September 19, 2024

ಬೆಳವಾಡಿ ಕೆರೆ ಏರಿ ಕಾಮಗಾರಿ ಕಳಪೆ-ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

0
ಬೆಳವಾಡಿ ಕೆರೆ ಏರಿ ಕಾಮಗಾರಿ ಕಳಪೆ

ಬೆಳವಾಡಿ ಕೆರೆ ಏರಿ ಕಾಮಗಾರಿ ಕಳಪೆ

ಚಿಕ್ಕಮಗಳೂರು:  ತಾಲ್ಲೂಕು ಲಕ್ಯಾ ಹೋಬಳಿ ಐತಿಹಾಸಿಕ ಬೆಳವಾಡಿ ಕೆರೆ ಏರಿಯನ್ನು ಸುಮಾರು ೨೪ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಿದ್ದು, ಕಳಪೆಯಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಸುಮಾರು ೨೪ ಕೋಟಿ ರೂ ಅನುದಾನದಲ್ಲಿ ೧೩.೫ ಕಿ.ಮೀ ಕಾಮಗಾರಿಯನ್ನು ಮಾಡಬೇಕಿದ್ದು, ಅದರಲ್ಲಿ ಬೆಳವಾಡಿ ಕೆರೆಯ ಏರಿ ಅಗಲೀಕರಣ ಮತ್ತು ಕೆರೆಯ ಪಕ್ಕದಲ್ಲಿ ಕಾಂಕ್ರೀಟ್ ಲೈನ್ ಹಾಕಲು ಟೆಂಡರ್‌ನಲ್ಲಿ ತಿಳಿಸಲಾಗಿದ್ದು, ಆದರೆ ಈ ಎಲ್ಲಾ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂದು ಆರೋಪಿಸಿದರು.

ಈಗಾಗಲೇ ಬೆಳವಾಡಿ ಕೆರೆ ಹಿಂದೆ ಮಾಡಿದ ಕಾಂಕ್ರೀಟ್ ಲೈನ್ ನಾಲ್ಕು ಭಾಗವಾಗಿ ಚಿತ್ರವಾಗಿದೆ ಮತ್ತು ಕೆರೆ ಏರಿಯ ಉದ್ದವೂ ಪೂರ್ತಿಯಾಗಿ ಎರಡು ಕಿ.ಮೀ ವರೆಗೆ ಬಿರುಕು ಬಿಟ್ಟಿದ್ದು, ಈ ಕಾಮಗಾರಿಯು ಸಂಪೂರ್ಣ ಕಳಪೆಯಾಗಿರುವುದರಿಂದ ಸಂಬಂದಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಕಾಮಗಾರಿ ನಡೆಸಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಬೆಳವಾಡಿಯ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಳವಾಡಿ ಅಮೀರ್‌ಜಾನ್, ಗ್ರಾ.ಪಂ ಸದಸ್ಯರಾದ ಸಿರಾಜ್ ಉನ್ನೀಸಾ, ಭಾಗ್ಯ ಚಂದ್ರಶೇಖರ್, ಕಲ್ಪನಾ ಹರೀಶ್, ಮಾಚೇನಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಖಲಂಧರ್, ನಸೀಮಾ ಖಲಂಧರ್, ಬೆಳವಾಡಿ ಗ್ರಾಮಸ್ಥರಾದ ನಾಗರಾಜ್, ಬಸವರಾಜ್, ಚಂದ್ರಶೇಖರ್, ಜಂಶಿದ್ ಮತ್ತಿತರರು ಉಪಸ್ಥಿತರಿದ್ದರು.

Belawadi lake raising work poor- Villagers demand action against contractor

About Author

Leave a Reply

Your email address will not be published. Required fields are marked *

You may have missed