September 20, 2024

ಕ್ರೀಡೆಯಲ್ಲಿ ನಿಯಮದ ಚೌಕಟ್ಟು ಬದುಕಿನಲ್ಲಿ ಯಶಸ್ಸು

0
ಕ್ಕಮಗಳೂರು ತಾಲ್ಲೂಕಿನ ಎಫ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ

ಕ್ಕಮಗಳೂರು ತಾಲ್ಲೂಕಿನ ಎಫ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ

ಚಿಕ್ಕಮಗಳೂರು: ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ಕ್ರೀಡೆಯಲ್ಲಿ ನಿಯಮದ ಚೌಕಟ್ಟು ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅಭಿಪ್ರಾಯಿಸಿದರು.

ಅವರು ಇಂದು ಇಲ್ಲಿನ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ತಾ.ಪಂ, ಗ್ರಾ.ಪಂ ಬಿಳೇಕಲ್ಲಹಳ್ಳಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು, ಮುರಾರ್ಜಿ ದೇಸಾಯಿ ವಸತಿ ಶಾಲೆ, ಸರಪನಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ತಾಲ್ಲೂಕಿನ ಎಫ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ ಆತ್ಮ ವಿಶ್ವಾಸ ಮೂಡಿಸುತ್ತದೆ. ಈ ಮೂಲಕ ಗೆಲುವಿನ ಹಂಬಲವನ್ನಿಟ್ಟುಕೊಂಡು ಹೋರಾಟ ಮಾಡಬೇಕು, ಇದನ್ನು ಸಮರ್ಪಕವಾಗಿ ಅನುಸರಿಸಿದಾಗ ಯಶಸ್ಸಿನ ಕಡೆಗೆ ಕೊಂಯೊಯ್ಯುತ್ತದೆ ಎಂದು ಹೇಳಿದರು.

ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ ಶುಭ ಹಾರೈಸಿದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸರ್ಕಾರಿ ಅನುದಾನಕ್ಕೆ ಆಸರೆಯಾಗದೆ ಸರಪನಹಳ್ಳಿ ಎಂಡಿಆರ್‌ಎಸ್ ಶಾಲೆ ಶಿಕ್ಷಕರು ಮತ್ತು ಪೋಷಕರು ತಮ್ಮ ನೆರವಿನಿಂದ ಈ ಕ್ರೀಡಾಕೂಟ ನಡೆಸುತ್ತಿದ್ದಾರೆಂದು ಶ್ಲಾಘಿಸಿದರು.

ಕ್ರೀಡೆಯಲ್ಲಿ ಭಾಗವಹಿಸಿ ಉತ್ಸಾಹದಿಂದ ಗೆಲುವು ಸಾಧಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಡಿಎಆರ್‌ಎಸ್ ಶಾಲೆ ಶೇ.೧೦೦ ಫಲಿತಾಂಶ ಬಂದಿದ್ದು, ಇದೇ ರೀತಿ ಮುಂದಿನ ವರ್ಷವೂ ಶಿಕ್ಷಣದಲ್ಲಿ ಸಾಧನೆ ಮಾಡಿ ಎಂದು ಹಾರೈಸಿದರು.

ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದ ಅವರು ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು.

ಎಂಡಿಆರ್‌ಎಸ್ ಪ್ರಾಂಶುಪಾಲ ವೇಣುಗೋಪಾಲ್ ಮಾತನಾಡಿ, ಶಾಲೆಯ ವಿದ್ಯಾರ್ಥಿ ಪೋಷಕರ ಸಹಾಯ ಹಸ್ತದಿಂದ ಕ್ರೀಡಾಕೂಟಕ್ಕೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಬೇರೆ ಯಾರ ಬಳಿಯೂ ದೇಣಿಗೆ ಸಂಗ್ರಹಿಸಿಲ್ಲ ಎಂದು ಸ್ಪಷ್ಟಪಡಿಸಿ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶೈಕ್ಷಣಿಕ ಸಂಯೋಜಕ ಕೃಷ್ಣರಾಜ್ ಅರಸ್ ಮಾತನಾಡಿ, ತಾಲ್ಲೂಕಿನಲ್ಲಿ ೮೬ ಪ್ರೌಢಶಾಲೆಗಳಿದ್ದು, ಈ ಪೈಕಿ ೬ ವಲಯಗಳಾಗಿ ವಿಂಗಡಿಸಲಾಗಿದೆ. ಇದು ಎಫ್ ವಲಯ ಮಟ್ಟದ ಕ್ರೀಡಾಕೂಟವಾಗಿದ್ದು, ೧೪ ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ ಎಂದರು.

ಸೆ.೨೦ ರಂದು ಪ್ರಾಥಮಿಕ ಶಾಲಾ ತಾಲ್ಲೂಕು ಮಟ್ಟದ ಕ್ರೀಡಾಕೂಟ, ಸೆ.೨೧ ರಂದು ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ನಡೆಯುತ್ತಿದ್ದು, ಇಬ್ಬರೂ ಶಾಸಕರುಗಳು ಈ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸರಪನಹಳ್ಳಿ ಎಂಡಿಆರ್‌ಎಸ್ ಶಾಲೆಯ ಶಿಕ್ಷಕರು ಅಚ್ಚುಕಟ್ಟಾಗಿ ಈ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದಾರೆ. ಇಲಾಖೆ ಕೊಡುವುದು ಕೇವಲ ೩ ಸಾವಿರ ರೂ ಆಗಿದ್ದು, ಈ ಹಣದಲ್ಲಿ ಕ್ರೀಡಾಕೂಟ ನಡೆಸುವುದು ಅಸಾಧ್ಯ. ಪೋಷಕರಿಂದ ವಂತಿಕೆ ಪಡೆದು ಕ್ರೀಡಾಕೂಟ ನಡೆಸುತ್ತಿದ್ದಾರೆಂದು ಶ್ಲಾಘಿಸಿದರು.

ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಶಾಲೆ ಮುಗಿದ ನಂತರವೂ ಕ್ರೀಡಾಭ್ಯಾಸ ಮಾಡಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಪರಿವಾಕ್ಷರು ಶೇರ್ ಅಲಿ, ಬಸವರಾಜಪ್ಪ, ಶಿವಕುಮಾರ್, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.ಮೊದಲಿಗೆ ಅಶ್ವಕ್ ಪಾಶ ಸ್ವಾಗತಿಸಿ, ತೇಜಸ್ವಿ ಎನ್.ಎಂ ನಿರೂಪಿಸಿ, ಅಣ್ಣಪ್ಪ ರಾವ್ ಜಿ ವಂದಿಸಿದರು.

Chikmagalur taluk F zone level high school sports meet

About Author

Leave a Reply

Your email address will not be published. Required fields are marked *