September 19, 2024

ಸೆಪ್ಟೆಂಬರ್ ೨೦ಕ್ಕೆ ಕನ್ನಡ ಜ್ಯೋತಿ ರಥ ಯಾತ್ರೆ ಜಿಲ್ಲೆಗೆ ಪ್ರವೇಶ

0
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆ ಬಗ್ಗೆ ನಡೆದ ಪೂರ್ವ ಸಿದ್ದತಾ ಸಭೆ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆ ಬಗ್ಗೆ ನಡೆದ ಪೂರ್ವ ಸಿದ್ದತಾ ಸಭೆ

ಚಿಕ್ಕಮಗಳೂರು:  ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ ೫೦ ಕಾರ್ಯಕ್ರಮದ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆ ಇದೇ ಸೆಪ್ಟೆಂಬರ್ ೨೦ ರಂದು ನಮ್ಮ ಜಿಲ್ಲೆಗೆ ಪ್ರವೇಶ ಮಾಡಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ಸಂಭ್ರಮ ೫೦ ರ ಅಂಗವಾಗಿ ಕನ್ನಡ ಜ್ಯೋತಿ ರಥ ಯಾತ್ರೆ ಬಗ್ಗೆ ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೆಪ್ಟೆಂಬರ್ ೨೦ ರಂದು ಬೇಲೂರು ಮಾರ್ಗವಾಗಿ ಆಗಮಿಸುವ ರಥವನ್ನು ಗಡಿಭಾಗದಲ್ಲಿ ಸ್ವಾಗತಿಸಿ ಹಿರೇಮಗಳೂರಿನಲ್ಲಿ ಬರ ಮಾಡಿಕೊಳ್ಳಲಾಗುವುದು ಎಂದ ಅವರು ೨೧ ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೆಳಿಗ್ಗೆ ೯.೦೦ ಗಂಟೆಗೆ ವಿವಿಧ ಕಲಾ ತಂಡಗಳು, ಕಲಾವಿದರು, ಶಾಸಕರು, ವಿವಿಧ ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು/ಸಿಬ್ಬಂದಿಗಳು, ಸಾಂಸ್ಕೃತಿ ಸಂಘಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಸೇರಿ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ

ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿವರೆಗೆ, ನಂತರ ಕಡೂರು ತಾಲ್ಲೂಕಿಗೆ ಕಳಿಸಿಕೊಡಲಾಗುವುದು ಎಂದ ಜಿಲ್ಲಾಧಿಕಾರಿಗಳು ರಥ ಯಾತ್ರೆಯು ಹಾದು ಹೋಗುವ ವಿವಿಧ ಗ್ರಾಮಗಳಲ್ಲಿ ಸ್ವಾಗತಿಸಿ ಭೀಳ್ಕೊಡುವುದು ೨೨ ಕಡೂರು, ೨೩ ತರೀಕೆರೆ, ೨೪ ನ.ರಾ. ಪುರ, ೨೫ ಕೊಪ್ಪ, ೨೬ ಮೂಡಿಗೆರೆ ಒಟ್ಟು ೫ ವಿಧಾನ ಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದು, ೨೭ ರಂದು ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನಿರ್ಗಮಿಸುವ ಈ ರಥ ಯಾತ್ರೆಯು ಸಂಚರಿಸುವ ತಾಲ್ಲೂಕುಗಳಲ್ಲಿ ಹಾಗೂ ಹಾದು ಹೋಗುವ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಆಯಾಯ ಗ್ರಾಮದಲ್ಲಿ ವಿಶೇಷವಾಗಿ ಬರ ಮಾಡಿಕೊಂಡು ಭೀಳ್ಕೊಡುವುದು

ಆಯಾಯ ತಾಲ್ಲೂಕು ತಹಸೀಲ್ದಾರ್, ತಾಲ್ಲೂಕು ಪಂಚಾಯಿತಿ ಇ.ಒ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಆಯಾಯ ಭಾಗದ ಶಾಸಕರು ಜನ ಪ್ರತಿನಿಧಿಗಳು ಸಂಘ ಸಂಸ್ಥೆ, ಕನ್ನಡ ಪರ ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್, ಸಾರ್ವಜನಿಕರು ಸೇರಿ ಬಹಳ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಸುವಂತೆ ಸಂಬಂದಪಟ್ಟ ಆಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕನ್ನಡ ಜ್ಯೋತಿ ರಥ ಯಾತ್ರೆಯು ರಾಜ್ಯಾದ್ಯಂತಹ ಸಂಚರಿಸಿ ನವೆಂಬರ್ ೦೧ ರಂದು ಬೆಂಗಳೂರು ತಲುಪಲಿದೆ. ಹೆಸರು ಆಗಲಿ ಕರ್ನಾಟಕ, ಉಸಿರು ಆಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿಯೊಬ್ಬರು ಪಾಲ್ಗೊಂಡು ವಿಜೃಂಭಣಿಯಿಂದ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಜವಾಬ್ದಾರಿಯನ್ನು ನೀಡಿ ಯಶಸ್ವಿಯಾಗಿ ನೇರವೇರಿಸಲು ಸಮಿತಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಹೆಚ್.ಎಸ್. ಕೀರ್ತನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿಗಳಾದ ದಲ್ಜಿತ್ ಕುಮಾರ್, ಕಾಂತರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅಜ್ಜಂಪುರ ಸೂರಿ ಶ್ರೀನಿವಾಸ್, ಕೆ.ಟಿ. ರಾಧಕೃಷ್ಣ, ಐ.ಎಂ. ಓಂಕಾರಗೌಡ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಸ್ವಾಗತಿಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

Kannada Jyoti Rath Yatra District entry on 20th September

About Author

Leave a Reply

Your email address will not be published. Required fields are marked *

You may have missed