September 19, 2024

ಚಿಕ್ಕಮಗಳೂರು ನಗರದ ವಿವಿಧ ಭಾಗದಲ್ಲಿ ಆಕರ್ಷಕ ಭಂಗಿಯ ಗಣಪನ ಮೂರ್ತಿಗಳು

0
ಚಿಕ್ಕಮಗಳೂರು ನಗರದ ಸಾರ್ವಜನಿಕ ಗಣೇಶಗಳು

ಚಿಕ್ಕಮಗಳೂರು ನಗರದ ಸಾರ್ವಜನಿಕ ಗಣೇಶಗಳು

ಚಿಕ್ಕಮಗಳೂರು:  ನಗರದ ವಿವಿಧ ಗಲ್ಲಿಗಳು, ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೊಂಡಿರುವ ಆಕರ್ಷಕ ಭಂಗಿಯ ಗಣಪನ ಮೂರ್ತಿಗಳು ಭಕ್ತಿ, ಭಾವದ ತಳಹದಿಯಲ್ಲಿ ಸಮಾಜವನ್ನು ಒಗ್ಗೂಡಿಸುತ್ತಿವೆ.

ದಶಕಗಳಿಂದ ನಗರದ ಜನರನ್ನು ಕೇಂದ್ರೀಕರಿಸುವ ಬೋಳರಾಮೇಶ್ವರ ದೇವಸ್ಥಾನದ ಆವರಣದ(ಆಜಾದ್ ಪಾರ್ಕ್ ಸಾರ್ವಜನಿಕ ಗಣೇಶ) ಗಣಪನಿಂದ ಮೊದಲುಗೊಂಡು ವಿಜಯಪುರ ಸಾರ್ವಜನಿಕ ಗಣೇಶ, ಬಸವನಹಳ್ಳಿ ಮುಖ್ಯ ರಸ್ತೆಯ ಹಿಂದೂ ಮಹಾ ಗಣಪ ಹಾಗೂ ಪ್ರತೀ ವರ್ಷ ಹಿಂದೂ ಸಮಾಜವನ್ನು ಒಂದೆಡೆ ಕಲೆಯುವಂತೆ ಮಾಡುತ್ತಿರುವ ಹಲವು ಗಣಪನ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.

೮೮ ನೇ ವರ್ಷದ ಆಜಾದ್ ಪಾರ್ಕ್ ಗಣಪತಿ ಉತ್ಸವವವು ಬೋಳರಾಮೇಶ್ವ ದೇವಸ್ಥಾನ ಅವರಣದಲ್ಲಿ ೨೧ ದಿನಗಳ ಕಾಲ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಬಾರಿ ವಿಷೇಶವಾಗಿ ಸತ್ಯನಾರಾಯಣ ಪೂಜೆ, ಗಣ ಹೋಮ, ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ.

ದೋಣಿಖಣದ ವಿವೇಕಾನಂದ ಯುವಕ ಸಂಘ ಪ್ರತಿಷ್ಠಾಪಿಸಿರುವ ವಿನಾಯಕ, ದೀಪಾ ನರ್ಸಿಂಗ್ ಹೋಂ ಎದುರು ರಸ್ತೆಯ ವಿದ್ಯಾ ಮಹಾ ಗಣಪ, ಮುತ್ತಿನಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ, ಸುಬ್ಬ ನಾಯಕ ಬೀದಿಯ ಮುತ್ತಿನಮ್ಮ ದೇವಸ್ಥಾನದ ಗಣೇಶ, ಸವೆಂತ್ ಡೇ ರಸ್ತೆಯ ಕ್ರೇಜಿ ಬಾಯ್ಸ್ ಗಣಪತಿ ಮೂರ್ತಿಗಳು ಭಕ್ತಿ, ಭಾವ ಮೇಳೈಸುವಂತೆ ಮಾಡಿವೆ.

ನಗರದ ನಾಲ್ಕೂ ದಿಕ್ಕಿನಲ್ಲಿ ವಿನಾಯಕನ ಜಪ, ತಪ, ಪ್ರಾರ್ಥನೆ, ಭಕ್ತಿಗೀತೆಗಳು ಮೊಳಗುತ್ತಿವೆ. ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರುತ್ತಿವೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ನಗರದ ವಿವಿಧ ಗಣೇಶೋತ್ಸವದ ಸ್ಥಳಕ್ಕೆ ಭೇಟಿ ನೀಡಿ ಗಣಪನ ದರ್ಶನ ಪಡೆದಿದ್ದಾರೆ.

ಬಸವನಹಳ್ಳಿ ಮುಖ್ಯ ರಸ್ತೆ ಓಂಕಾರ ಗಣಪತಿ ದೇವಸ್ಥಾನ ಆವರಣದ ಹಿಂದೂ ಮಹಾ ಗಣಪನಿಗೆ ಪೂಜೆ ಸಲ್ಲಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರು ಎಲ್ಲಾ ವಿಘ್ನಗಳನ್ನು ನಿವಾರಣೆಗೊಳಿಸಿ, ಸುಖ, ಸಂವೃದ್ಧಿ ನೆಲೆಸುವಂತಾಗಲಿ ಎಂದು ಪ್ರಾರ್ಥಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಗೌರಿ ಗಣೇಶನನ್ನು ಪೂಜಿಸುವುದು ಗಂಗೆ ಮತ್ತು ಮಣ್ಣಿನ ಜೊತೆಗಿನ ನಮ್ಮ ಜಾಜಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಸಕಲ ವಿಘ್ನಗಳ ನಿವಾರಕ ಗಣೇಶನನ್ನು ಆದಿ ದೈವ ಎಂದು ಕರೆಯಲಾಗುತ್ತದೆ. ಹಿಂದೆ ರಾಕ್ಷಸರು, ದೇವತೆಗಳ ನಡುವಿನ ಯುದ್ಧದ ಸಂದರ್ಭದಲ್ಲೂ ಜಯವನ್ನು ಕೋರಿ ದೇವತೆಗಳು ಗಣಪನಿಗೆ ಪ್ರಥಮ ಪೂಜೆ ಸಲ್ಲಿಸಿದ್ದರು. ಜಗತ್ತಿನ ಉದ್ದಗಲಕ್ಕೆ ಹಿಂದೂ ಬಾಂಧವರು ಗಣೇಶನನ್ನು ಪ್ರತಿಷ್ಠಾಪಿಸಿ ಉತ್ಸವ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.

ಗಣೇಶೋತ್ಸವ ಸಮಾಜವನ್ನು ಜೋಡಿಸುವಲ್ಲಿ, ಹಿಂದೂಗಳಲ್ಲಿ ಜಾಗೃತಿ, ಆತ್ಮ ವಿಶ್ವಾಸವನ್ನ, ಒಗ್ಗಟ್ಟನ್ನು ಮೂಡಿಸುತ್ತಿದೆ. ಆಜಾದ್ ಪಾರ್ಕ್ ವಿದ್ಯಾಗಣಪತಿ ೮೮ ವರ್ಷಗಳಿಂದ ನಿರಂತರವಾಗಿ ಪೂಜಿಸಿಕೊಂಡು ಬಂದಿದೆ. ಎಲ್ಲರಿಗೂ ಶುಭವಾಗಲಿ ಎಂದರು.

Ganapa idols in attractive poses in various parts of Chikkamagaluru city

 

About Author

Leave a Reply

Your email address will not be published. Required fields are marked *

You may have missed