September 20, 2024

ವಿಶ್ವಕರ್ಮ ಎಂದರೆ ಎಲ್ಲವನ್ನು ಸಾಧಿಸುವವನು, ಎಲ್ಲದರ ಕರ್ತೃ

0
ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ

ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ

ಚಿಕ್ಕಮಗಳೂರು: ವಿಶ್ವಕರ್ಮ ಎಂದರೆ ಎಲ್ಲವನ್ನು ಸಾಧಿಸುವವನು, ಎಲ್ಲದರ ಕರ್ತೃ, ಎಲ್ಲವನ್ನು ಮಾಡುವವನು, ಕಲ್ಲನ್ನು ಶಿಲೆಯಾಗಿಸಿ ದೇವರ ಸ್ಥಾನ ನೀಡುವ ಶಕ್ತಿ ವಿಶ್ವಕರ್ಮರಿಗಿದೆ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಋಗ್ವೇದದ ಪ್ರಕಾರ ಸೃಷ್ಟಿ ದೇವತೆಯ ಅಮೂರ್ತ ರೂಪ ವಿಶ್ವಕರ್ಮರು ಎಂದು ಹೇಳಲಾಗುತ್ತದೆ. ವಿಶ್ವಕರ್ಮ, ಅಭಿಯಂತರರು, ಕರಕುಶಲ ಕರ್ಮಿಗಳ ಬದುಕು ನಿರ್ಮಿಸಿಕೊಟ್ಟ ಇವರನ್ನು ಪ್ರಧಾನ ದೇವರೆಂದು ಆರಾಧಿಸಲಾಗುತ್ತದೆ ಎಂದು ಹೇಳಿದರು.

ಕಲ್ಲು, ಮರದ ತುಂಡುಗಳನ್ನು ಶಿಲೆಯಾಗಿಸಿ ದೇವರಾಗಿಸುವ ವಿಶ್ವಕರ್ಮರು ಹಿಂದೂ ಪುರಾಣಗಳಲ್ಲಿ ದೇವರುಗಳ ವಾಸ್ತುಶಿಲ್ಪಿಯಾಗಿದ್ದರು. ದೇವತೆಗಳ ಆಯುಧಗಳನ್ನು ಮತ್ತು ಅವರ ನಗರಗಳು, ರಥಗಳನ್ನು ನಿರ್ಮಿಸಿದ ದೈವಿಕ ಬಡಗಿ ಮತ್ತು ಕುಶಲಕರ್ಮಿಯಾಗಿದ್ದರು. ಇವರು ವ್ಯಕ್ತಿಯ ಜೀವನ ತಕ್ಕಂತೆ ವೃತ್ತಿಯನ್ನು ರೂಪಿಸಿ ಕಟ್ಟಿದ್ದಾರೆ. ಪ್ರತಿ ವೃತ್ತಿಗೂ ತನ್ನದೆ ಆದ ಗೌರವವಿದೆ ಎಂದ ಅವರು ತಾವು ಮಾಡುವ ಕೆಲಸವನ್ನು ಪ್ರೀತಿಸಿ ಸುಂದರ ಸಮಾಜದ ನಿರ್ಮಾತೃಗಳಾಗಿ ಎಂದರು

ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭೂಮಿಯ ಮೊದಲ ವಾಸ್ತುಶಿಲ್ಪಿ ಮಹಾನ್ ದಾರ್ಶನಿಕ ವಿಶ್ವಕರ್ಮರು. ಜಗತ್ತಿನ ನಿರ್ಮಾಣದಲ್ಲಿ ವಿಶ್ವಕರ್ಮರ ಪಾತ್ರ ಮಹತ್ವದ್ದು ವಿಶ್ವಕರ್ಮ ಜನಾಂಗದವರು ತಮ್ಮದೇ ಆದ ವಿವಿಧ ಕರಕುಶಲ ಕಸುಬುಗಳಿಂದ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ತಮ್ಮಲ್ಲಿರುವ ಕಲೆಯನ್ನು ತಮ್ಮ ಮಕ್ಕಳಿಗೂ ಕಲಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕರಿಸಬೇಕು ಎಂದ ಅವರು ತಮ್ಮ ಮಕ್ಕಳಿಗೆ ಧರ್ಮ, ಕಲೆ, ಸಂಸ್ಕೃತಿಯ ಪಾಠವನ್ನು ಹೇಳಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಜೀವನ ನಿರ್ವಹಿಸಲು ವೃತ್ತಿ ಮುಖ್ಯವಾಗಿದೆ. ನಾವು ಮಾಡುವ ಕೆಲಸವನ್ನು ಶ್ರದ್ಧೆ ಮತ್ತು ಏಕಾಗ್ರತೆಯಿಂದ ನಿರ್ವಹಿಸಬೇಕು ಶ್ರಮವಹಿಸಿ ನಿಷ್ಠೆಯಿಂದ ಮಾಡಿದ ಎಲ್ಲಾ ಕೆಲಸಗಳು ಸಫಲವಾಗುತ್ತವೆ. ಗುಡಿಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳ ಬದುಕನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಗಟ್ಟಿಗೊಳಿಸಲು ಸರ್ಕಾರವು ಹಲವಾರು ಯೋಜನೆಗಳನ್ನು ತಂದಿದೆ. ತಮ್ಮ ವೃತ್ತಿಗೆ ಸಂಬಧಿಸಿದಂತೆ ಹೆಚ್ಚಿನ ಮಟ್ಟದ ತರಬೇತಿ ಪಡೆದು ಸ್ವಾವಲಂಬಿ ಜೀವನ ನಿರ್ವಹಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಬೆಂಗಳೂರು ಹಾಗೂ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮತ್ತು ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಯವರ ಸಂದೇಶವನ್ನು ಓದಲಾಯಿತು.

ನಿವೃತ್ತ ಉಪನ್ಯಾಸಕ ಭಾಸ್ಕರ್ ಆಚಾರ್ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ವಿಶ್ವಕರ್ಮ ಆಚಾರ್ಯ, ವಿಶ್ವ ಭ್ರಾಹ್ಮಣ ಸಮಾಜ ಜಿಲ್ಲಾಧ್ಯಕ್ಷ ಉಮಾಶಂಕರ್, ವಿಶ್ವ ಭ್ರಾಹ್ಮಣ ಸಮಾಜ ಗೌರವಾಧ್ಯಕ್ಷ ಚೇತನ್ ಕುಮಾರ್, ವಿಶ್ವಕರ್ಮ ಕೈಗಾರಿಕ ವಿವಿದ್ದೊದೇಶಗಳ ಸಹಕಾರ ಸಂಘದ ಅಧ್ಯಕ್ಷ ಶಂಕರಯ್ಯ ಆಚಾರ್ ಹಾಗೂ ವಿಶ್ವಕರ್ಮ ಸಂಘದ ಸದಸ್ಯರು ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Vishwakarma Jayanti program organized at Kuvempu Kala Mandir

About Author

Leave a Reply

Your email address will not be published. Required fields are marked *

You may have missed