September 23, 2024

ಅಂಚೆ ಇಲಾಖೆ ನೌಕರರ ಸಹಕಾರ ಸಂಘಕ್ಕೆ 15 ಲಕ್ಷ ರೂ. ನಿವ್ವಳಲಾಭ

0
ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಚಿಕ್ಕಮಗಳೂರು: ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘವು ಶೈಕ್ಷಣಿಕ ಸಾಲಿನಲ್ಲಿ ೧೫.೮೧ ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮೂಲಕ ಪ್ರತಿವರ್ಷವು ಲಾಭಾಂಶದಿಂದ ಪ್ರಗತಿ ಹೊಂ ದುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಭಾಸ್ಕರ್ ಹೇಳಿದರು.

ನಗರದ ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಭಾನುವಾರ ಚಿಕ್ಕಮಗಳೂರು ಅಂಚೆ ಇಲಾಖೆ ನೌಕ ರರ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತ್ತಿದ್ದರು.

ಸದಸ್ಯರುಗಳ ಸಹಕಾರ ಮತ್ತು ನಿರ್ದೇಶಕರುಗಳ ಸಮಯೋಚಿತ ಕಾರ್ಯತತ್ಪರತೆಯಿಂದ ಸಂಘದ ಕಾರ್ಯಚಟುವಟಿಕೆಗಳು ಸಕ್ರಿಯವಾಗಿ ನಡೆದಿರುವ ಪರಿಣಾಮ ಈ ಸಾಲಿನಲ್ಲಿ ಸಂಘವು ೧೫.೮೧ ಲಕ್ಷ ನಿವ್ವಳ ಲಾಭದಲ್ಲಿದೆ. ಈಗಾಗಲೇ ಸದಸ್ಯರುಗಳಿಗೆ ೨.೪೨ ಕೋಟಿ ಸಾಲಸೌಲಭ್ಯ ಒದಗಿಸಿ ೨.೩೨ ಕೋಟಿ ವಸೂಲಾ ತಿಯನ್ನು ಪೂರೈಸಿದೆ ಎಂದು ತಿಳಿಸಿದರು.

ಸಂಘದಲ್ಲಿ ೧೩೨೪ ಷೇರುದಾರ ಪೈಕಿ ೯೩ ಲಕ್ಷ ರೂ. ಷೇರು ಹಣ ಸಂಗ್ರಹವಿದೆ. ಜೊತೆಗೆ ಒಟ್ಟು ೧.೩೬ ಕೋಟಿ ಠೇವಣಿಗಳಿವೆ. ಸಂಘದ ಸರ್ವತೋಮುಖ ಅಭಿವೃದ್ದಿಯೇ ಆಡಳಿತ ಮಂಡಳಿಯ ಗುರಿಯಾಗಿ ರುತ್ತದೆ. ಇದಕ್ಕೆ ಸದಸ್ಯರುಗಳು ಹಾಗೂ ನಿರ್ದೇಶಕರುಗಳ ಸಹಕಾರ ಬಹಳಷ್ಟು ಅಗತ್ಯವಿದೆ ಎಂದು ಹೇಳಿ ದರು.

ಆ ನಿಟ್ಟಿನಲ್ಲಿ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರವನ್ನು ನಡೆಸಿ ಸಂಘದ ಅಭಿವೃದ್ದಿ ಕಾರಣ ಕರ್ತರಾಗಬೇಕು. ಮುಂಬರುವ ದಿನಗಳಲ್ಲಿ ಸಂಘಕ್ಕೆ ಒಂದು ಸ್ವಂತ ಕಟ್ಟಡ ಹೊಂದುವ ಗುರಿಯಿದೆ. ಅದ ರಂತೆ ನಿವೇಶನ ಅಥವಾ ಕಟ್ಟಡವನ್ನು ಕೆಲವೇ ದಿನಗಳಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.

ಇದೇ ವೇಳೆ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ೧೦ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ನಾಗಭೂಷಣ್, ನಿರ್ದೇಶಕರುಗಳಾದ ಬಿ.ಮಂಜಪ್ಪ , ಹೆಚ್.ಟಿ.ಮಂಜಪ್ಪ, ಎಸ್.ಡಿ.ಮಂಜಪ್ಪ, ಆರ್.ಶ್ರೀನಿವಾಸ್, ಹೆಚ್.ಎಲ್.ಪ್ರಸನ್ನಕುಮಾರ್, ಹೆಚ್.ಸುಬ್ರಹ್ಮ ಣ್ಯ, ಬಿ.ಎನ್.ಸಚಿನ್‌ಕುಮಾರ್, ಘನಲಿಂಗಮೂರ್ತಿ, ಸಿ.ಎಸ್.ಶಶಿಕುಮಾರ್, ಎಂ.ಸುಧಾ, ರೋವಿನಾ ಮೇರಿ ಅನಿತಾ, ಸೌರಭ್ ಆಸ್ಟಿಕರ್, ಟಿ.ಎಸ್.ಬಸವರಾಜ್, ಕಾರ್ಯದರ್ಶಿ ಮಧು, ಸಿಬ್ಬಂದಿ ವರ್ಗ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Annual Meeting of Chikmagalur Postal Department Employees’ Co-operative Society

 

About Author

Leave a Reply

Your email address will not be published. Required fields are marked *

You may have missed