September 20, 2024

ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘಕ್ಕೆ ೯.೮೩ ಲಕ್ಷ ನಿವ್ವಳ ಲಾಭ

0
ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಮಹಾಸಭೆ

ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಮಹಾಸಭೆ

ಚಿಕ್ಕಮಗಳೂರು: ಇಲ್ಲಿನ ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ೨೦೨೩-೨೪ ನೇ ಸಾಲಿನಲ್ಲಿ ೯.೮೩ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಶಾಲಿನಿ ಅಶೋಕ್ ರಾಯ್ಕರ್ ತಿಳಿಸಿದರು.

ಅವರು ಇಂದು ಸಂಘದ ೨೦೨೩-೨೪ ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಲಾಭಾಂಶದಲ್ಲಿ ಪ್ರಸ್ತುತ ವರ್ಷ ಶೆ.೧೦ ರಷ್ಟನ್ನು ಸದಸ್ಯರಿಗೆ ಡಿವಿಡೆಂಟ್ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ಪ್ರಸಕ್ತ ಆರ್ಥಿಕ ವರ್ಷದ ಮಾರ್ಚ್ ೩೧ ಕ್ಕೆ ೧೦.೭೩ ಕೋಟಿ ರೂ ಠೇವಣಿ ಇಡಲಾಗಿದ್ದು, ೮,೧೬,೫೦೦೦ ರೂ ಸಾಲ ವಿತರಿಸಲಾಗಿದೆ. ೩.೨೮ ಕೋಟಿ ರೂ ಸಂಘದ ಹೂಡಿಕೆಗಳಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ಷೇರುದಾರರು, ಠೇವಣಿದಾರರು, ಗ್ರಾಹಕರು, ಸಿಬ್ಬಂದಿ ವರ್ಗ ಹಾಗೂ ಲೆಕ್ಕ ಪರಿಶೋಧಕರಿಗೆ ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಮುಂದಿನ ವರ್ಷ ಸಂಘದ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಇದಕ್ಕೆ ಎಲ್ಲಾ ಸದಸ್ಯರ ಸಹಕಾರ, ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಮಾಜಿ ಅಧ್ಯಕ್ಷ ರಾಮ್ ಸುಬ್ಬರಾವ್ ಶೇಠ್ ಮಾತನಾಡಿ, ಸರಿ-ತಪ್ಪುಗಳ ಬಗ್ಗೆ ಮೊದಲು ವಿಮರ್ಷೆ ಮಾಡಿಕೊಂಡು ನಿಯಮಾನುಸಾರ ಕಾರ್ಯಕ್ರಮ ನಡೆಸುವಂತೆ ಸಲಹೆ ನೀಡಿದರು.

ಸಂಘದ ರಜತ ಮಹೋತ್ಸವವನ್ನು ಉತ್ತಮ ರೀತಿಯಲ್ಲಿ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದ ಅವರು ಸದಸ್ಯರು ಕಾರ್ಯಕ್ರಮಗಳಿಗೆ ನಿಗದಿತ ಸಮಯಕ್ಕೆ ಆಗಮಿಸುವ ಮೂಲಕ ಸಮಯ ಪಾಲನೆ ಮಾಡಬೇಕೆಂದು ಕೋರಿದರು.

ಹಣಕಾಸಿನ ವ್ಯವಹಾರದ ಜೊತೆಗೆ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ರಜತ ಮಹೋತ್ಸವದಲ್ಲಿ ನಡೆಸಲು ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ವೆಚ್ಚಗಳನ್ನು ಕಡಿಮೆ ಮಾಡಿ ಡಿವಿಡೆಂಟ್ ಹೆಚ್ಚು ನೀಡಲು ಮುಂದಾಗಬೇಕು. ಇದು ಆದಾಗ ಸಂಘ ಉತ್ತಮ ರೀತಿಯಲ್ಲಿ ನಡೆಯಲು ಸಹಕಾರವಾಗುತ್ತದೆ. ಇದೇ ಸಂದರ್ಭದಲ್ಲಿ ಸಂಘವನ್ನು ಸ್ಥಾಪಿಸಿದ ಸಂಸ್ಥಾಪಕರನ್ನು ಸ್ಮರಿಸಿದರು.

ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಸಂಘದ ಸರ್ವ ಸದಸ್ಯರ ಸಹಕಾರ, ಸಲಹೆ ಹೀಗೇ ಮುಂದುವರೆಯಲಿ, ಸಂಘವು ಲಾಭದಾಯಕವಾಗಿ ಮುನ್ನಡೆಯಲಿ ಎಂದು ಹಾರೈಸಿದ ಅವರು, ಸಂಘದ ಲೆಕ್ಕಪತ್ರಗಳನ್ನು ಗಣಕೀಕರಣಗೊಳಿಸುವುದರ ಜೊತೆಗೆ ಸದಸ್ಯರಿಗೆ ಹೆಚ್ಚಿನ ಸೌಲಭ್ಯ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ಸಲಹೆಗಾರರಾದ ಅಶೋಕ್ ಆರ್ ರಾಯ್ಕರ್ ಮಾತನಾಡಿ, ಸಂಘದ ಸದಸ್ಯರಿಗೆ ವಾಹನ ಸಾಲ, ಓ ಡಿ ಸಾಲ, ಡಿ ಪಿ ಎನ್ ಸಾಲ, ಚಿನ್ನದ ಸಾಲ, ಭದ್ರತಾ ಸಾಲ, ಖಾಯಂ ಠೇವಣಿ ಮೇಲಿನ ಸಾಲ ನೀಡಲಾಗಿದ್ದು, ೧೧.೫೦ ಕೋಟಿ ರೂ ಒಟ್ಟು ಸಾಲ ವಿತರಣೆ ಮಾಡಲಾಗಿದೆ. ೧೦ ಕೋಟಿ ನಿಶ್ಚಿತ ಠೇವಣಿ ಇಡಲಾಗಿದೆ. ಮುಂದೆ ರಜತ ಮಹೋತ್ಸವ ಆಚರಿಸಲು ಎಲ್ಲಾ ಪದಾಧಿಕಾರಿಗಳು ಶ್ರಮಿಸಬೇಕೆಂದು ಕೋರಿದರು.

ಈ ೨೫ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಕೆ ಸುರೇಶ್ ಶೇಟ್, ನಿರ್ದೇಶಕರುಗಳಾದ ಕೆ.ವಿ ಮಹೇಂದ್ರ, ತಾರಾಮತಿ ರಮೇಶ್ ಶೇಟ್, ದೀಪ ಪ್ರಕಾಶ್, ಸಿ.ಎಲ್ ಶ್ರೀಕಾಂತ್, ವಿ.ರಮೇಶ್, ಸಿ.ಆರ್ ಸುಧೀರ್, ಪ್ರಕಾಶ್ ಬಿ.ಜೆ, ಕೀರ್ತಿ ಸಿ.ಎಂ ಶೇಟ್, ಯು.ಎಲ್ ಶ್ರೀಧರ, ಕಡೂರು ಶಾಖೆ ನಿರ್ದೇಶಕ ಕೆ.ವಿ ಆನಂದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *