September 19, 2024

MLAs are urged to solve the root problem of ex-servicemen: ಮಾಜಿ ಸೈನಿಕರ ಮೂಲ ಸಮಸ್ಯೆ ಬಗೆಹರಿಸಲು ಶಾಸಕರಿಗೆ ಒತ್ತಾಯ

0
ಮಾಜಿ ಸೈನಿಕರ ಸಂಘದಿಂದ ಶಾಸಕ ಹೆಚ್.ಡಿ. ತಮ್ಮಯ್ಯಗೆ ಸನ್ಮಾನ

ಮಾಜಿ ಸೈನಿಕರ ಸಂಘದಿಂದ ಶಾಸಕ ಹೆಚ್.ಡಿ. ತಮ್ಮಯ್ಯಗೆ ಸನ್ಮಾನ

ಚಿಕ್ಕಮಗಳೂರು: ಮಾಜಿ ಸೈನಿಕರ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಲು ನಿವೇಶನ ಹಾಗೂ ಸೈನಿಕರ ಕುಟುಂಬಕ್ಕೆ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಜಿಲ್ಲಾ ಮಾಜಿ ಸೈನಿಕರ ಸಂಘವು ಶಾಸಕ ಹೆಚ್.ಡಿ. ತಮ್ಮಯ್ಯ ಅವರನ್ನು ಬುಧವಾರ ಒತ್ತಾಯಿಸಿದರು.

ಈ ಸಂಬಂಧ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಮಾಜಿ ಸೈನಿಕರಿಗೆ ನಿವೇಶನ ಒದಗಿಸಿಕೊಡುವ ಮೂಲಕ ಸುಗಮ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್ ಮಾಜಿ ಸೈನಿಕರ ಸಂಘಕ್ಕೆ ತಾತ್ಕಾಲಿಕವಾಗಿ ತಾಲ್ಲೂಕು ಪಂಚಾಯಿತಿಯಲ್ಲಿ ಸಂಘದ ಕಚೇರಿ ಸ್ಥಾಪಿಸಲಾಗಿದೆ. ಆದರೆ ಇನ್ನಿತರೆ ಕಾರ್ಯಕ್ರಮ ನಡೆಸಲು ಸ್ಥಳಾವಕಾಶವಿಲ್ಲದ ಕಾರಣ ನೂತನ ಕಟ್ಟಡ ನಿರ್ಮಿಸಲು ನಿವೇಶನ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಮಾಜಿ ಸೈನಿಕರಿಗೆ ನಿವೃತ್ತಿ ನಂತರ ಕೃಷಿಗಾಗಿ ಸರ್ಕಾರಿ ಭೂಮಿಯನ್ನು ಗುರುತಿಸಿ ಭೂ ಕಂದಾ ಯ ಕಾಯ್ದೆಯಡಿ ಪ್ರತ್ಯೇಕವಾಗಿ ಕಾಯ್ದಿರಿಸಿ ನಂತರ ಅನುಗುಣವಾಗಿ ಆದ್ಯತೆ ಹಾಗೂ ಅರ್ಹತೆ ಮೇಲೆ ಭೂಮಿ ಯನ್ನು ಹಂಚಿಕೆ ಮಾಡಿ ಮಂಜೂರು ಮಾಡಲು ಸರ್ಕಾರವು ಆದೇಶ ನೀಡಲಾಗಿದೆ ಎಂದರು.

ಒಂದು ವೇಳೆ ಸರ್ಕಾರಿ ಭೂಮಿ ಲಭ್ಯವಾಗದಿದ್ದಲ್ಲಿ ಗ್ರಾಮಾಂತರ ೨೪೦೦ ಚದರಡಿ ಅಥವಾ ನಗರ ಪ್ರದೇಶದಲ್ಲಿ ೧೨೦೦ ಚದರಡಿ ನಿವೇಶನವನ್ನು ಪ್ರಸ್ತುತ ಜಾರಿಯಲ್ಲಿರುವ ವಸತಿ ಯೋಜನೆಗಳಲ್ಲಿ ಮಾಜಿ ಸೈನಿಕ ರಿಗೆ ಹಂಚಿಕೆ ಮಾಡಲು ಉಲ್ಲೇಖ ಅಧಿಸೂಚನೆಯಲಿ ತಿಳಿಸಲಾಗಿರುವ ಹಿನ್ನೆಲೆಯಲ್ಲಿ ಅದನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ನಿವೇಶನಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕರ ಕಚೇರಿಯಿಂದ ಹಾಸನದ ಸೈನಿಕರ ಕಲ್ಯಾಣ ಮತ್ತು ಪುನರ್ ವಸತಿ ಮಾಹಿತಿ ಇಲಾಖೆಗೆ ಕಳುಹಿಸಲಾಗಿದೆ. ಈ ಕಚೇರಿಯಿಂದ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ಮಾಹಿತಿ ರವಾನಿಸಲಾಗಿದ್ದು ಇದುವರೆಗೂ ನಮ್ಮ ಯಾವ ರೀತಿಯ ಸೂಚನೆಗಳನ್ನು ಬಂದಿರುವುದಿಲ್ಲ ಎಂದರು.

ಕೂಡಲೇ ಮಾಜಿ ಸೈನಿಕರ ಕುಟುಂಬಕ್ಕೆ ಸರ್ಕಾರಿ ಭೂಮಿ ಲಭ್ಯವಾಗದಿದ್ದಲ್ಲಿ ನಿವೇಶನ ಹಾಗೂ ಕಟ್ಟಡ ನಿರ್ಮಿಸಲು ಸೂಕ್ತ ಜಾಗ ಗುರುತಿಸಿಕೊಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ನೂತನ ಶಾಸಕರಾಗಿ ಆಯ್ಕೆಗೊಂಡ ಹೆಚ್.ಡಿ.ತಮ್ಮಯ ಅವರಿಗೆ ಮಾಜಿ ಸೈನಿಕರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹರಿಶ್, ಖಜಾಂಚಿ ಪಾಯಿಸ್, ಕಾರ್ಯದರ್ಶಿ ಗೋಪಾಲಕೃಷ್ಣ, ಸದಸ್ಯರು ಗಳಾದ ಹೆಚ್.ಎಂ.ಮಂಜುನಾಥಸ್ವಾಮಿ, ಪಿ.ನಾಗರಾಜ್, ಪ್ರಾನ್ಸಿಸ್ ಡಿಸೋಜಾ, ಫರ್ನಾಂಡೀಸ್, ವೇಣುಗೋ ಪಾಲ್, ರೇವಣ್ಣ, ರಾಮಚಂದ್ರಶೆಟ್ಟಿ, ರವಿಕುಮಾರ್ ಮತ್ತಿತರರು ಹಾಜರಿದ್ದರು.

MLAs are urged to solve the root problem of ex-servicemen

About Author

Leave a Reply

Your email address will not be published. Required fields are marked *

You may have missed