September 19, 2024

ಗೃಹಜ್ಯೋತಿ 86 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ

0
ಇಂಧನ ಸಚಿವ ಕೆ.ಜೆ.ಜಾರ್ಜ್

ಇಂಧನ ಸಚಿವ ಕೆ.ಜೆ.ಜಾರ್ಜ್

ಚಿಕ್ಕಮಗಳೂರು: ಗೃಹಜ್ಯೋತಿ ಗೊಂದಲಗಳು ಬಗೆಹರಿದಿವೆ. ಸುಮಾರು ೮೫ ರಿಂದ ೮೬ ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಅವರು ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಪ್ರತಿ ದಿನ ಅರ್ಜಿಗಳು ಬರುತ್ತಿವೆ. ಮುಂದಿನ ತಿಂಗಳು ೨೫ ರ ವರೆಗೆ ಅರ್ಜಿ ಸಲ್ಲಿಸಬಹುದು ಒಂದೊಮ್ಮೆ ಅವರು ಅರ್ಜಿ ಸಲ್ಲಿಸದೇ ಇದ್ದಲ್ಲಿ ಒಂದು ತಿಂಗಳ ಬಿಲ್ ಕಟ್ಟಬೇಕಾಗುತ್ತದೆ. ಮತ್ತೆ ಅವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದಷ್ಟು ಬೇಗ ಎಲ್ಲರೂ ಅರ್ಜಿ ಸಲ್ಲಿಸಬೇಕು ಎಂದರು.

ಗೃಹ ಜ್ಯೋತಿ ಯೋಜನೆಯ ಜೂನ್ ಮಾಹೆಯ ವಿದ್ಯುತ್ ಬಿಲ್ ಜುಲೈಗೆ ಬರುತ್ತೆ ಅದನ್ನು ಕಟ್ಟಬೇಕಾಗುತ್ತದೆ. ಜುಲೈ ತಿಂಗಳಿನಿಂದ ಯೋಜನೆ ಅನ್ವಯವಾಗುತ್ತದೆ. ಅದು ಉಚಿತವಾಗಲಿದ್ದು ಆಗಸ್ಟ್‌ನಿಂದ ಅರ್ಹರು ಬಿಲ್ ಕಟ್ಟುವಂತಿರುವುದಿಲ್ಲ ಎಂದರು

ಸಧ್ಯಕ್ಕೆ ಅರ್ಜಿ ಸಲ್ಲಿಸಲು ಗಡುವನ್ನು ವಿಧಿಸಿಲ್ಲ. ಎರಡರಿಂದ ಮೂರು ತಿಂಗಳು ಸಮಯಾವಕಾಶ ಕೊಡುತ್ತೇವೆ. ಅಷ್ಟರಲ್ಲಿ ಯಾರೂ ಅರ್ಜಿ ಹಾಕದಿದ್ದರೆ ಅರ್ಜಿ ಪಡೆಯುವುದನ್ನು ನಿಲ್ಲಿಸಬೇಕಾಗುತ್ತದೆ. ಭಾಗ್ಯ ಜ್ಯೋತಿ ಯೋಜನೆಯ ಫಲಾನುಭವಿಗಳು ಸಹ ಗೃಹ ಜ್ಯೋತಿ ಲಾಭ ಪಡೆಯಲು ಅರ್ಜಿಯನ್ನು ಸಲ್ಲಿಸಲೇ ಬೇಕಾಗುತ್ತದೆ ಎಂದರು.

ಬಾಡಿಗೆ ಮನೆಯವರದ್ದು, ಹೊಸದಾಗಿ ಬಾಡಿಗೆ ಬಂದವರದ್ದು ಹೀಗೆ ಕೆಲವು ಗೊಂದಲಗಳು ನಮ್ಮ ಗಮನಕ್ಕೆ ಬಂದ ಕೂಡಲೇ ಸರಿಪಡಿಸುವ ಕೆಲಸವನ್ನು ಮಾಡಿದ್ದೇವೆ ಎಂದು ತಿಳಿಸಿದರು.

Griha Jyoti Yojana starts from today

About Author

Leave a Reply

Your email address will not be published. Required fields are marked *

You may have missed