September 19, 2024

ಸೇತುವೆಯಾಗಿ ಆಡಿಟರ್‍ಸ್ ಅಸೋಸಿಯೇಷನ್-ಆದಾಯ ತೆರಿಗೆ ಇಲಾಖೆ ಕೆಲಸ ಮಾಡುತ್ತಿದೆ

0
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮ

ಚಿಕ್ಕಮಗಳೂರು:  ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರದ ಮಧ್ಯೆ ಸೇತುವೆಯಾಗಿ ಆಡಿಟರ್‍ಸ್ ಅಸೋಸಿಯೇಷನ್ ಮತ್ತು ಆದಾಯ ತೆರಿಗೆ ಇಲಾಖೆ ಕೆಲಸ ಮಾಡುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಆಡಿಟರ್‍ಸ್ ಅಸೋಸಿಯೇಷನ್‌ನ ಅಧ್ಯಕ್ಷ ಕೆ.ಡಿ.ಪುಟ್ಟಣ್ಣ ತಿಳಿಸಿದರು.

ಅವರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಆಡಿಟರ್‍ಸ್ ಅಸೋಸಿಯೇಷನ್ ಮತ್ತು ಆದಾಯ ತೆರಿಗೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಡಿಟರ್‍ಸ್ ಅಸೋಸಿಯೇಷನ್ ಮತ್ತು ಆದಾಯ ತೆರಿಗೆ ಇಲಾಖೆ ಸಂಯೋಗದೊಂದಿಗೆ ಕಾರ್ಯಕ್ರಮ ಮಾಡಿ ಆದಾಯ ತೆರಿಗೆದಾರರಿಗೆ ಸಹಕಾರ ನೀಡಲಾಗುತ್ತದೆ.

ಆದಾಯ ತೆರಿಗೆ ಪಾವತಿ ಪ್ರಕ್ರಿಯೆಗಳು ಈಗ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತವೆ. ಅದರಲ್ಲಿ ಯಾರು ಹೆಚ್ಚು ಪರಿಣಿತರಿರುವುದಿಲ್ಲವೋ ಅಂತಹವರಿಗೆ ಸೂಕ್ತ ಮಾಹಿತಿ, ಸಹಕಾರವನ್ನು ನೀಡಲಾಗುತ್ತದೆ ಎಂದರು.

ಇದೇ ವೇಳೆ ಆದಾಯ ತೆರಿಗೆ ಇಲಾಖೆ ಜೊತೆಗೆ ಎಲ್ಲರೂ ಹೊಂದಿಕೊಂಡು ಹೋಗಬೇಕಾಗುತ್ತದೆ. ಆಡಿಟರ್ ಅಸೋಸಿಯೇಷನ್ ಮೂಲಕ ಸರ್ಕಾರಕ್ಕೆ ಕೋಟ್ಯಾಂತರ ರೂ. ಆದಾಯ ತೆರಿಗೆ ಮತ್ತು ಜಿಎಸ್‌ಟಿಯನ್ನು ಕ್ರಮಬದ್ಧವಾಗಿ ಕಟ್ಟಿಸುತ್ತಿದ್ದೇವೆ ಎಂದರು.

ಲೆಕ್ಕಪರಿಶೋಧಕರಾದ ಶ್ಯಾಮಲಾ ರಾವ್ ಮಾತನಾಡಿ, ಆಡಿಟರ್ ಅಸೋಸಿಯೇಷನ್‌ಗೆ ಆದಾಯ ತೆರಿಗೆ ಇಲಾಖೆ ಸಿಬ್ಬಂದಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಅಗತ್ಯವಿರುವ ಎಲ್ಲಾ ನಿರ್ದೇಶನಗಳು ಸಿಗುತ್ತಿವೆ. ಸಾಧ್ಯವಾದರೆ ಆಡಿಟರ್ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಆದಾಯ ತೆರಿಗೆ ಇಲಾಖೆ ಕಟ್ಟಡದಲ್ಲೇ ಒಂದು ಕೊಠಡಿಯನ್ನು ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.

ಚಾರ್ಟರ್ಡ್ ಅಕೌಂಟೆಂಟ್ ಶ್ರೇಯಸ್ ಮಾತನಾಡಿ, ಕೇಂದ್ರದ ೪೮ ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಸುಮಾರು ೩೮ ಲಕ್ಷ ಕೋಟಿ ರೂ. ಆದಾಯವು ವಿವಿಧ ತೆರಿಗೆಯಿಂದಲೇ ಬರುತ್ತದೆ. ಈ ಪೈಕಿ ಆದಾಯ ತೆರಿಗೆಯು ಶೇ.೧೯ ರಷ್ಟು ಕೊಡುಗೆ ನೀಡುತ್ತದೆ. ಕಾರ್ಪೊರೇಟ್ ತೆರಿಗೆ ಶೇ.೧೭ ರಷ್ಟು, ಜಿಎಸ್‌ಟಿ ಶೇ.೧೮ ಹಾಗೂ ಕಸ್ಟಮ್ಸ್ ಎಕ್ಸೈಜ್ ಡ್ಯೂಟಿ ಶೇ. ೫ರಷ್ಟು ಇರುತ್ತದೆ ಎಂದು ವಿವವರಿಸಿದರಲ್ಲದೇ ಆದಾಯ ತೆರಿಗೆಯಲ್ಲಿ ಜಾರಿಗೆ ಬಂದಿರುವ ತಿದ್ದುಪಡಿ ಅಂಶಗಳ ಬಗ್ಗೆ ಸವಿವರವಾಗಿ ವಿವರಿಸಿದರು.

ಆದಾಯ ತೆರಿಗೆ ಅಧಿಕಾರಿ ದೀಪಕ್ ಚಂದ್ರ ಮತನಾಡಿ, ಆದಾಯ ತೆರಿಗೆ ಪಾವತಿ ಸೇರಿದಂತೆ ಹೊಸ ಬಜೆಟ್ ಮತ್ತು ತಿದ್ದುಪಡಿಗಳ ವಿಚಾರದಲ್ಲಿ ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ ಅದಕ್ಕೆ ಆಡಿಟರ್‍ಸ್ ಅಸೋಸಿಯೇಷನ್ ಮತ್ತು ಆದಾಯ ತೆರಿಗೆ ಇಲಾಖೆಯು ಸಂಯುಕ್ತವಾಗಿ ಬಗೆಹರಿಸುವ ಕೆಲಸವನ್ನು ಮಾಡುತ್ತಿದೆ. ಅಲ್ಲದೆ ಅವರ ಸಲಹೆಗಳನ್ನು ಸ್ವೀಕರಿಸಿ ಮೇಲಾಧಿಕಾರಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಆದಾಯ ತೆರಿಗೆ ಅಧಿಕಾರಿ ಪ್ರವೀಣ್.ಕೆ.ಯು, ಚಾರ್ಟರ್ಡ್ ಅಕೌಂಟೆಂಟ್‌ಗಳಾದ ಕಿರಣ್ ಸೋಮಯ್ಯ ನಾಗೇಶ್, ದೀಪಕ್‌ ಸಿ, ಆದರ್ಶ್, ಸಂಘದ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಕೃಷ್ಣ ರಾಜ್ ಮತ್ತಿತರರು ಇದ್ದರು.

Awareness program held at District Co-operative Center Bank Hall

About Author

Leave a Reply

Your email address will not be published. Required fields are marked *

You may have missed