಪಿಸಿತ್ತು. ಕೋಟೆ ಕೆರೆ ದ್ವಾರದಿಂದ ಬೀದಿದೀಪ, ಸಿಸಿಟಿವಿ ಕ್ಯಾಮರಾಗಳು ಅಳವಡಿಸಿತ್ತು. ಕಲ್ಯಾಣಿಗೆ ಭಕ್ತಾಧಿಗಳು ಇಳಿಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪರಿಣಿತ ಸಿಬ್ಬಂದಿಗಳನ್ನು ನೇಮಿಸಿ ಅವರಿಂದ ಮೂರ್ತಿಗಳನ್ನು ವಿಸರ್ಜಿಸುವ ವ್ಯವಸ್ಥೆ ಕಲ್ಪಿಸಿತ್ತು.

ಸಂಜೆ ೫ ರಿಂದ ಪ್ರಾರಂಭಗೊಂಡ ವಿಸರ್ಜನೆಯ ಅವಕಾಶವನ್ನು ರಾತ್ರಿ ೧೧ರ ತನಕ ಸೀಮಿತಗೊ ಳಿಸಿತ್ತು. ಮುಖ್ಯವಾಗಿ ಕಲ್ಯಾಣಿಗೆ ಹೂವು, ಹಣ್ಣು, ಎಲೆಅಡಿಕೆ ಹಾಗೂ ಕಾಯಿಗಳನ್ನು ಹಾಕದಂತೆ ಸೂಚನೆ ಯಿದ್ದ ಮೇರೆಗೆ ಬೇರ್ಪಡಿಸಿ ದೊಡ್ಡಗಾತ್ರದ ಟಬ್‌ಗಳನ್ನು ಇರಿಸಿ, ಅಲ್ಲೇ ಪೂಜಾ ಸಾಮಾಗ್ರಿಗಳನ್ನು ಹಾಕಲಾ ಗುತ್ತಿತ್ತು.

ಇನ್ನುಳಿದಂತೆ ಹನುಮಂತಪ್ಪ ಹಾಗೂ ಆಜಾದ್‌ಪಾರ್ಕ್ ವೃತ್ತದಲ್ಲಿ ಸ್ಥಳೀಯ ನಿವಾಸಿಗಳಿಗೆ ವಿಸರ್ಜ ನಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಂದಂತಹ ಭಕ್ತಾಧಿಗಳು ಪೂಜಾಕೈಂಕರ್ಯ ನೆರವೇರಿಸಿ ತಾತ್ಕಾಲಿಕ ಬಾವಿ ಗಳಲ್ಲಿ ಗಣಪನ ವಿಗ್ರಹಗಳನ್ನು ವಿಸರ್ಜಿಸಿ ಬದುಕಿನ ಕ?ವನ್ನು ನಿವಾರಿಸಲೆಂದು ಪ್ರಾರ್ಥಿಸಿದರು.

ವಿಸರ್ಜನೆಗೆ ಬಂದಂತಹ ಭಕ್ತಾಧಿಗಳಿಗೆ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನೋಂದಾ ಯಿಸಲಾಗುತ್ತಿತ್ತು. ಮಾಹಿತಿ ಅನುಸಾರ ಪುಟ್ಟ ಹಾಗೂ ಒಂದೂವರೆ ಅಡಿ ಸೇರಿದಂತೆ ೬೦೦ ಕ್ಕೂ ಹೆಚ್ಚು ಗಣ ಪತಿ ಮೂರ್ತಿ ವಿಸರ್ಜನೆಗೊಳಿಸಿದ್ದು ಈ ವೇಳೆ ಕೋಟೆಕೆರೆಗೆ ನಗರಸಭಾ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಸುಮಂತ್ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ನಗರದ ವಿಜಯಪುರ ದೊಡ್ಡ ಗಣಪತಿ, ಹಿಂದೂ ಮಹಾಗಣಪತಿ, ಆಜಾದ್‌ಪಾರ್ಕ್ ಹಾಗೂ ಗೌರಿಕಾಲುವೆ ಬಡಾವಣೆಯ ಗಣಪತಿ ಮೂರ್ತಿಗಳನ್ನು ಸಮಿತಿಯ ಮುಖಂಡರುಗಳು ಹಳ್ಳಿವಾದ್ಯ ಹಾಗೂ ಹಿಂದೂ ಸಂಪ್ರದಾಯ ಪಂಚೆ, ಶಾಲುಗಳನ್ನು ಧರಿಸಿ ಮಂಟಪದ ಸಮೀಪ ಕರೆತಂದು ಪೂಜೆ ಸಲ್ಲಿಸಿ ಪ್ರತಿ?ಪಿಸಿದರು.

