ಫಾರ್ಚೂನರ್ ಮತ್ತು ಇಂಡಿಕಾ ಕಾರುಗಳ ನಡುವೆ ಅಪಘಾತದಲ್ಲಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರ ಪುತ್ರ ಸೇರಿ ಹಲವರಿಗೆ ಗಾಯ
ಚಿಕ್ಕಮಗಳೂರು: ಹಾಸನ-ಬೇಲೂರು ಹೆದ್ದಾರಿಯ ಹಗರೆ ಸಮೀಪ ಫಾರ್ಚೂನರ್ ಮತ್ತು ಇಂಡಿಕಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚಿಕ್ಕಮಗಳೂರು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಪುತ್ರ ವಿಶಾಲ್ ಸುಜಯ್ ಕುಮಾರ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಸುಜಯ್ ಹಾಸನದಲ್ಲಿ ಪುಟ್ಬಾಲ್ ಪಂದ್ಯಾವಳಿಗೆಂದು ಚಿಕ್ಕಮಗಳೂರಿನ ತನ್ನ ಸಹ ಆಟಗಾರರೊಂದಿಗೆ ಫಾರ್ಚೂನರ್ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಹಾಸನ ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರು ಮತ್ತು ಫಾರ್ಚೂನರ್ ಕಾರುಗಳು ಹಗರೆ ಸಮೀಪ ಮುಖಾಮುಖಿ ಡಿಕ್ಕಿಯಾಗಿವೆ ಎಂದು ತಿಳಿದುಬಂದಿದೆ.
ಗಾಯಗೊಂಡರವರನ್ನು ಹಾಸನದ ಆಸ್ಪತ್ರೆಗೆ ಸೇರಿಸಲಾಗಿದೆ. ಹಗರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕು. ಎರಡು ಕಾರುಗಳ ಸ್ಥಿತಿಯನ್ನು ಕಂಡರೆ ಅದರಲ್ಲಿದ್ದವರು ಬದುಕಿಳಿದದ್ದೇ ಪವಾಡ ಎನ್ನುವಂತಾಗಿದೆ. ಎರಡು ಕಾರುಗಳಲ್ಲಿ ಏರ್ ಬ್ಯಾಗ್ ಓಪನ್ ಆಗಿರುವುದರಿಂದ ಒಳಗಿದ್ದವರು ಪ್ರಾಣಹಾನಿಯಿಂದ ಬಚಾವ್ ಆಗಿದ್ದಾರೆ ಎನ್ನಲಾಗಿದೆ.
Accident between Fortuner and Indica cars