September 19, 2024

ಒತ್ತುವರಿ ಭೂಮಿ ತೆರವು ವಿರೋಧಿಸಿ ಕಳಸ ತಾಲೂಕು ಬಂದ್‌ ಯಶಸ್ವಿ

0
ಒತ್ತುವರಿ ಭೂಮಿ ತೆರವು ವಿರೋಧಿಸಿ ಕಳಸ ತಾಲೂಕು ಬಂದ್‌ ಯಶಸ್ವಿ

ಒತ್ತುವರಿ ಭೂಮಿ ತೆರವು ವಿರೋಧಿಸಿ ಕಳಸ ತಾಲೂಕು ಬಂದ್‌ ಯಶಸ್ವಿ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಒತ್ತುವರಿ ಭೂಮಿಯನ್ನು ತೆರವು ಮಾಡುತ್ತಿರುವ ಕ್ರಮವನ್ನು ಖಂಡಿಸಿ ಕರೆ ನೀಡಿದ್ದ ಕಳಸ ತಾಲೂಕು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪ್ರಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರ ಜೊತೆಗೆ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಪಟ್ಟಣದಲ್ಲಿನ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಕಳಸ ಪಟ್ಟಣ ಸ್ತಬ್ಧವಾಗಿತ್ತು.

ರಾಜ್ಯ ಸರ್ಕಾರದ ಒತ್ತುವರಿ ತೆರವು ಪ್ರಕ್ರಿಯೆ ಖಂಡಿಸಿ ಕಳಸ ತಾಲೂಕು ಬಂದ್ ಮಾಡಲಾಗಿದೆ. ಇಂದು ಬೆಳಗ್ಗೆ ೯ ರಿಂದ ಸಂಜೆ ೬ ರವರೆಗೆ ಕಳಸ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದ್ದು, ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವರ್ತಕರು ಬಂದ್‌ಗೆ ಬೆಂಬಲ ನೀಡಿದ್ದಾರೆ.

ರೈತರ ಹೋರಾಟಕ್ಕೆ ಸರ್ವ ಪಕ್ಷಗಳು ಸಾಥ್ ನೀಡಿದ್ದು, ಕನ್ನಡಪರ ದಲಿತ ಸಂಘಟನೆಗಳು ಸೇರಿ ಬಹುತೇಕ ಸಂಘಟನೆಗಳ ಬೆಂಬಲ ದೊರೆತಿದೆ.

ಕಳಸ ತಾಲೂಕು ಒತ್ತುವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಾಫಿ ಬೆಳಗಾರರೂ ಕೂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಒತ್ತುವರಿ ತೆರವು ನಿಲ್ಲಿಸಬೇಕೆಂದು ಒಕ್ಕೋರಲ ಆಗ್ರಹ ಕೇಳಿಬಂದಿದೆ. ಬೆಳಿಗ್ಗೆ ೧೦ ಗಂಟೆಯಿಂದ ಕಳಸ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಪ್ರಮುಖ ಬೀದಿಯಲ್ಲಿ ಸಾಗಿತ್ತು. ಬಂದ್ ಹಿನ್ನೆಲೆ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಸಹಾ ಕಲ್ಪಿಸಲಾಗಿತ್ತು.

ಸಾವಿರಾರು ಜನರಿಂದ ಕಳಸ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಯುವ ವೇಳೆಯಲ್ಲಿ ಪ್ರತಿಭಟನೆ ಸಾಗುತ್ತಿದ್ದಾಗ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಾಹನ ಇದೇ ಮಾರ್ಗದಲ್ಲಿ ಸಾಗುತ್ತಿತು. ನಮ್ಮ ನೋವು ನ್ಯಾಯಮೂರ್ತಿಗಳಿಗೂ ಗೊತ್ತಾಗಲಿ ಎಂದು ಪ್ರತಿಭಟನಾಕಾರರು ಘೋ?ಣೆ ಕೂಗಿದ ಘಟನೆ ಸಹಾ ನಡೆದಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಭೇಟಿ ನೀಡಿಲು ಹೈಕೋರ್ಟ್ ಜಸ್ಟೀಸ್ ತೆರಳುತ್ತಿದ್ದರು.

Kalasa taluk bandh successful against eviction of encroached land

About Author

Leave a Reply

Your email address will not be published. Required fields are marked *

You may have missed