ಹನುಮಂತಪ್ಪ ವೃತ್ತ, ಕುಂಬಾರ ಬೀದಿಯಲ್ಲಿ ಸ್ಥಳೀಯ ಗಣಪತಿ ಸಮಿತಿಗಳು ಗಣಪನ ವಿಗ್ರಹವನ್ನು ಟ್ರ್ಯಾಕ್ಟರ್‌ಗಳ ಮೂಲಕ ಕರೆದೊಯ್ದತ್ತಿರುವ ವೇಳೆ ಮಕ್ಕಳು, ಯುವಕರು ಜೈಘೋ? ಕೂಗುತ್ತಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿತ್ತು. ಮಧ್ಯಾಹ್ನದಿಂದ ಸಂಜೆವರೆಗೆ ಪ್ರಮುಖ ಬೀದಿಗಳಲ್ಲಿ ಗಣೇಶೋ ತ್ಸವ ಸಂಭ್ರಮ ಎಲ್ಲೆಡೆ ಎದ್ದು ಕಾಣುತ್ತಿತ್ತು.

ಈ ಬಾರಿಯ ಗಣೇಶೋತ್ಸವ ಸಂಭ್ರಮದಲ್ಲಿ ನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಗಣಪತಿ ವಿಭಿನ್ನ ಶೈಲಿಯ ಮೂರ್ತಿಗಳನ್ನು ಪ್ರತಿ?ಪಿಸಿದ್ದರು. ಗಣೇಶನನ್ನು ಹೊತ್ತಿರುವ ಹನುಮಂತ, ಈ ಶ್ವರ ಗಣ ಪತಿ, ಭಗವಾನ್ ವಿ? ಹಾಗೂ ಶ್ರೀರಾಮನನ್ನು ಹೋಲುವ ಗಣಪತಿ, ಶಿವಲಿಂಗ ಅಪ್ಪಿರುವ ಗಣಪತಿ ಸೇರಿದಂತೆ ವಿವಿಧ ಬಗೆಯ ಮೂರ್ತಿಗಳನ್ನು ನಗರ ವ್ಯಾಪ್ತಿಯಲ್ಲಿ ಕಂಡುಬಂದವು.

ಬಳಿಕ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹಬ್ಬದ ವಾತಾವರಣ ಸೃಷ್ಟಿಸುವ ಸಲುವಾಗಿ ಭಕ್ತಾಧಿಗಳಿಗೆ ಅನುಕೂಲವಾಗಲು ಕೋಟೆಕೆರೆ ದ್ವಾರದ ಎರಡು ಬದಿಗಳಲ್ಲಿ ದೀಪಾಲಂಕಾರ ವ್ಯವಸ್ಥೆಯಿದೆ ಹಾಗೂ ವಿಸರ್ಜನಾ ಸಮಯದಲ್ಲಿ ಭಕ್ತಾಧಿಗಳ ರಕ್ಷಣೆ ದೃಷ್ಟಿಯಿಂದ ಪರಿಣಿತ ಸಿಬ್ಬಂದಿಗಳನ್ನು ನೇಮಿಸಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕೆರೆ ನೀರು ಕಲುಷಿತಗೊಳ್ಳದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಗ್ರಹವನ್ನು ವಿಸರ್ಜಿಸುವ ಭಕ್ತಾಧಿಗಳಿಗೆ ಮೂಲಸೌಲಭ್ಯ ಒದಗಿಸಿ ಸಮರ್ಪಕ ವ್ಯವಸ್ಥೆ ಮಾಡಿದೆ. ಐದಾರು ಹಾಗೂ ಹದಿನೈದು ದಿನಕ್ಕೂ ಹೆಚ್ಚು ಇರಿಸುವ ದೊಡ್ಡಗಾತ್ರದ ಗಣಪತಿಗಳ ವಿಸರ್ಜನೆಗೆ ಅನುಕೂಲವಾಗಲು ಕಲ್ಯಾಣಿ ಮಧ್ಯದಲ್ಲಿ ಆಳವಾದ ಕಂದಕ ನಿರ್ಮಿಸಲಾಗಿದೆ ಎಂದು ಹೇಳಿದರು.

600 idols were dissolved on the first day of Ganapati Pratishtap

About Author

Leave a Reply

Your email address will not be published. Required fields are marked *

You may have missed